ನವದೆಹಲಿ: ನೀವು ಆಗಾಗ್ಗೆ ಶತಾಬ್ದಿ, ತೇಜಸ್ ಮತ್ತು ಗತಿಮಾನ್ ಎಕ್ಸ್‌ಪ್ರೆಸ್‌ನಂತಹ ರೈಲುಗಳ ಚೇರ್‌ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದರೆ, ಈ ಸುದ್ದಿ ನಿಮಗೆ ಸಂತೋಷವನ್ನು ನೀಡುತ್ತದೆ. ಎಸಿ ಚೇರ್ ಕಾರ್ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಶುಲ್ಕವನ್ನು ಕಡಿಮೆ ಮಾಡಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಈ ನಿರ್ಧಾರದಡಿಯಲ್ಲಿ ಶತಾಬ್ದಿ, ತೇಜಸ್ ಮತ್ತು ಗತಿಮಾನ್ ಎಕ್ಸ್‌ಪ್ರೆಸ್‌ನಂತಹ ರೈಲುಗಳಲ್ಲಿ ದರವನ್ನು ಶೇಕಡಾ 25 ರಷ್ಟು ಕಡಿಮೆಗೊಳಿಸಲಾಗುತ್ತದೆ. ಈ ನಿರ್ಧಾರದ ನಂತರ ಎಸಿ ಚೇರ್ ಕಾರ್ ರೈಲುಗಳ ಟಿಕೆಟ್ ಮಾರಾಟ ಹೆಚ್ಚಾಗುತ್ತದೆ ಎಂದು ರೈಲ್ವೆ ಆಶಿಸಿದೆ. ಕಡಿಮೆ ಶುಲ್ಕದ ವಿಮಾನಯಾನ ಸಂಸ್ಥೆಗಳ ಹೊರತಾಗಿ, ದರಗಳು ಮತ್ತು ಸೌಲಭ್ಯಗಳಲ್ಲಿ ರಸ್ತೆಮಾರ್ಗಗಳಾದ ಬಸ್‌ ಹಾಗೂ ರೈಲ್ವೆಗೆ ಸವಾಲು ಎದುರಾಗಿದೆ.


COMMERCIAL BREAK
SCROLL TO CONTINUE READING

ಈ ರೈಲುಗಳಲ್ಲಿ ರಿಯಾಯಿತಿ ಅನ್ವಯಿಸುವುದಿಲ್ಲ:
ರೈಲ್ವೆ ತೆಗೆದುಕೊಂಡ ನಿರ್ಧಾರದ ಪ್ರಕಾರ, ಪ್ರತಿ ತಿಂಗಳು 50 ಪ್ರತಿಶತಕ್ಕಿಂತ ಕಡಿಮೆ ಬುಕಿಂಗ್ ಹೊಂದಿರುವ ರೈಲುಗಳ ಚೇರ್‌ಕಾರ್ ವರ್ಗದ ಮೂಲ ಶುಲ್ಕದಲ್ಲಿ 25 ಪ್ರತಿಶತದವರೆಗೆ ರಿಯಾಯಿತಿ ನೀಡಲಾಗುವುದು. ಎಸಿ ಚೇರ್ ಕಾರ್ ಮತ್ತು ಎಕ್ಸಿಕ್ಯುಟಿವ್ ಚೇರ್ ಕಾರ್ ಹೊಂದಿರುವ ಎಲ್ಲಾ ರೈಲುಗಳಲ್ಲಿ ಈ ವಿನಾಯಿತಿ ಅನ್ವಯವಾಗುತ್ತದೆ. ಆದಾಗ್ಯೂ, ಚೆನ್ನೈ ಸೆಂಟ್ರಲ್-ಮೈಸೂರು ಶತಾಬ್ಡಿ ಎಕ್ಸ್‌ಪ್ರೆಸ್, ಅಹಮದಾಬಾದ್-ಮುಂಬೈ ಶತಾಬ್ದಿ ಎಕ್ಸ್‌ಪ್ರೆಸ್ ಮತ್ತು ನ್ಯೂ ಜಲ್ಪೈಗುರಿ-ಹೌರಾ ಶತಾಬ್ಡಿ ಎಕ್ಸ್‌ಪ್ರೆಸ್‌ನಲ್ಲಿ ಈ ರಿಯಾಯಿತಿ ಅನ್ವಯಿಸುವುದಿಲ್ಲ. ಈ ರೈಲುಗಳಲ್ಲಿ ಅಸ್ತಿತ್ವದಲ್ಲಿರುವ ರಿಯಾಯಿತಿ ಯೋಜನೆ ಅನ್ವಯವಾಗಲಿದೆ ಎಂದು ರೈಲ್ವೆ ಇಲಾಖೆ ಮಾಹತಿ ನೀಡಿದೆ.


ಆರು ತಿಂಗಳವರೆಗೆ ಈ ರಿಯಾಯಿತಿ ಯೋಜನೆ ಅನ್ವಯ:
ಶತಾಬ್ಡಿ, ಗತಿಮಾನ್, ತೇಜಸ್, ಡಬಲ್ ಡೆಕ್ಕರ್, ಇಂಟರ್ಸಿಟಿ ಎಕ್ಸ್‌ಪ್ರೆಸ್ ಶುಲ್ಕದಲ್ಲಿ ರೈಲ್ವೆಗೆ 25 ಪ್ರತಿಶತದಷ್ಟು ರಿಯಾಯಿತಿ ನೀಡಲಾಗುವುದು. ಅದಕ್ಕಾಗಿ ಷರತ್ತು ಏನೆಂದರೆ, ಕೇವಲ 50 ಪ್ರತಿಶತದಷ್ಟು ಟಿಕೆಟ್‌ಗಳನ್ನು ಆಯಾ ರೈಲಿನಲ್ಲಿ ಕಾಯ್ದಿರಿಸಲಾಗಿದೆ. ಈ ನಿರ್ಧಾರವನ್ನು ತಿಂಗಳ ಅಂತ್ಯದೊಳಗೆ ಜಾರಿಗೆ ತರಲಾಗುವುದು. ಎಲ್ಲಾ ವಲಯ ರೈಲ್ವೆಗಳಿಗೆ ದರದಲ್ಲಿ ವಿನಾಯಿತಿ ನೀಡುವಂತೆ ಈ ಕುರಿತು ಸೂಚನೆಗಳನ್ನು ನೀಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ವಲಯ ರೈಲ್ವೆ ಆರು ತಿಂಗಳವರೆಗೆ ಶುಲ್ಕ ರಿಯಾಯಿತಿ ನೀಡುವ ಯೋಜನೆಯನ್ನು ಪ್ರಯೋಗಿಕವಾಗಿ ಜಾರಿಗೆ ತರಲಿದೆ.


ವಂದೇ ಭಾರತ ರೈಲಿನ ಶುಲ್ಕದಲ್ಲಿ ಕೂಡ ದೊರೆಯಲಿದೆ ರಿಯಾಯಿತಿ:
ಆರು ತಿಂಗಳ ನಂತರ ಈ ರಿಯಾಯಿತಿಯನ್ನು ವಿಸ್ತರಿಸಬಹುದು ಎಂದು ನಿರೀಕ್ಷಿಸಲಾಗಿದೆ. ರೈಲ್ವೆ ನೀಡುವ ಈ ರಿಯಾಯಿತಿಯನ್ನು ರೈಲಿನ ಆರಂಭದ ನಿಲ್ದಾಣದಿಂದ ಕೊನೆ ನಿಲ್ದಾಣದವರೆಗೆ ಅಥವಾ ಮಧ್ಯದ ಯಾವುದೇ ರೈಲು ನಿಲ್ದಾಣಕ್ಕೆ ನೀಡಬಹುದು. ಪ್ರಯಾಣದ ಯಾವ ಭಾಗವು ಟಿಕೆಟ್ ಬುಕಿಂಗ್ 50 ಪ್ರತಿಶತಕ್ಕಿಂತ ಕಡಿಮೆಯಾಗುತ್ತಿದೆ ಎಂಬುದರ ಮೇಲೆ ಇದು ಅವಲಂಬಿತವಾಗಿರುತ್ತದೆ. ಈ ವರ್ಷ ಪ್ರಾರಂಭವಾದ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೂ ಈ ರಿಯಾಯಿತಿ ಅನ್ವಯವಾಗಲಿದೆ. ಮೂಲ ದರದಲ್ಲಿ ಮಾತ್ರ ರಿಯಾಯಿತಿ ನೀಡಲಾಗುವುದು. ಜಿಎಸ್‌ಟಿ, ಮೀಸಲಾತಿ ಶುಲ್ಕ, ಸೂಪರ್‌ಫಾಸ್ಟ್ ಸುಂಕ ಮತ್ತು ಇತರ ಶುಲ್ಕಗಳಿಗೆ ಯಾವುದೇ ವಿನಾಯಿತಿ ಇರುವುದಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.