ಬಿಜೆಪಿ ಮತ್ತು ಆರೆಸೆಸ್ಸ್ ಜನರ ಒಗ್ಗಟ್ಟನ್ನು ಒಡೆಯುತ್ತಿದೆ-ರಾಕೇಶ್ ಟಿಕಾಯತ್
ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ವಕ್ತಾರ ರಾಕೇಶ್ ಟಿಕಾಯತ್ ಅವರು ಶನಿವಾರ ಭಾರತೀಯ ಜನತಾ ಪಕ್ಷ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ನವದೆಹಲಿ: ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ವಕ್ತಾರ ರಾಕೇಶ್ ಟಿಕಾಯತ್ ಅವರು ಶನಿವಾರ ಭಾರತೀಯ ಜನತಾ ಪಕ್ಷ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
'ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ತಾವು ಹೇಳುವಂತೆ ಇರುವುದಿಲ್ಲ ಆದ್ದರಿಂದ ಜನರು ಅವರ ಬಗ್ಗೆ ಜಾಗೃತರಾಗಿರಬೇಕು.ಈ ಜನರು ಎಲ್ಲಿಗೆ ಹೋದರೂ ಒಗ್ಗಟ್ಟನ್ನು ಮತ್ತು ಜನರನ್ನು ಒಡೆಯುತ್ತಾರೆ ಎಂದು ಟೀಕಿಸಿದರು.ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸಿ ಸುಮಾರು ಒಂದು ವರ್ಷ ಪೂರ್ಣಗೊಳ್ಳುತ್ತಿರುವುದರಿಂದ ಮುಂದಿನ ಯೋಜನೆ ಏನು ಎಂದು ಕೇಳಿದಾಗ,ಸರ್ಕಾರವು ಮಾತನಾಡಲು ಬಯಸಿದರೆ ಒಳ್ಳೆಯದು,ಇಲ್ಲದಿದ್ದರೆ ಪ್ರತಿಭಟನೆ ಮುಂದುವರಿಯುತ್ತದೆ'ಎಂದು ಟಿಕಾಯತ್ ಹೇಳಿದರು.
ಇದನ್ನೂ ಓದಿ-ಗ್ರಾಮೀಣ ಭಾರತದಲ್ಲಿ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಒದಗಿಸಲು ಮುಂದಾದ ಎಲೋನ್ ಮಾಸ್ಕ್?
'ನಾವು ಪ್ರತಿಭಟನೆಯನ್ನು ಮುಂದುವರಿಸಲು ವ್ಯವಸ್ಥೆ ಮಾಡುತ್ತೇವೆ.ಚಳಿಗಾಲವು ಬಂದಿರುವುದರಿಂದ ರೈತರಿಗೆ ಹೆಚ್ಚಿನ ಆಹಾರ ಮತ್ತು ಬಟ್ಟೆಗಳನ್ನು ಕೇಳುತ್ತೇವೆ.ಒಂದು ವರ್ಷ ಕಳೆದಿದೆ, ಯಾವುದೇ ಪ್ರತಿಭಟನೆಗಳು ಇಷ್ಟು ದಿನ ನಡೆಯುತ್ತಿರುವುದನ್ನು ನೀವು ನೋಡಿದ್ದೀರಾ,? ಸರ್ಕಾರವು ಈ ಪ್ರತಿಭಟನೆಯನ್ನು ಎಲ್ಲಿಗೆ ತರಲು ಬಯಸುತ್ತದೆ? ಎಂದು ಅವರು ಪ್ರಶ್ನಿಸಿದರು.
ಹಿಸಾರ್ ಘಟನೆಯ ಕುರಿತು ಪ್ರತಿಕ್ರಿಯಿಸಿದ ಟಿಕಾಯತ್, ಖಾಸಗಿ ಗೂಂಡಾಗಳು ಬರಲು ಪ್ರಾರಂಭಿಸಿದ್ದಾರೆ.ಈಗ, ಪೊಲೀಸರು ಲಾಠಿಗಳನ್ನು ಬಳಸುತ್ತಿಲ್ಲ ಬದಲಾಗಿ ಈ ಜನರು ಬಂದಿದ್ದಾರೆ ಎಂದು ಅವರು ಹೇಳಿದರು.
ಹರಿಯಾಣದ ಹಿಸಾರ್ ಜಿಲ್ಲೆಯ ರೈತರು ಶುಕ್ರವಾರ ರಾತ್ರಿಯಿಂದ ಭಾರತೀಯ ಜನತಾ ಪಕ್ಷದ ಸಂಸದ ರಾಮ್ ಚಂದರ್ ಜಂಗ್ರಾ ವಿರುದ್ಧ ನಾರ್ನಾಂಡ್ ಪೊಲೀಸ್ ಠಾಣೆಯ ಹೊರಗೆ ರೈತನ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ನೂರು ಕೋಟಿ ವಸೂಲಿ ಪ್ರಕರಣದಲ್ಲಿ ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಬಂಧನ
ಎಎನ್‌ಐ ಜೊತೆ ಮಾತನಾಡಿದ ಸ್ಥಳೀಯ ರೈತ ಮುಖಂಡ ರವಿ ಆಜಾದ್, ಬಿಜೆಪಿ ಸಂಸದ ಮತ್ತು ಅವರ ಸಹಚರರು ರೈತ ಕುಲದೀಪ್ ರಾಣಾ ಮೇಲೆ ಹಲ್ಲೆ ನಡೆಸಿದ್ದು, ಆತನಿಗೆ ತೀವ್ರ ಗಾಯಗಳಾಗಿವೆ ಎಂದು ಆರೋಪಿಸಿದ್ದಾರೆ.ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ರೈತರು, ಬಿಜೆಪಿ ಸಂಸದ ಮತ್ತು ಅವರ ಸಹಚರರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಒತ್ತಾಯಿಸಿದರು.
'ನಮ್ಮ ಬೇಡಿಕೆಗಳು ಸ್ಪಷ್ಟವಾಗಿವೆ.ಕುಲದೀಪ್ ರಾಣಾ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಸಂಸದ ರಾಮ್ ಚಂದರ್ ಜಾಂಗ್ರಾ ಮತ್ತು ಅವರ ಸಹಚರರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ನಾವು ಬಯಸುತ್ತೇವೆ. ನಮಗೂ ಅವರು ಬೇಕು. ಮೂರು ರೈತರ ಮೇಲೆ ದಾಖಲಿಸಿರುವ ಸುಳ್ಳು ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ನಾವು ಬಯಸುತ್ತೇವೆ ಎಂದು ರವಿ ಆಜಾದ್ ಹೇಳಿದರು.
ಕುಲದೀಪ್ ರಾಣಾ ಅವರಿಗೆ ನಾಲ್ಕು ಗಂಟೆಗಳ ಕಾಲ ಆಪರೇಷನ್ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ."ಆಪರೇಷನ್ ಯಶಸ್ವಿಯಾಗಿದೆ ಮತ್ತು ರಾಣಾ ಅವರನ್ನು ಹಿಸಾರ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಆಜಾದ್ ಹೇಳಿದರು.
ಇದನ್ನೂ ಓದಿ-ಪಡಿತರಾದಾರರಿಗೆ ಬಿಗ್ ಶಾಕ್ : ಇಂದಿನಿಂದ ಉಚಿತ ಪಡಿತರ ಯೋಜನೆ ಬಂದ್!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ