ತಿರುವನೆಲ್ವಿ: ತಮಿಳುನಾಡಿನ ತಿರುವನೆಲ್ವಿಯ ಪೆಟ್ರೋಲ್ ಪಂಪ್ ನಲ್ಲಿ ಗಾಡಿಗೆ ಪೆಟ್ರೋಲ್ ತುಂಬಿಸಿದ ತಕ್ಷಣ ಗಾಡಿಗೆ ಚಾಲನೆ ಕೊಟ್ಟಾಗ ಬೆಂಕಿ ಹತ್ತಿಕೊಂಡ ಆಶ್ಚರ್ಯಕರ ಘಟನೆ ನಡೆದಿದೆ.


COMMERCIAL BREAK
SCROLL TO CONTINUE READING

ಈ ದೃಶ್ಯಾವಳಿಯು ತಿರುನೆಲ್ವೇಲಿ ಪೆಟ್ರೋಲ್ ಪಂಪ್ ನ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ತನ್ನ ಬೈಕಿಗೆ ಪೆಟ್ರೋಲ್ ತುಂಬಿದ ನಂತರ ಹಣ ಪಾವತಿಸಿದ ಆ ವ್ಯಕ್ತಿ ಅನಂತರ ಬೈಕ್ ಮೇಲೆ ಕುಳಿತು ಚಾಲನೆ ನೀಡಲು ಹೋಗುತ್ತಾನೆ,ಆಗ ಒಮ್ಮಿಂದೊಮ್ಮೆಗೆ ಬೈಕ್ ಗೆ  ಬೆಂಕಿ ಹತ್ತಿಕೊಳ್ಳುತ್ತದೆ. ಈಗ ವ್ಯಕ್ತಿ ದೇಹದ ಮೇಲೆ ಸುಟ್ಟಗಾಯಗಳಾಗಿದ್ದು ಅವನನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದುಬಂದಿದೆ. 



ವರದಿಗಳ ಪ್ರಕಾರ, ಬೈಕ್ ನ ಪೆಟ್ರೋಲ್ ಟ್ಯಾಂಕರ್ ತುಂಬಿದ ನಂತರ ಸೋರಿಕೆಯಾಗಿದ್ದು ಈ ಹಿನ್ನಲೆಯಲ್ಲಿ ಅದು ಬೆಂಕಿಗೆ ಹತ್ತಿಕೊಳ್ಳಲು ಕಾರಣ ಎಂದು ಹೇಳಲಾಗಿದೆ. ಈಗ ಈ ಘಟನೆಯ ಕುರಿತಾಗಿ ಪೊಲೀಸರು ಹೆಚ್ಚಿನ ತನಿಖೆಯನ್ನು ಕೈಕೊಂಡಿದ್ದಾರೆ.