Biparjoy Update: ಬಿಪರ್ಜೋಯ್ ಚಂಡಮಾರುತ ವಿರಾಟ ರೂಪ ಪಡೆದುಕೊಳ್ಳಲಾರಂಭಿಸಿದೆ. ಗುಜರಾತ್‌ನ ದಕ್ಷಿಣ ಮತ್ತು ಉತ್ತರ ಕರಾವಳಿಯಲ್ಲಿ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ. ಇದೀಗ ಬಂದ ಸುದ್ದಿಯ ಪ್ರಕಾರ ಬಿಪರ್ಜೋಯ್ ಸೈಕ್ಲೋನ್ ಕಾರಣ 67 ರೈಲುಗಳ ಓಡಾಟವನ್ನು ರದ್ದುಗೊಳಿಸಲಾಗಿದೆ. ನಿಯಮಗಳ ಅನುಸಾರ ರೇಲ್ವೆ ವಿಭಾಗ ಯಾತ್ರಿಗಳಿಗೆ ಅವರ ಟಿಕೆಟ್ ಹಣವನ್ನು ಮರಳಿಸಲಿದೆ ಎನ್ನಲಾಗಿದೆ. ಇನ್ನೊಂದೆಡೆ ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ಬಿಪರ್ಜೋಯ್ ಚಂಡಮಾರುತದ ಹಿನ್ನೆಲೆ ಜೂನ್ 13 ರಿಂದ ಜೂನ್ 15 ರವರೆಗೆ ಕರಾವಳಿ ತೀರಕ್ಕೆ ಜನರ ಓಡಾಟವನ್ನು ನಿರ್ಬಂಧಿಸಲಾಗಿದೆ. 


Biparjoy Cyclone: ಅಪಾಯಕಾರಿ ಸ್ವರೂಪ ಪಡೆದುಕೊಳ್ಳುತ್ತಿದೆ ಬಿಪರ್ಜಾಯ್, ಅಧಿಕಾರಿಗಳಿಗೆ ಪ್ರಧಾನಿ ಮೋದಿ ನಿರ್ದೇಶನ

COMMERCIAL BREAK
SCROLL TO CONTINUE READING

ಇದಕ್ಕೂ ಮುನ್ನ ಬಿಪರ್ಜೋಯ್ ಚಂಡಮಾರುತದ ಹಿನ್ನೆಲೆ ಕೈಗೊಳ್ಳಲಾಗಿರುವ ಸಿದ್ಧತೆಗಳ ಕುರಿತು ಮಾಹಿತಿ ನೀಡಿದ ಪಶ್ಚಿಮ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅಶೋಕ್ ಕುಮಾರ್ ಮಿಶ್ರಾ, ನಾವು ಬಿಪರ್‌ಜಾಯ್ ಕುರಿತು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ನಮ್ಮ ಕೇಂದ್ರ ಕಚೇರಿಯಲ್ಲಿ ವಿಪತ್ತು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದ್ದೇವೆ. ನಾವು ಭುಜ್, ಗಾಂಧಿದಾಮ್, ಪೋರಬಂದರ್ ಮತ್ತು ಓಖಾದಲ್ಲಿ ADRM ಅನ್ನು ನಿಯೋಜಿಸಿದ್ದೇವೆ. ಪೋರಬಂದರ್‌ನಲ್ಲಿ ಗಾಳಿಯ ವೇಗ ಹೆಚ್ಚಿದ ಕಾರಣ ಇಂದು ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದೆ. ನಾಳೆಯಿಂದ ಕರಾವಳಿ ಪ್ರದೇಶಗಳಿಗೆ ತೆರಳುವ ರೈಲುಗಳು ರದ್ದಾಗಲಿವೆ. ಇಲ್ಲಿಂದ ಮೂರು ಆರ್ ಪಿಎಫ್ ಬೆಟಾಲಿಯನ್ ಹಾಗೂ ವೈದ್ಯಕೀಯ ತಂಡವನ್ನು ಕಳುಹಿಸಿದ್ದೇವೆ. ವಿರಾವಲ್, ಪೋರಬಂದರ್, ಓಖಾ, ದ್ವಾರಕಾ, ಗಾಂಧಿಧಾಮ್ ಮತ್ತು ಭುಜ್‌ನಲ್ಲಿ ಮುಂದಿನ 2-3 ದಿನಗಳವರೆಗೆ ರೈಲು ಕಾರ್ಯಾಚರಣೆಗಳು ಸ್ಥಗಿತಗೊಳ್ಳಲಿವೆ ಎಂದು ಮಾಹಿತಿ ನೀಡಿದ್ದಾರೆ. 


ಇದನ್ನೂ ಓದಿ-Ram Mandir: ಪ್ರಧಾನಿ ಮೋದಿಯಿಂದ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ, 2024ರಲ್ಲಿ ಯಾವಾಗ ರಾಮಮಂದಿರ ಉದ್ಘಾಟನೆ?

ಇದಕ್ಕೂ ಮುನ್ನ ಇಂದು ಬೆಳಗ್ಗೆ ಬಿಪರ್ಜೋಯ್ ಕುರಿತು ಸಮೀಕ್ಷಾ ಸಭೆಯನ್ನು ನಡೆಸಿದ ಪ್ರಧಾನಿ ನರೇಂದ್ರ ಮೋದಿ, ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಿದ್ದಾರೆ. ಸಭೆಯ ಬಳಿಕ ಟ್ವೀಟ್ ಮಾಡಿ ಮಾಹಿತಿ ನೀಡಿರುವ ಪ್ರಧಾನಿ ಮೋದಿ, ಬಿಪರ್‌ಜೋಯ್ ಚಂಡಮಾರುತದ ಹಿನ್ನೆಲೆಯಲ್ಲಿ ಸನ್ನದ್ಧತೆಯನ್ನು ಪರಿಶೀಲಿಸಲು ಸಭೆ ನಡೆಸಿದ್ದು. ನಮ್ಮ ತಂಡಗಳು ಸೂಕ್ಷ್ಮ ಪ್ರದೇಶಗಳಿಂದ ಸುರಕ್ಷಿತ ಸ್ಥಳಾಂತರವನ್ನು ಖಾತ್ರಿಪಡಿಸಿಕೊಳ್ಳುತ್ತಿವೆ ಮತ್ತು ಅಗತ್ಯ ಸೇವೆಗಳ ನಿರ್ವಹಣೆಯನ್ನು ಖಾತ್ರಿಪಡಿಸುತ್ತಿವೆ. ಎಲ್ಲರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.