Biparjoy Update: ಇಂದು ಅಂದರೆ ಗುರುವಾರ ತಡರಾತ್ರಿ ಗುಜರಾತ್‌ನ ಜಖೌ ಬಂದರಿನ ಬಳಿ ಬಿಪರ್‌ಜೋಯ್ ಚಂಡಮಾರುತದ  ಭೂಸ್ಪರ್ಶ ಸಂಭವಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಕಾರಣದಿಂದಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಹೊರತುಪಡಿಸಿ, ಭೂಸೇನೆ, ವಾಯುಪಡೆ, ನೌಕಾಪಡೆ ಮತ್ತು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಕೂಡ ಪರಿಹಾರ ಕಾರ್ಯಕ್ಕೆ ಸಜ್ಜಾಗಿದ್ದಾರೆ. ಈ ಸಮಯದಲ್ಲಿ ಗರಿಷ್ಠ ಗಾಳಿಯ ವೇಗ ಗಂಟೆಗೆ 140 ಕಿ.ಮೀ ವರೆಗೆ ತಲುಪಬಹುದು ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಪ್ರದೇಶದಲ್ಲಿ ಬಲವಾದ ಗಾಳಿಯೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ, ಎಂಟು ಕರಾವಳಿ ಜಿಲ್ಲೆಗಳಿಂದ ಸುಮಾರು 1 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ.


Biparjoy Update: ಗುಜರಾತ್ ನಲ್ಲಿ 94,427 ಜನರು ಶಿಫ್ಟ್, 1521 ಹೋಮ್ ಶೇಲ್ಟರ್ ಗಳ ನಿರ್ಮಾಣ


COMMERCIAL BREAK
SCROLL TO CONTINUE READING

IMD ತನ್ನ ಇತ್ತೀಚಿನ ಬುಲೆಟಿನ್‌ನಲ್ಲಿ ಸೈಕ್ಲೋನ್‌ನ ಸಮೀಪಿಸುವಿಕೆ ಸಂಜೆ ಆರಂಭಗೊಂಡಿದೆ ಮತ್ತು ಮಧ್ಯರಾತ್ರಿಯವರೆಗೆ ಮುಂದುವರೆಯಲಿದೆ ಎಂದು ಹೇಳಿದೆ. ಸೈಕ್ಲೋನ್‌ ಕಾರಣ ಭಾರೀ ಮಳೆ ಮತ್ತು 2-3 ಮೀಟರ್ ಎತ್ತರದ ಅಲೆಗಳು ಏಳಬಹುದು ಎಂದು ವಿಜ್ಞಾನಿಗಳು ಅಂದಾಜು ವ್ಯಕ್ತಪಡಿಸಿದ್ದಾರೆ. ಚಂಡಮಾರುತದ ಪ್ರಭಾವದಿಂದಾಗಿ ಕಛ್, ದೇವಭೂಮಿ ದ್ವಾರಕಾ, ಪೋರಬಂದರ್, ಜಾಮ್‌ನಗರ ಮತ್ತು ಮೊರ್ಬಿ ಜಿಲ್ಲೆಗಳ ತಗ್ಗು ಪ್ರದೇಶಗಳಲ್ಲಿ ಪ್ರವಾಹದ ಸಾಧ್ಯತೆಯಿದೆ. ಭದ್ರತೆಯ ದೃಷ್ಟಿಯಿಂದ 8 ಜಿಲ್ಲೆಗಳಲ್ಲಿ ಒಟ್ಟು 1,521 ಆಶ್ರಯ ಮನೆಗಳನ್ನು ಸ್ಥಾಪಿಸಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.


ಇದನ್ನೂ ಓದಿ-Uniform Civil Code ಕುರಿತು ಸಮಾಲೋಚನೆ ಪ್ರಕ್ರಿಯೆಗೆ ಚಾಲನೆ ನೀಡಿದ ಕೇಂದ್ರ ಕಾನೂನು ಆಯೋಗ


ಚಂಡಮಾರುತದ ತೀವ್ರತೆ ಕಡಿಮೆಯಾಗಿದ್ದರೂ ಶುಕ್ರವಾರ ಬಲವಾದ ಗಾಳಿ ಬೀಸಲಿದೆ ಎಂದು ಐಎಂಡಿ ಹೇಳಿದೆ. ಏತನ್ಮಧ್ಯೆ, ಕಛ್, ಜಾಮ್‌ನಗರ, ರಾಜ್‌ಕೋಟ್, ಪೋರಬಂದರ್, ದೇವಭೂಮಿ ದ್ವಾರಕಾ ಮತ್ತು ಅಮ್ರೇಲಿಯ ಹಲವಾರು ಭಾಗಗಳಲ್ಲಿ ಚಂಡಮಾರುತ ಅಪ್ಪಳಿಸುವ ಆರು ಗಂಟೆಗಳಲ್ಲಿ 10-20 ಮಿಮೀ ಭಾರೀ ಮಳೆಯಾಗಿದೆ. ಸೌರಾಷ್ಟ್ರ-ಕಛ್ ಹೊರತುಪಡಿಸಿ, ಗುಜರಾತ್‌ನ ಇತರ ಜಿಲ್ಲೆಗಳಲ್ಲಿ ಗಾಳಿಯ ವೇಗ ಗಂಟೆಗೆ 40 ಕಿಮೀ ತಲುಪುವ ಜೊತೆಗೆ ಲಘು ಮಳೆಯಾಗಬಹುದು ಎಂದು ಐಎಂಡಿ ಅಧಿಕಾರಿಗಳು ತಿಳಿಸಿದ್ದಾರೆ. ಗಮನಾರ್ಹವಾಗಿ, ಮುನ್ನೆಚ್ಚರಿಕೆಯಾಗಿ, 76 ರೈಲುಗಳನ್ನು ರದ್ದುಗೊಳಿಸಲಾಗಿದೆ, 36 ಅನ್ನು ಮಧ್ಯದಲ್ಲಿ ನಿಲ್ಲಿಸಲಾಗಿದೆ ಮತ್ತು 31 ರೈಲುಗಳನ್ನು ಆಯ್ದ ನಿಲ್ದಾಣಗಳಲ್ಲಿ ಮಾತ್ರ ಓಡಿಸಲು ನಿರ್ಧರಿಸಲಾಗಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.