ನವದೆಹಲಿ: ಚಿರಾಗ್ ಪಾಸ್ವಾನ್ ಬಿಹಾರದಲ್ಲಿ ಹೆಣದ ರಣತಂತ್ರದಿಂದಾಗಿ ನಿತೀಶ್ ಕುಮಾರ್ ಪಕ್ಷವು ಈಗ ಮೂರನೇ ಸ್ಥಾನಕ್ಕೆ ಇಳಿದಿದೆ. ಒಂದು ವೇಳೆ ನಿತಿಶ್ ಕುಮಾರ್ ಅವರನ್ನು ತೀವ್ರವಾಗಿ ವಿರೋಧ ವ್ಯಕ್ತಪಡಿಸದಿದ್ದಲ್ಲಿ ಜೆಡಿಯು ಇನ್ನೂ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇತ್ತು.


ಎನ್‌ಡಿಎ ಗೆದ್ದರೆ, ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಉಳಿಯುತ್ತಾರೆಯೇ? ಇಲ್ಲಿದೆ ಬಿಜೆಪಿ ಉತ್ತರ


COMMERCIAL BREAK
SCROLL TO CONTINUE READING

ಈ ಬಾರಿ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿಗೆ ಅಗ್ರಸ್ಥಾನ ದೊರೆತಿದ್ದರೆ, ತೇಜಸ್ವಿ ಯಾದವ್ ನೇತೃತ್ವದ ಆರ್ಜೆಡಿ ಪಕ್ಷವು ಎರಡನೇ ಸ್ಥಾನ ಪಡೆದಿದೆ, ಇನ್ನೂ ಮೂರನೇ ಸ್ಥಾನಕ್ಕೆ ನಿತೀಶ್ ಕುಮಾರ್ ಅವರ ಜೆಡಿಯು ತೃಪ್ತಿಪಟ್ಟಿದೆ.ಆ ಮೂಲಕ ನಿತೀಶ್ ಕುಮಾರ್ ಅವರ ಕಿರಿಯ ಪಾಲುದಾರರನ್ನಾಗಿ ಮಾಡುವ ಗುರಿಯನ್ನು ಬಿಜೆಪಿ ಸಾಧಿಸಿದೆ ಎಂದು ತೋರುತ್ತದೆ, ಇದು ಚಿರಾಗ್ ಪಾಸ್ವಾನ್ ಅವರ ನಡೆಯ ಗುರಿಯಾಗಿದೆ.


ಈ ತಂತ್ರವನ್ನೇ ಬಿಜೆಪಿ ಕೂಡ ಚುನಾವಣಾ ಉದ್ದಕ್ಕೂ ಅನುಸರಿಸುತ್ತಾ ಬಂದಿತು, ಚಿರಾಗ್ ಪಾಸ್ವಾನ್ ಅವರು ಸಿಎಂ ನಿತೀಶ್ ಕುಮಾರ್ ಅವರಿಗೆ ನೇರವಾಗಿ ವಾಗ್ದಾಳಿ ಮಾಡಿದ್ದಲ್ಲದೆ ಏಕಾಂಗಿಯಾಗಿ ಸ್ಪರ್ಧಿಸುವ ಮೂಲಕ ಜೆಡಿಯು ಮತಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗುವ ಮೂಲಕ ಬಿಜೆಪಿಗೆ ಅನುಕೂಲ ಮಾಡಿದರು.ಈಗ ಈ ತಂತ್ರಗಾರಿಕೆ ಯಶಸ್ವಿಯಾಗಿರುವುದರಿಂದಲೇ ಬಿಜೆಪಿ ಅಗ್ರಸ್ತಾನಕ್ಕೆರಲು ಸಾಧ್ಯವಾಗಿದೆ ಮತ್ತು ಜೆಡಿಯುನ ಸ್ಥಾನಗಳಲ್ಲಿಯೂ ಕೂಡ ಕಡಿತವಾಗಿದೆ.


Bihar Election Results 2020: ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ, ಯಾರಾಗ್ತಾರೆ CM? 


ಆ ಮೂಲಕ ಇದೆ ಮೊದಲ ಬಾರಿಗೆ ಬಿಜೆಪಿ ಜೆಡಿಯು ಪಕ್ಷವನ್ನು ಕಿರಿಯ ಪಾಲುದಾರರನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದೆ.ಒಂದು ವೇಳೆ ಈ ಬಾರಿ ನಿತೀಶ್ ಕುಮಾರ್ ಮತ್ತೆ ಸಿಎಂ ಆದರೆ ಅದರ ಕೀರ್ತಿ ಬಿಜೆಪಿ ಮತ್ತು  ಪ್ರಧಾನಿ ಮೋದಿಗೆ ಸಲ್ಲಲಿದೆ.ಇನ್ನೊಂದೆಡೆಗೆ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯಾ ಪ್ರತಿಕ್ರಿಯಿಸಿ ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎನ್ನುವುದು ನಮ್ಮ ಚುನಾವಣೆಯ ಭರವಸೆ ಈ ಕುರಿತಾಗಿ ಪಕ್ಷದ ನಾಯಕತ್ವ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು.


ಚುನಾವಣಾ ರ್ಯಾಲಿಗೆ ಬಿಹಾರಕ್ಕೆ ಪ್ರಧಾನ ಮೋದಿ ಬಂದಾಗಲೆಲ್ಲಾ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಚಿರಾಗ್ ಪಾಸ್ವಾನ್ ನಡೆಯನ್ನು ಖಂಡಿಸದೆ ಇರುವುದು ಕೂಡ ಒಂದು ರೀತಿಯಲ್ಲಿ ಅವರ ಟೀಕೆಗೆ ಸಮ್ಮತಿ ಸೂಚಿಸಲಾಯಿತು ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.