ನವದೆಹಲಿ: ನಗರದ ಸರಾಯ್ ಕೇಲ್ ಖಾನ್‌ನ ರಸ್ತೆಯೊಂದರಲ್ಲಿ 10 ಅಡಿ ಉದ್ದದ ಹೆಬ್ಬಾವನ್ನು ಕಂಡು ಜನರು ಹೌಹಾರಿದ ಘಟನೆ ನಡೆದಿದೆ. 


COMMERCIAL BREAK
SCROLL TO CONTINUE READING

ಮಂಗಳವಾರ ತಡರಾತ್ರಿ 12.30ರ ಸಮಯದಲ್ಲಿ ಸನ್ಲೈಟ್ ಕಾಲೋನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೆಬ್ಬಾವು ಇರುವ ಬಗ್ಗೆ ಮಾಹಿತಿ ದೊರೆಯಿತು. ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಗಿ, 10 ಅಡಿ ಉದ್ದದ ಹೆಬ್ಬಾವೊಂದು ರಸ್ತೆ ಮೇಲೆ ಹೋಗುತ್ತಿದ್ದುದನ್ನು ಜನರು ಗುಂಪುಗಟ್ಟಿ ವೀಕ್ಷಿಸುತ್ತಿರುವ ದೃಶ್ಯ ಕಂಡು ಬಂತು. ಬಳಿಕ ವನ್ಯಜೀವಿ ತಂಡದೊಂದಿಗೆ ಹಾವನ್ನು ರಕ್ಷಿಸಿ ಯಮುನಾ ದಡದಲ್ಲಿ ಬಿಡಲಾಯಿತು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. 



ಈ ಬಗ್ಗೆ ಪ್ರತಿಕ್ರಿಯಿಸಿದ ವನ್ಯಜೀವಿ ತಂಡ, ಈ ರಸ್ತೆಯು ಯಮುನಾ ಖಾದರ್ ತೀರದಲ್ಲಿರುವುದರಿಂದಾಗಿ ಕತ್ತಲೆಯಲ್ಲಿ ಹಾವು ತೆವಳುತ್ತಾ ಇಲ್ಲಿಗೆ ಬಂದಿದೆ. ಇದನ್ನು ಅಳತೆಮಾದಲಾಗಿದ್ದು, ಬರೋಬ್ಬರಿ 10 ಅಡಿ ಉದ್ದವಿದೆ. ಹಾವನ್ನು ರಕ್ಷಣೆ ಮಾಡಿದ ಬಳಿಕ ಯಮುನಾ ದಡದಲ್ಲಿ ಬಿಡಲಾಗಿದೆ ಎಂದು ತಿಳಿಸಿದರು.