ಪ್ರಧಾನಿ ಮೋದಿಗೆ ಪತ್ರ ಬರೆದ ಬಿಹಾರ್ ಸಿಎಂ ನಿತೀಶ್ ಕುಮಾರ್, ಅವರ ಬೇಡಿಕೆ ಏನು ಗೊತ್ತಾ!
ಗೋವಾ ವಿಮಾನನಿಲ್ದಾಣಕ್ಕೆ ರಾಮ್ ಮನೋಹರ್ ಲೋಹಿಯಾ ಹೆಸರಿಡಬೇಕೆಂದೂ ಸಹ ನಿತೀಶ್ ಕುಮಾರ್ ಒತ್ತಾಯಿಸಿದ್ದಾರೆ.
ಪಾಟ್ನಾ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಪ್ರಸ್ತಾವಿತ ಸಭೆಯಲ್ಲಿ ಭಾಗಿಯಾಗುವ ಮೊದಲೇ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪತ್ರವೊಂದನ್ನು ಬರೆದಿದ್ದಾರೆ. ಪತ್ರದಲ್ಲಿ ಸಮಾಜವಾದಿ ನಾಯಕರಾಗಿದ್ದ ಡಾ. ರಾಮ ಮನೋಹರ್ ಲೋಹಿಯಾಗೆ ಭಾರತ್ ರತ್ನ ನೀಡಬೇಕೆಂದು ಬೇಡಿಕೆ ಇಟ್ಟಿರುವುದಲ್ಲದೆ, ಅವರ ಹೆಸರನ್ನು ಗೋವಾ ವಿಮಾನನಿಲ್ದಾಣಕ್ಕೆ ಇಡಬೇಕು ಎಂದೂ ಸಹ ಒತ್ತಾಯಿಸಿದ್ದಾರೆ. ಗಮನಾರ್ಹವಾಗಿ, ಮೇ 2 ರಂದು ಪ್ರಧಾನಿ ಮೋದಿ ಹಾಗೂ ಬಿಹಾರ್ ಸಿಎಂ ನಿತೀಶ್ ಕುಮಾರ್ ನಡುವೆ ಸಭೆ ನಡೆಯಲಿದೆ.
ತಮ್ಮ ಪತ್ರದಲ್ಲಿ, ಎಂಟು ಅಂಶಗಳೊಂದಿಗೆ ಲೋಹಿಯಾ ಅವರು ನೀಡಿರುವ ಕೊಡುಗೆಗಳನ್ನು ಉಲ್ಲೇಖಿಸಿರುವ ನಿತೀಶ್ ಕುಮಾರ್, ಪೋರ್ಚುಗೀಸ್ನಿಂದ ಗೋವಾದ ವಿಮೋಚನೆಗೆ ಲೋಹಿಯಾ ಅವರ ಕೊಡುಗೆ ಸಹ ಇದೆ. ಹಾಗಾಗಿ, ಅವರ ಹೆಸರನ್ನು ಗೋವಾ ವಿಮಾನನಿಲ್ದಾಣಕ್ಕೆ ಇಡಬೇಕು ಎಂದು ನಿತೀಶ್ ಕುಮಾರ್ ಒತ್ತಾಯಿಸಿದ್ದಾರೆ. ಈ ಪತ್ರದಲ್ಲಿ, ಅಕ್ಟೋಬರ್ 12 ರಂದು ಡಾ.ಲೋಹಿಯಾ ಜನ್ಮ ವಾರ್ಷಿಕೋತ್ಸವ ಅದೇ ದಿನ ಡಾ.ಲೋಹಿಯಾಗೆ ಭಾರತ್ ರತ್ನವನ್ನು ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಸ್ವಚ್ಚತೆಯನ್ನು ಉಲ್ಲೇಖಿಸಿ, ಬರೆದಿರುವ ಸಿಎಂ ನಿತೀಶ್ ಕುಮಾರ್, ಡಾ. ಲೋಹಿಯಾ ಆ ಸಮಯದಲ್ಲೇ ಸರ್ಕಾರದೊಂದಿಗೆ ಶೌಚಾಲಯಗಳಿಗಾಗಿ ಬೇಡಿಕೆ ಇಟ್ಟಿದ್ದರು. ತೆರೆದ ಬಯಲಿನಲ್ಲಿ ಮಲವಿಸರ್ಜನೆಯು ದೇಶದ ಮಹಿಳೆಯರಿಗೆ ಮುಜುಗರದ ಮತ್ತು ಅವಮಾನಕರವಾಗಿರುವುದು ಮಾತ್ರವಲ್ಲ, ಅವರ ಆರೋಗ್ಯದ ಮೇಲೆ ಸಹಾ ಪರಿಣಾಮ ಬೀರುತ್ತದೆ ಎಂದು ಡಾ. ಲೋಹಿಯಾ ಹೇಳಿದ್ದಾರೆ. ಪಂಡಿತ್ ಜವಹರ್ ಲಾಲ್ ನೆಹರೂ ಅವರನ್ನು ವಿರೋಧಿಸುತ್ತಿದ್ದ ಡಾ. ಲೋಹಿಯಾ, ನೆಹರು ಅವರ ಎಲ್ಲಾ ಹಳ್ಳಿಗಳಲ್ಲಿ ಮಹಿಳೆಯರಿಗೆ ಶೌಚಾಲಯಗಳನ್ನು ನಿರ್ಮಿಸಿದ್ದೆ ಆದರೆ ನಾನು ಅವರನ್ನು ವಿರೋಧಿಸುವುದನ್ನು ನಿಲ್ಲಿಸುತ್ತೇನೆ ಎಂದಿದ್ದರು ಎಂಬುದನ್ನು ನಿತೀಶ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಡಾ. ಲೋಹಿಯಾ ದೂರದೃಷ್ಟಿ ಹೊಂದಿದ್ದರು. ಅವರು ಪ್ರತಿ ಅಡುಗೆ ಮನೆಯಲ್ಲಿ ಹೊಗೆ ಮುಕ್ತ ಸ್ಟವ್ ತಂತ್ರವನ್ನು ಪರಿವರ್ತಿಸುವ ಕಲ್ಪನೆ ಹೊಂದಿದ್ದರು ಎಂದು ಸಿಎಂ ತಮ್ಮ ಪತ್ರದಲ್ಲಿ ತಿಲಿಸಿರುವುದಲ್ಲದೆ, ಸ್ವಾತಂತ್ರ್ಯ ಚಳವಳಿಯಲ್ಲಿ ಲೋಹಿಯಾ ನೀಡಿದ ಕೊಡುಗೆ ಕೂಡ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.