ನವದೆಹಲಿ: ಗುಟ್ಖಾ ಮತ್ತು ತಂಬಾಕು ಮಾರಾಟ ಮತ್ತು ಸೇವನೆಯ ವಿರುದ್ಧ ಹೋರಾಡುವ ಪ್ರಯತ್ನದಲ್ಲಿ ಬಿಹಾರ ಸರ್ಕಾರ ಶುಕ್ರವಾರ ಪ್ಯಾನ್ ಮಸಾಲಾ ಮೇಲೆ ರಾಜ್ಯವ್ಯಾಪಿ ನಿಷೇಧ ಹೇರಿದೆ.


COMMERCIAL BREAK
SCROLL TO CONTINUE READING

ಪ್ಯಾನ್ ಮಸಾಲಾ ನಿಷೇಧವನ್ನು ಅದರ ಮಾರಾಟ, ಸಂಗ್ರಹಣೆ, ಸಾರಿಗೆ ಮತ್ತು ಬಳಕೆಯ ಮೇಲೆ ವಿಧಿಸಲಾಗಿದೆ. ರಾಜ್ಯ ಸರ್ಕಾರದ ಕ್ರಮದ ಬಗ್ಗೆ ತಿಳಿಸಿದ ಬಿಹಾರದ ಮುಖ್ಯ ಕಾರ್ಯದರ್ಶಿ ದೀಪಕ್ ಕುಮಾರ್, ನಿಷೇಧವನ್ನು ಉಲ್ಲಂಘಿಸಿದ ಯಾರಾದರೂ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ ಮತ್ತು ದಂಡವನ್ನು ಸಹ ಪಾವತಿಸಬೇಕಾಗುತ್ತದೆ ಎಂದು ಹೇಳಿದರು. 


ಪ್ಯಾನ್ ಮಸಾಲಾದ ಮಾರಾಟ, ಸಂಗ್ರಹಣೆ, ಸಾರಿಗೆ ಮತ್ತು ಬಳಕೆಯನ್ನು ಪರಿಶೀಲಿಸುವಲ್ಲಿ ರಾಜ್ಯ ಸರ್ಕಾರವು ಉತ್ತಮ ಮೇಲ್ವಿಚಾರಣೆ ಯೋಜನೆಯನ್ನು ಹೊಂದಿದೆ ಎಂದು ಅವರು ಹೇಳಿದರು. ರಾಜ್ಯದಲ್ಲಿ ನಿಷೇಧ ಕೈಗೊಳ್ಳಲು ಪ್ರಮುಖ ಕಾರಣ ಅನೇಕ ಪ್ಯಾನ್ ಮಸಾಲಾ ಪ್ಯಾಕೆಟ್‌ಗಳಲ್ಲಿ ಮೆಗ್ನೀಸಿಯಮ್ ಕಾರ್ಬೋನೇಟ್ ಇರುವುದು ವರದಿಯಾಗಿದೆ. ಮೆಗ್ನೀಸಿಯಮ್ ಕಾರ್ಬೊನೇಟ್ ಮಾನವರಲ್ಲಿ ಹೃದಯ ಸಂಬಂಧಿತ ಸಮಸ್ಯೆಗಳನ್ನು ಸೃಷ್ಟಿಸುತ್ತದೆ.


ಪ್ಯಾನ್ ಮಸಾಲಾದ  ಸೇವನೆಯಿಂದಾಗುವ ದುಷ್ಪರಿಣಾಮವನ್ನು ತಡೆಗಟ್ಟಲು ಇದನ್ನು ನಿಷೇಧಿಸಲು ನಿರ್ಧರಿಸಿದೆ ಎಂದು ಬಿಹಾರ ಸರ್ಕಾರ ಹೇಳಿದೆ. ಆದರೆ ಈ ನಿರ್ಧಾರದದಿಂದಾಗಿ ತಂಬಾಕು ಬೆಳೆಯುವ ರೈತರ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಮತ್ತು ಅವರ ಹಿತಾಸಕ್ತಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಕುಮಾರ್ ಹೇಳಿದರು. ಈ ನಿಷೇಧವು 12 ತಿಂಗಳ ಅವಧಿಗೆ ಜಾರಿಯಲ್ಲಿರುತ್ತದೆ.