ನವದೆಹಲಿ: ಭಾರಿ ಕುತೂಹಲ ಕೆರಳಿಸಿದ್ದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಮುನ್ನಡೆ ಸಿಕ್ಕಿದೆ.ಬಹುತೇಕ ಚುನಾವಣಾ ಸಮೀಕ್ಷೆಗಳ ಭವಿಷ್ಯದಂತೆ ಬಿಜೆಪಿಈಗ ಗೆಲುವಿನ ಗುರಿಯತ್ತ ಸಾಗಿದೆ.


COMMERCIAL BREAK
SCROLL TO CONTINUE READING

ಪ್ರಾರಂಭಿಕ ಹಂತದ ಮತ ಎಣಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಒಕ್ಕೂಟ 320 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.ಇನ್ನೊಂದೆಡೆಗೆ ಯುಪಿಎ ಒಕ್ಕೂಟ 116 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ ಇತರೆ ಪ್ರಾದೇಶಿಕ ಪಕ್ಷಗಳು 103 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.


ಇದೇ ಟ್ರೆಂಡ್ ಮುಂದೆವರಿದಿದ್ದೆ ಆದಲ್ಲಿ ಬಿಜೆಪಿಗೆ ಸ್ವಂತ ಪ್ರಮಾಣದಲ್ಲಿ ಗೆಲುವು ಸಾಧಿಸುವುದರಲ್ಲಿ ಸಂಶಯವಿಲ್ಲ ಎಂದು ಹೇಳಬಹುದು.ಈ ಬಾರಿ 543ರಲ್ಲಿ  542 ಕ್ಷೇತ್ರಗಳಲ್ಲಿ ಏಳು ಹಂತದ ಚುನಾವಣೆ ನಡೆದಿತ್ತು.ಸರ್ಕಾರ ರಚಿಸಬೇಕಾದಲ್ಲಿ ಸರಳ ಬಹುಮತಕ್ಕೆ 272 ಸ್ಥಾನಗಳನ್ನು ಪಡೆಯಬೇಕಾಗುತ್ತದೆ.


2014 ರಲ್ಲಿ ಬಿಜೆಪಿ ಕಾಂಗ್ರೆಸೇತರ ಪಕ್ಷವಾಗಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದ ಮೊದಲ ಪಕ್ಷ ಎನ್ನುವ ಖ್ಯಾತಿಯನ್ನು ಪಡೆದಿತ್ತು.ಈ ಬಾರಿಯೂ ಪ್ರಾರಂಭಿಕ ಹಂತದ ಮತ ಎಣಿಕೆಯನ್ನು ಗಮನಿಸಿದಾಗ 2014 ರಂತೆಯೇ ಈ ಬಾರಿಯೂ ಬಹುಮತ ಗಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಬಾರಿ ಚುನಾವಣಾ ಪ್ರಚಾರದಲ್ಲಿ ರಾಷ್ಟ್ರೀಯ ಭದ್ರತೆಯನ್ನೇ ಪ್ರಮುಖ ಮಾನದಂಡವಾಗಿ ಮಾಡಿಕೊಂಡಿದ್ದ ಬಿಜೆಪಿಗೆ ಭಾರಿ ಮುನ್ನಡೆ ಸಿಕ್ಕಿದೆ.