ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಬರತೊಡಗಿದೆ. ಎಎಪಿ-ಬಿಜೆಪಿ ನಡುವೆ ಜಿದ್ದಾಜಿದ್ದಿ ಇರುವುದನ್ನು ಆರಂಭಿಕ ಪ್ರವೃತ್ತಿಯಲ್ಲಿ ನೋಡಲಾಗುತ್ತಿತ್ತು. ಇದೀಗ ಆಡಳಿತಾರೂಢ ಆಮ್ ಆದ್ಮಿ ಪಕ್ಷ(AAP) 45ಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ 15-18 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.


COMMERCIAL BREAK
SCROLL TO CONTINUE READING

ಏತನ್ಮಧ್ಯೆ, ಬಿಜೆಪಿ ದೆಹಲಿ ಅಧ್ಯಕ್ಷ ಮನೋಜ್ ತಿವಾರಿ ದೊಡ್ಡ ಹೇಳಿಕೆಯೊಂದನ್ನು ನೀಡಿದ್ದು, ದೆಹಲಿಯಲ್ಲಿ ಬಿಜೆಪಿ ಗೆದ್ದರೂ/ಸೋತರೂ ನನ್ನದೇ ಹೊಣೆ ಎಂದಿದ್ದಾರೆ. ಆದಾಗ್ಯೂ, ಅಂತಿಮ ಫಲಿತಾಂಶ ಹೊರಬೀಳಬೇಕಿದೆ.


ಇನ್ನೂ ಸಮಯವಿದೆ. ನಾವು ಭರವಸೆ ಹೊಂದಿದ್ದೇವೆ. ಫಲಿತಾಂಶ ಏನೇ ಇರಲಿ, ನಾನು ಬಿಜೆಪಿಯ ರಾಜ್ಯ ಘಟಕದ ಮುಖ್ಯಸ್ಥನಾಗಿ ಜವಾಬ್ದಾರನಾಗಿರುತ್ತೇನೆ ಎಂದು ಮನೋಜ್ ತಿವಾರಿ ಹೇಳಿದ್ದಾರೆ.



ವಾಸ್ತವವಾಗಿ, ದೆಹಲಿ ವಿಧಾನಸಭಾ ಚುನಾವಣೆಯ 2020 ರ ಮೊದಲ ಒಂದೂವರೆ ಗಂಟೆಗಳ ಪ್ರವೃತ್ತಿಗಳ ಪ್ರಕಾರ, ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಬಹುಮತ ಲಭಿಸಿದೆ. ಎಎಪಿ ಮೂರನೇ ಎರಡರಷ್ಟು ಬಹುಮತದಿಂದ ಮುನ್ನಡೆ ಸಾಧಿಸುತ್ತಿದೆ. ಬೆಳಿಗ್ಗೆ 10.20 ರ ಪ್ರವೃತ್ತಿಯ ಪ್ರಕಾರ, 70 ಸದಸ್ಯರ ವಿಧಾನಸಭೆಯಲ್ಲಿ 50 ಸ್ಥಾನಗಳಲ್ಲಿ ಎಎಪಿ ಮುಂದಿದ್ದರೆ, ಬಿಜೆಪಿ 20 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.