ನವದೆಹಲಿ: ನವದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದ ತಬಲೀಗಿ ಜಮಾತ್ ಕಾರ್ಯಕ್ರಮದ ಕುರಿತು ಸತತ ವಿವಿಧ ಸಂಗತಿಗಳು ಬಹಿರಂಗಗೂಳುತ್ತಲೇ ಇವೆ. ಸದ್ಯ ಸಿಕ್ಕ ಮಾಹಿತಿ ಪ್ರಕಾರ ಮಾರ್ಚ್ 28-29ರ ರಾತ್ರಿ ತಬಲೀಗಿ ಜಮಾತ್ ನ ಮೌಲಾನಾ ಸಾದ್, ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಅಜೀತ್ ಧೋಬಾಲ್ ಅವರನ್ನು ಸಂಪರ್ಕಿಸಿದ್ದರು. ಅಜೀತ್ ಧೋಬಾಲ್ ಭೇಟಿಯ ಬಳಿಕ ತಬಲೀತಿಗಿ ಜಮಾತ್ ಜನರನ್ನು ಖಾಲಿಗೊಳಿಸಲು ಅವರು ಒಪ್ಪಿಕೊಂಡಿದ್ದರು ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ತಮ್ಮ ಮಾತುಕತೆಯ ವೇಳೆ ಅಜೀತ್ ಧೋಬಾಲ್ ಸೆಂಟರ್ ನಲ್ಲಿರುವ ಎಲ್ಲರ ಕೊರೊನಾ ಟೆಸ್ಟ್ ಮಾಡಿಸಲು ಮೌಲಾನಾ ಅವರಿಗೆ ಸೂಚಿಸಿದ್ದರು. ತಬಲೀಗಿ ಜಮಾನ್ ಕಾರ್ಯಕ್ರಮದ ಸೆಂಟರ್ ನಲ್ಲಿ ಕೊರೊನಾ ವೈರಸ್ ಸೊಂಕಿತರು ಪತ್ತೆಯಾಗಿರುವುದರ ಕುರಿತು ಅಜೀತ್ ಧೋಬಾಲ್ ಹಾಗೂ ಗೃಹ ಸಚಿವ ಅಮಿತ್ ಷಾ ಭಾರಿ ಗಂಭೀರವಾಗಿದ್ದರು.


ಈ ಸಂಪೂರ್ಣ ಪ್ರಕರಣ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿದ್ರೆಯನ್ನೇ ಕೆಡಿಸಿದೆ. ಈ ಕಾರ್ಯಕ್ರಮದಿಂದ ಹೊರಬಂದ ಹಲವರು ದೇಶದ ವಿವಿಧ ರಾಜ್ಯಗಳಿಗೆ ಪ್ರಯಾಣ ಬೆಳೆಸಿದ್ದಾರೆ. ಮಹಾರಾಷ್ಟ್ರದ ಅಹ್ಮದ್ ನಗರ್ ಮೂಲದ ಸುಮಾರು 34  ಜನರು ಈ ಕಾರ್ಯಕ್ರಮದಲ್ಲಿ ಶಾಮೀಲಾಗಿದ್ದರು. ಮಂಗಳವಾರ ಈ ಎಲ್ಲರನ್ನು ಬಂಧಿಸಿದ್ದ ಪೊಲೀಸರು ಅವರನ್ನು ಆಸ್ಪತ್ರೆಗೆ ಭರ್ತಿ ಮಾಡಿದ್ದರು. ಈ ಎಲ್ಲರ ಬ್ಲಡ್ ಸ್ಯಾಂಪಲ್ ಗಳನ್ನು ಪಡೆದು ಕೊರೊನಾ ಟೆಸ್ಟ್ ಗಾಗಿ ಕಳುಹಿಸಲಾಗಿತ್ತು. ಅವರಲ್ಲಿ ಇಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ಧೃಢಪಟ್ಟಿದೆ.


ಅತ್ತ ನಿಜಾಮುದ್ದೆನ್ ನ ಆಲಮಿ ಮರ್ಕಜ್ ನಲ್ಲಿ 36 ಗಂಟೆಗಳ ಅಭಿಯಾನ ನಡೆಸಿರುವ ಪೊಲೀಸರು ಬೆಳಗಿನ ಜಾವ ಸುಮಾರು ನಾಲ್ಕು ಗಂಟೆಗೆ  ಇಡೀ ಕಟ್ಟಡವನ್ನು ಖಾಲಿಗೊಳಿಸಿದ್ದಾರೆ. ಈ ಕಟ್ಟಡದಿಂದ ಒಟ್ಟು 2361 ಜನರನ್ನು ಹೊರತೆಗೆಯಲಾಗಿದ್ದು, ಅವರಲ್ಲಿ ಒಟ್ಟು 617 ಮಂದಿಯನ್ನು ಆಸ್ಪತ್ರೆಗೆ ಭರ್ತಿ ಮಾಡಲಾಗಿದ್ದು ಇತರರನ್ನು ಕ್ವಾರಂಟೀನ್ ಗೆ ಕಳುಹಿಸಲಾಗಿದೆ. ಇದಕ್ಕೂ ಮೊದಲು ಈ ಮರ್ಕಜ್ ನಲ್ಲಿ ಕೇವಲ 1000 ಜನರು ವಾಸಿಸಿದ್ದಾರೆ ಎನ್ನಲಾಗಿತ್ತು. 


ತಬಲೀಗಿ ಜಮಾತ್ ನ ನಿಜಾಮುದ್ದೀನ್ ಮರ್ಕಜ್ ನಿಂದ ಮಂಗಳವಾರ ಒಟ್ಟು 1548 ಜನರನ್ನು ಖಾಲಿಗೊಳಿಸಲಾಗಿತ್ತು.  ಈ ಎಲ್ಲರನ್ನು DTC ಬಸ್ ಗಳ ಮೂಲಕ ದೆಹಲಿಯ ವಿವಿಧ ಆಸ್ಪತ್ರೆಗಳಿಗೆ ಮತ್ತು ಕ್ವಾರಂಟೀನ್ ಸೆಂಟರ್ ಗಳಿಗೆ ಸಾಗಿಸಲಾಗಿತ್ತು. ಸದ್ಯ ತಬಲೀಗಿ ಜಮಾತ್ ಗೆ ಸೇರಿದ ಸುಮಾರು 24 ಜನರಿಗೆ ಕೊರೊನಾ ಸೋಂಕು ತಗುಲಿರುವುದು ಈಗಾಗಲೇ ದೃಢಪಟ್ಟಿದೆ. ಅಷ್ಟೇ ಅಲ್ಲ ದೆಹಲಿಯಲ್ಲಿ ಸುಮಾರು 714 ಜನರಲ್ಲಿ ಕೊರೊನಾ ವೈರಸ್ ನ ಆರಂಭಿಕ ಲಕ್ಷಣಗಳು ಕಂಡುಬಂದಿದ್ದು, ಅವರನ್ನು ಆಸ್ಪತ್ರೆಗೆ ಭರ್ತಿ ಮಾಡಲಾಗಿದೆ. ಇವರಲ್ಲಿ 441 ಜನರು ತಬಲೀಗಿ ಜಮಾತ್ ಜೊತೆ ಸಂಪರ್ಕ ಹೊಂದಿದ್ದಾರೆ. ಒಟ್ಟಾರೆ ಹೇಳುವುದಾದರೆ ತಬಲೀಗಿ ಜಮಾತ್ ದೆಹಲಿಯಲ್ಲಿ ಕೊರೊನಾ ವೈರಸ್ ನ ಹಾಟ್ ಸ್ಪಾಟ್ ಆಗಿ ಮಾರ್ಪಟ್ಟಿದೆ.


ಈ ಜಮಾತ್ ಗೆ ಸಂಬಂಧಿಸಿದ ಒಟ್ಟು 8 ಜನರು ದೇಶದ ವಿವಿಧ ಭಾಗಗಳಲ್ಲಿ ಕೊರೊನಾ ವೈರಸ್ ನಿಂದ ಮೃತಪಟ್ಟಿದ್ದಾರೆ. ಇದುವರೆಗೆ ದೇಶಾದ್ಯಂತ ಈ ಜಮಾತ್ ಗೆ ಸಂಬಂಧಿಸಿದ ಒಟ್ಟು 84 ಜನರ ರಿಪೋರ್ಟ್ ಕೊರೊನಾ ಪಾಸಿಟಿವ್ ಬಂದಿದೆ. ಇವರಲ್ಲಿ ದೆಹಲಿಯಲ್ಲಿ ಒಟ್ಟು 24, ತೆಲಂಗಾಣದಲ್ಲಿ 24 ಹಾಗೂ ತಮಿಳುನಾಡಿನ 45 ಮಂದಿ ಶಾಮೀಲಾಗಿದ್ದಾರೆ.