ಕಾನ್ಪುರ: Biggest Recovery In History - ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆ (UP Assembly Elections 2022) ಪ್ರಚಾರ ಜೋರಾಗಿ ನಡೆಯುತ್ತಿದೆ, ಇಂತಹ ಪರಿಸ್ಥಿತಿಯಲ್ಲಿ ಆದಾಯ ತೆರಿಗೆ ಇಲಾಖೆ (Income Tax Department) ಅಧಿಕಾರಿಗಳು ಸಾಕಷ್ಟು ಅಲರ್ಟ್ ಆಗಿದ್ದು, ಚುನಾವಣೆಯಲ್ಲಿ ಹಣ ದುರುಪಯೋಗ ತಡೆಯುವುದನ್ನು ಯತ್ನಿಸುತ್ತಿದ್ದಾರೆ. ಈ ಹಿನ್ನೆಲೆ  ಸಮಾಜವಾದಿ ಪಕ್ಷದ (Samajwadi Party) ಮುಖಂಡರ ಮನೆ ಮೇಲಿನ ದಾಳಿಯ ನಂತರ, ಗುರುವಾರ ಕಾನ್ಪುರದ ಸುಗಂಧ ದ್ರವ್ಯ ವ್ಯಾಪಾರಿಯ ಮನೆ ಮೇಲೆ ದಾಳಿ ನಡೆಸಲಾಗಿದೆ ಮತ್ತು ಅಲ್ಲಿ ಆಗಿದ್ದನ್ನು ನೋಡಿ ಆದಾಯ ತೆರಿಗೆ ಇಲಾಖೆ (Income Tax Department) ತಂಡವೂ ಬೆಚ್ಚಿಬಿದ್ದಿದೆ.


COMMERCIAL BREAK
SCROLL TO CONTINUE READING

150 ಕೋಟಿಗೂ ಹೆಚ್ಚು ಹಣ ಜಪ್ತಿ
ಕಾನ್ಪುರದ ಉದ್ಯಮಿ ಪಿಯೂಷ್ ಜೈನ್ (Businessman Piyush Jain) ಅವರ ಮನೆಯಿಂದ ಸುಮಾರು 150 ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಎಣಿಕೆ ಕಾರ್ಯ ಇದೀಗ ಮುಗಿದಿದೆ. ಅವರ ಮನೆಯಲ್ಲಿ ನೋಟುಗಳ ಬಂಡಲ್ ಗಳೇ ತುಂಬಿದ್ದು, ದಾಳಿಗೆ ಬಂದ ಅಧಿಕಾರಿಗಳು ನೋಟು ಎಣಿಸಲು ಸುಸ್ತಾಗಿ 15 ಯಂತ್ರಗಳಿಗೆ ಆರ್ಡರ್ ಮಾಡಿದ್ದಾರೆ. ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿಯ ಅಧ್ಯಕ್ಷ ವಿವೇಕ್ ಜೋಹ್ರಿ ಪ್ರಕಾರ, ದಾಳಿಯಲ್ಲಿ ಸುಮಾರು 150 ಕೋಟಿ ರೂ. ಅಧಿಕ ಹಣ ವಶಕ್ಕೆ ಪಡೆಯಲಾಗಿದೆ.


ಇಲಾಖೆಯ ಪ್ರಕಾರ, ಗೋಯಲ್ ಅವರ ಕಂಪನಿ ತ್ರಿಮೂರ್ತಿ ಫ್ರಾಗ್ರೆನ್ಸಸ್ (Trimurti Fragrances) ಸರಕುಪಟ್ಟಿ ಅಥವಾ ತೆರಿಗೆ ಪಾವತಿಯಿಲ್ಲದೆ ಕಾರ್ಯನಿರ್ವಹಿಸುತ್ತಿದೆ ಎಂಬ ಮಾಹಿತಿಯ ಮೇರೆಗೆ ಈ ದಾಳಿ ನಡೆಸಲಾಗಿದೆ. ಇದಾದ ಬಳಿಕ ಅವರಿಗೆ ಸಂಬಂಧಿಸಿದ 3 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, ಸುಮಾರು 150 ಕೋಟಿ ರೂ. ಜಪ್ತಿಯಾಗಿದೆ. ಸಿಬಿಐಸಿಯ ಇತಿಹಾಸದಲ್ಲಿ ಇದುವರೆಗಿನ ಅತಿ ದೊಡ್ಡ ರಿಕವರಿ (Biggest Recovery In History) ಇದಾಗಿದೆ ಎನ್ನಲಾಗಿದ್ದರೂ ಕೂಡ ಈ ಪ್ರಕರಣದಲ್ಲಿ ಇದುವರೆಗೆ ಯಾವುದೇ ಬಂಧನ ನಡೆಸಲಾಗಿಲ್ಲ. ಇಷ್ಟು ದೊಡ್ಡ ರಿಕವರಿಯ ನಂತರ ಇಲಾಖೆಗೆ ಹಣವನ್ನು ಸಾಗಿಸಲು 25 ಬಾಕ್ಸ್‌ಗಳನ್ನು ಆದೇಶಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಅಷ್ಟೇ ಅಲ್ಲ ನಂತರ ಅದನ್ನು ಲಾರಿಯಲ್ಲಿ ತುಂಬಿ ತೆಗೆದುಕೊಂಡು ಹೋಗಲಾಗಿದೆ.


ಹಣವನ್ನು ಟ್ರಕ್ ಮೂಲಕ ಸಾಗಿಸಲಾಗಿದೆ (ಚಿತ್ರ)
ಬಾನಂಗಳದಲ್ಲಿ 170 'ದುಷ್ಟ' ಗ್ರಹಗಳನ್ನು ಪತ್ತೆಹಚ್ಚಿದ ವಿಜ್ಞಾನಿಗಳು, ಅವುಗಳಿಂದ ಏನು ಅಪಾಯ?


ಅಧಿಕಾರಿಗಳು ಕಾರ್ಖಾನೆಯ ಹೊರಗೆ ನಾಲ್ಕು ಟ್ರಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಗಣಪತಿ ರೋಡ್ ಕೊರಿಯರ್‌ಗಳಿಂದ 200 ನಕಲಿ ಇನ್‌ವಾಯ್ಸ್‌ಗಳನ್ನು (Tax Evasion) ವಶಪಡಿಸಿಕೊಂಡಿದ್ದಾರೆ. ಸಾಗಿಸುತ್ತಿದ್ದವರಿಂದ 1.01 ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಕಾನ್ಪುರ ಅಲ್ಲದೆ ಕನೌಜ್‌ನಲ್ಲಿಯೂ ದಾಳಿ ನಡೆಸಲಾಗಿದೆ. ನಗದು ಎಣಿಕೆಗೆ ಸ್ಟೇಟ್ ಬ್ಯಾಂಕ್ ಅಧಿಕಾರಿಗಳ ನೆರವು ಪಡೆಯಲಾಗುತ್ತಿದೆ. ಇದರೊಂದಿಗೆ ಸಿಜಿಎಸ್‌ಟಿಯ ಸೆಕ್ಷನ್ 67ರ ಅಡಿಯಲ್ಲಿ ನಗದು ವಶಪಡಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. 


ಇದನ್ನೂ ಓದಿ-Corona New Variant - Omicronನಿಂದ ರಕ್ಷಣೆಗೆ ಉಪಾಯ ಹುಡುಕುತ್ತಿರುವಿರಾ? ಬಂದಿದೆ ಅದಕ್ಕಿಂತಲೂ ಅಪಾಯಕಾರಿ ಕೊರೊನಾ ರೂಪಾಂತರಿ


ಪಿಯೂಷ್ ಜೈನ್ ಯಾರು?
ಆನಂದಪುರಿಯ ನಿವಾಸಿ ಪಿಯೂಶ್ ಜೈನ್ ಮೂಲತಃ ಕನೌಜ್‌ನ ಚಿಪಟ್ಟಿ ನಿವಾಸಿಯಾಗಿದ್ದಾರೆ. ಅವರು ಕನೌಜ್‌ನಲ್ಲಿ ಮನೆ, ಸುಗಂಧ ದ್ರವ್ಯ ಕಾರ್ಖಾನೆ (Perfume Company), ಕೋಲ್ಡ್ ಸ್ಟೋರ್, ಪೆಟ್ರೋಲ್ ಪಂಪ್ ಅನ್ನು ಸಹ ಹೊಂದಿದ್ದಾರೆ. ಪಿಯೂಶ್ ಜೈನ್ ಮುಂಬೈನಲ್ಲಿ ಮನೆ, ಮುಖ್ಯ ಕಚೇರಿ ಮತ್ತು ಶೋರೂಮ್ ಅನ್ನು ಸಹ ಹೊಂದಿದ್ದಾರೆ. ಅವರ ಕಂಪನಿಗಳೂ ಮುಂಬೈನಲ್ಲಿಯೇ ನೋಂದಣಿಯಾಗಿವೆ. ಗುರುವಾರ ಬೆಳಗ್ಗೆ ಕಾನ್ಪುರ, ಮುಂಬೈ ಮತ್ತು ಗುಜರಾತ್‌ನಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. 


ಇದನ್ನೂ ಓದಿ-Debit Card, Credit Card ಹೊಂದಿದ ಗ್ರಾಹಕರಿಗೆ RBI ನಿಂದ ಮಹತ್ವದ ಮಾಹಿತಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.