ಬಿಜೆಪಿ ಮತಗಟ್ಟೆ ವಶಪಡಿಸಿಕೊಂಡಿದೆ ಎಂದು ಚುನಾವಣಾ ಆಯೋಗಕ್ಕೆ ಬಿಜೆಡಿ ದೂರು
ನಾಲ್ಕನೇ ಹಂತದ ಮತದಾನ ಬಿರುಸಿನಿಂದ ಸಾಗಿದ ಬೆನ್ನಲ್ಲೇ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾದಳ(ಬಿಜೆಡಿ) ಈಗ ಬಿಜೆಪಿ ಮತಗಟ್ಟೆ ಕೇಂದ್ರವನ್ನು ವಶಪಡಿಸಿಕೊಂಡಿದೆ ಎಂದು ಆರೋಪಿಸಿ ಒಡಿಸ್ಸಾದ ಮುಖ್ಯ ಚುನಾವಣಾ ಅಧಿಕಾರಿಗೆ ದೂರು ನೀಡಿದೆ.
ನವದೆಹಲಿ: ನಾಲ್ಕನೇ ಹಂತದ ಮತದಾನ ಬಿರುಸಿನಿಂದ ಸಾಗಿದ ಬೆನ್ನಲ್ಲೇ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾದಳ(ಬಿಜೆಡಿ) ಈಗ ಬಿಜೆಪಿ ಮತಗಟ್ಟೆ ಕೇಂದ್ರವನ್ನು ವಶಪಡಿಸಿಕೊಂಡಿದೆ ಎಂದು ಆರೋಪಿಸಿ ಒಡಿಸ್ಸಾದ ಮುಖ್ಯ ಚುನಾವಣಾ ಅಧಿಕಾರಿಗೆ ದೂರು ನೀಡಿದೆ.
ಬಿಜೆಡಿ ಈಗ ಮುಖ್ಯ ಚುನಾವಣಾ ಅಧಿಕಾರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿರುವಂತೆ " ಇಂದು ಬಿಜೆಪಿ ಗೂಂಡಾಗಳು ಜಾಜ್ ಪುರ್ ಸಂಸತ್ ಕ್ಷೇತ್ರದಲ್ಲಿ ಬರುವ ಬರಿ ವಿಧಾನಸಭಾ ಕ್ಷೇತ್ರದಲ್ಲಿನ 12 ಬೂತ್ ಕೇಂದ್ರಗಳಲ್ಲಿ ಮತದಾನ ನಡೆಯುತ್ತಿರುವ ಸಂದರ್ಭದಲ್ಲಿ ಮತಗಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ" ಎಂದು ದೂರು ನೀಡಿದೆ.
ಒಡಿಸ್ಸಾದಲ್ಲಿ ಲೋಕಸಭಾ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆ ಏಕಕಾಲದಲ್ಲಿ ನಡೆಯುತ್ತಿವೆ.ನಾಲ್ಕನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಒಟ್ಟು 6 ಕ್ಷೇತ್ರಗಳಲ್ಲಿ ಹಾಗೂ 41 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಒಡಿಸ್ಸಾದಲ್ಲಿ ಒಟ್ಟು 147 ವಿಧಾನಸಭಾ ಕ್ಷೇತ್ರ ಹಾಗೂ 21 ಲೋಕಸಭಾ ಕ್ಷೇತ್ರಗಳಿವೆ.