ನವದೆಹಲಿ: ಪಾಕಿಸ್ತಾನ ಬಡ ದೇಶ ಎಂಬುದು ಜಗತ್ತಿನ ಎಲ್ಲರಿಗೂ ತಿಳಿದ ವಿಚಾರ. ಈ ಬಗ್ಗೆ ಸ್ವತಃ ಪಾಕಿಸ್ತಾನದಿಂದ (Pakistan tyranny) ಭಾರತಕ್ಕೆ ಬಂದಿರುವ ರಜಿಯಾ ಬೀಬಿ ಝೀ ನ್ಯೂಸ್‌ಗೆ (Zee News) ಸಾಕ್ಷಿ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಭಾರತಕ್ಕೆ ಬಂದ ನಂತರ ರಜಿಯಾ ಬೀಬಿ ಅವರು ಪಿಒಕೆಯಲ್ಲಿ ವಾಸಿಸುತ್ತಿದ್ದಾಗ, ತನ್ನ ಜೀವನವನ್ನು ನಡೆಸಲು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.


ಭಯೋತ್ಪಾದನೆಯ ಹೆಸರಿನಲ್ಲಿ ಪಾಕಿಸ್ತಾನವು (Pakistan) ಯುವಕರನ್ನು ಹೇಗೆ ದಾರಿ ತಪ್ಪಿಸುತ್ತಿದೆ ಮತ್ತು ಅವರ ಸಾವಿನ ನಂತರ ಕುಟುಂಬಗಳಿಗೆ ಹೇಗೆ ಬೆನ್ನು ತಿರುಗಿಸುತ್ತದೆ ಎಂದು ಸ್ವತಃ ಭಯೋತ್ಪಾದಕನ ಪತ್ನಿ ಸಾಕ್ಷಿ ಹೇಳಿದ್ದಾರೆ. 


ಪಿಒಕೆಯಿಂದ (pok) ಭಾರತಕ್ಕೆ ಬಂದ ಭಯೋತ್ಪಾದಕನ ಹಿಜ್ಬುಲ್ ಉಗ್ರನ ಪತ್ನಿ ರಜಿಯಾ ಬೀಬಿ (Razia bibi), ತನ್ನ ಪತಿಯ ಸಾವಿನ ನಂತರ ಪಾಕಿಸ್ತಾನದಲ್ಲಿ ಯಾರೂ ತನ್ನ ಬಗ್ಗೆ ಕೇಳಲಿಲ್ಲ ಎಂದು ಹೇಳುತ್ತಾರೆ. ಆ ಭಯೋತ್ಪಾದಕ ಸಂಘಟನೆಗಳಿಗೂ ರಜಿಯಾ ಹಿಡಿಶಾಪ ಹಾಕುತ್ತಿದ್ದಾರೆ.  


ರಜಿಯಾ ಈಗ ಭಾರತದಿಂದ ಸಹಾಯವನ್ನು ನಿರೀಕ್ಷಿಸುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಯುವಕರು ಭಯೋತ್ಪಾದನೆಯ ಹಾದಿ ತೊರೆಯುವಂತೆಯೂ ರಜಿಯಾ ಮನವಿ ಮಾಡಿದ್ದಾರೆ. ರಜಿಯಾ ಅವರ ಪತಿ ಹಿಜ್ಬುಲ್ ಭಯೋತ್ಪಾದಕರಾಗಿದ್ದರು ಮತ್ತು 2018 ರಲ್ಲಿ ಸೇನೆಯು ಅವರನ್ನು ಎನ್‌ಕೌಂಟರ್‌ನಲ್ಲಿ ಕೊಂದಿತ್ತು. 


ಇದನ್ನೂ ಓದಿ: Sai Pallavi: ಬುರ್ಖಾ ಧರಿಸಿ, ಥಿಯೇಟರ್‌ನಲ್ಲಿ ತಮ್ಮ ಸಿನಿಮಾ ವೀಕ್ಷಿಸಿದ ನಟಿ ಸಾಯಿ ಪಲ್ಲವಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.