ಮೆಹಬೂಬ ನಡೆ ವಿರೋಧಿಸಿ ಪಿಡಿಪಿ ತೊರೆದ ಮೂವರು ಹಿರಿಯ ನಾಯಕರು

ಪಿಡಿಪಿ ನಾಯಕರಾದ ಟಿಎಸ್ ಬಾಜ್ವಾ, ವೇದ ಮಹಾಜನ್ ಮತ್ತು ಹುಸೇನ್ ಎ ವಫಾ ತಮ್ಮ ಪಕ್ಷದ ನಾಯಕಿ ಮೆಹಬೂಬ ಮುಫ್ತಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.
ಜಮ್ಮು ಕಾಶ್ಮೀರ: ಜಮ್ಮು ಕಾಶ್ಮೀರದಲ್ಲಿ ಅರ್ಟಿಕಲ್ 370 ರದ್ದತಿ ತೀರ್ಮಾನ ವಿರೋಧಿಸಿ ಹೋರಾಟದ ದಾರಿ ಹಿಡಿದಿರುವ ಪಿಡಿಪಿ ನಾಯಕಿ ಮೆಹಬೂಬ ಮುಫ್ತಿ (Mehabooba Mufti) ಅವರಿಗೆ ಭಾರೀ ಹಿನ್ನಡೆಯಾಗಿದ್ದು ಮುಫ್ತಿ ಅವರ ರಾಜಕೀಯ ನಡೆಯನ್ನು ವಿರೋಧಿಸಿರುವ ಪಿಡಿಪಿ(PDP)ಯ ಮೂವರು ಹಿರಿಯ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ದೇಶವು ಸಂವಿಧಾನದ ಮೇಲೆ ನಡೆಯುತ್ತದೆ ಹೊರತು ಬಿಜೆಪಿಯ ಪ್ರಣಾಳಿಕೆ ಮೇಲೆ ಅಲ್ಲ -ಮೆಹಬೂಬಾ ಮುಫ್ತಿ
'ಜಮ್ಮು ಕಾಶ್ಮೀರದ ಧ್ವಜವನ್ನು ಹಾರಿಸಲು ಅವಕಾಶ ನೀಡದೇ ಹೋದರೆ, ರಾಷ್ಟ್ರಧ್ವಜವನ್ನೂ ಹಾರಿಸುವುದಿಲ್ಲ' ಎಂದು ಇತ್ತೀಚೆಗೆ ಮೆಹಬೂಬ ಮುಫ್ತಿ ಹೇಳಿದ್ದರು. ಇದು ದೇಶಾದ್ಯಂತ ವಿವಾದ ಸೃಷ್ಟಿಸಿತ್ತು. ಇತ್ತೀಚೆಗಷ್ಟೇ ಅವರು 14 ತಿಂಗಳ ಗೃಹಬಂಧನದಿಂದ ಹೊರಗೆ ಬಂದಿದ್ದರು. ಕಾಶ್ಮೀರದಲ್ಲಿ ಅರ್ಟಿಕಲ್ 370 ರದ್ದತಿ ನಿರ್ಧಾರ ಪ್ರಕಟವಾಗುತ್ತಿದ್ದಂತೆ, ಮೆಹಬೂಬ ಮುಫ್ತಿ ಅವರನ್ನು ಕೇಂದ್ರ ಸರಕಾರ ಗೃಹಬಂಧನದಲ್ಲಿ ಇರಿಸಿತ್ತು.