ನವದೆಹಲಿ: ಬಿಹಾರದ ಬೆಗುಸರಾಯಿನಲ್ಲಿ  ನಾಲ್ವರು ಕಾಲೇಜ್ ವಿದ್ಯಾರ್ಥಿಗಳಿಗೆ ಅಸಹಜ ಸೆಕ್ಸ್ ಮಾಡಲು ಒತ್ತಾಯಿಸಿ ಥಳಿಸಿದ ಆಘಾತಕಾರಿ ಘಟನೆ ನಡೆದಿದೆ.ಈಗ ಈ ವಿಡಿಯೋ ವೈರಲ್ ಆಗಿದ್ದು ಪೊಲೀಸರು ಈಗ ಈ ಘಟನೆಗೆ ಸಂಬಂಧಪಟ್ಟವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ಸುದ್ದಿ ಮೂಲಗಳ ಪ್ರಕಾರ ಈ ಘಟನೆಯು ಅಕ್ಟೋಬರ್ 24 ರಂದು ಸಂಭವಿಸಿದ್ದು, ಆರೋಪಿಗಳು ನಾಲ್ವರು ವಿದ್ಯಾರ್ಥಿಗಳನ್ನು ಕುಶ್ವಾಹಾ ಹಾಸ್ಟೆಲ್ ನಿಂದ ಕಿಡ್ನ್ಯಾಪ್ ಮಾಡಿ ಅವರಿಗೆ ಅಸಹಜ ಸೆಕ್ಸ್ ಮಾಡಲು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.ಆದರೆ ಇದಕ್ಕೆ ವಿದ್ಯಾರ್ಥಿಗಳು ನಿರಾಕರಿಸಿದಾಗ ಅವರನ್ನು ಮನಬಂದಂತೆ ಥಳಿಸಲಾಗಿದೆ ಎನ್ನಲಾಗಿದೆ.


ವಿದ್ಯಾರ್ಥಿಗಳು ಹೇಳುವಂತೆ ಆರೋಪಿಯ ಮಾಲಿಕತ್ವದ ಪ್ಲಾಂಟ್ ನಿಂದ ನೀರನ್ನು ಕೊಂಡುಕೊಳ್ಳದ ಕಾರಣ ಅವರು ಈ ಕೃತ್ಯ ಮಾಡುವಂತೆ ಒತ್ತಾಯಿಸಲಾಗಿದೆ ಎಂದು ತಿಳಿಸಿದ್ದಾರೆ. ಆರೋಪಿಗಳು ಈ ಘಟನೆಯನ್ನು ರಿಕಾರ್ಡ್ ಮಾಡಿದ್ದು ವಿದ್ಯಾರ್ಥಿಗಳು ದೂರು ನೀಡಲು ಮುಂದಾಗಿದ್ದೆ ಆದಲ್ಲಿ ಈ ವಿಡಿಯೋವನ್ನು ವೈರಲ್ ಮಾಡಲಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.


ಪೋಲಿಸ್ ಡಿಎಸ್ಪಿ ಮನೋಜ್ ತಿವಾರಿ  ಹೇಳುವಂತೆ "ಸಂತ್ರಸ್ತ ವಿದ್ಯಾರ್ಥಿಗಳು ನೀರಿನ ವಿಚಾರವಾಗಿ ಜಗಳ ಮಾಡುತ್ತಿದ್ದರು.ಮತ್ತು ಅವರು ತಮ್ಮನ್ನು ಅಪಹರಿಸಿದವರ ಮೇಲೆಯೂ ಕೆಲವು ಆರೋಪಗಳನ್ನು ಮಾಡಿದ್ದಾರೆ ಈಗ ಈ ವಿಷಯವನ್ನು ವಿಚಾರಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.