ನವದೆಹಲಿ: ಆಡಳಿತಾರೂಢ ಎನ್‌ಡಿಎ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಮರಳುವ ಸಾಧ್ಯತೆಗಳು ದಟ್ಟವಾಗಿದೆ. ಆದರೆ ಅದರಲ್ಲಿ ಒಂದು ಟ್ವಿಸ್ಟ್ ಕೂಡ ಇದೆ. ಈ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿದೆ. ಇದುವರೆಗಿನ ಪ್ರವೃತ್ತಿಗಳ ಪ್ರಕಾರ ಬಿಜೆಪಿ, ಜೆಡಿಯು ನೇತೃತ್ವದ ಎನ್‌ಡಿಎ (NDA) 130 ಸ್ಥಾನಗಳೊಂದಿಗೆ 123ರ ಮ್ಯಾಜಿಕ್ ನಂಬರ್ ದಾಟಿದೆ. ಇದರಲ್ಲಿ ಕೂಡ ದೊಡ್ಡ ವಿಷಯವೆಂದರೆ ಬಿಹಾರದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳಲ್ಲಿ ಮುಂದಿದೆ.


COMMERCIAL BREAK
SCROLL TO CONTINUE READING

ಕಳೆದ ವಿಧಾನಸಭಾ ಚುನಾವಣೆಯಲ್ಲಿ 53 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ (BJP) ಈ ಬಾರಿ 74 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಜೆಡಿಯು (JDU) 48 ಸ್ಥಾನಗಳಲ್ಲಿ ಮತ್ತು ವಿಐಪಿ 8 ಸ್ಥಾನಗಳಲ್ಲಿ ಮುಂಚೂಣಿಯಲ್ಲಿದೆ. ಮತ್ತೊಂದೆಡೆ ವಿರೋಧ ಪಕ್ಷದ ಮಹಾ ಮೈತ್ರಿಕೂಟದ ಬಗ್ಗೆ ನೋಡುವುದಾದರೆ ಆರ್ಜೆಡಿ 60 ಮತ್ತು ಕಾಂಗ್ರೆಸ್ 21 ಸ್ಥಾನಗಳಲ್ಲಿ ಮುಂದಿದೆ. ಅಂದರೆ ಈ ಬಾರಿ ಬಿಜೆಪಿ ಚುನಾವಣಾ ಸ್ಪರ್ಧೆಯಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿದೆ ಎಂಬುದು ಈ ಪ್ರವೃತ್ತಿಗಳಿಂದ ಸ್ಪಷ್ಟವಾಗಿದೆ.


Bihar Election Result 2020: ಫಲಿತಾಂಶಕ್ಕೂ ಮೊದಲು BJP-RJD ನಾಯಕರ ಪ್ರತಿಕ್ರಿಯೆ, ಯಾರು? ಏನು ಹೇಳಿದರು?


ಪ್ರತಿಷ್ಠಿತ ಚುನಾವಣೆಯಲ್ಲಿ ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮುವುದರೊಂದಿಗೆ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಪ್ರಶ್ನೆಯೂ ಉದ್ಬವಿಸಲಾರಂಭಿಸಿದೆ. ವಾಸ್ತವವಾಗಿ ಚುನಾವಣೆಗೆ ಮೊದಲೇ ನಿತೀಶ್ ಕುಮಾರ್ (Nitish Kumar) ಅವರನ್ನು ಎನ್‌ಡಿಎ ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಿದೆ. ಆದರೆ ಈಗ ಜೆಡಿಯುಗಿಂತ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ದೊರೆತಿರುವುದರಿಂದ CM ಅಭ್ಯರ್ಥಿ ಕೂಡ ಬದಲಾಗಬಹುದು ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಅಷ್ಟೇ ಅಲ್ಲ ಬಿಜೆಪಿಯಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಬೇಡಿಕೆ ಹೆಚ್ಚಾಗಬಹುದು ಎಂಬ ಊಹಾಪೋಹಗಳು ಕೇಳಿಬರುತ್ತಿವೆ.


Bihar Election Results 2020: ಬಿಹಾರದ ಫಲಿತಾಂಶ ಯುಎಸ್‌ನಂತೆಯೇ ಇರುತ್ತದೆ- ಶಿವಸೇನೆ


ಜೆಡಿಯು ಕೂಡ ಇದನ್ನು ಅರ್ಥಮಾಡಿಕೊಂಡಿದೆ. ಆದ್ದರಿಂದ ಆಡಳಿತರೂಢ ಮೈತ್ರಿ ಪಾಳಯದಲ್ಲಿ ಸ್ಪಷ್ಟ ಬಹುಮತದ ಸಾಧ್ಯತೆಯ ಹೊರತಾಗಿಯೂ, ಎರಡೂ ಪಕ್ಷಗಳ ವಕ್ತಾರರನ್ನು ಹೊರತುಪಡಿಸಿ ಪಕ್ಷದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಒಂದೊಮ್ಮೆ ಬಿಜೆಪಿ ನಾಯಕರು ಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ ಎತ್ತಿದರೆ ಅವರ ಬೇಡಿಕೆಯನ್ನು ನಿರ್ಲಕ್ಷಿಸುವುದು ಪಕ್ಷದ ಹೈಕಮಾಂಡ್ ಗೆ ಅಷ್ಟು ಸುಲಭವಲ್ಲ.