ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಮುಂಬರುವ ವಿಧಾನಸಭಾ ಉಪಚುನಾವಣೆ ಚುನಾವಣೆಗೆ ಭಾರತೀಯ ಜನತಾ ಪಕ್ಷ ಶನಿವಾರ ತನ್ನ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದೆ.


COMMERCIAL BREAK
SCROLL TO CONTINUE READING

ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ವಿಧಾನಸಭಾ ಉಪಚುನಾವಣೆಗೆ ಪಕ್ಷದ ಕೇಂದ್ರ ಚುನಾವಣಾ ಸಮಿತಿ ತನ್ನ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ ಎಂದು ಬಿಜೆಪಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.


ಪಕ್ಷ ಘೋಷಿಸಿದ ಹೆಸರುಗಳಲ್ಲಿ ಕಮಲಗಂಜ್ ನಿಂದ ಕಮಲ್ ಚಂದ್ರ ಸರ್ಕಾರ್ ಸ್ಪರ್ಧಿಸಲಿದ್ದಾರೆ. ಜಯಪ್ರಕಾಶ್ ಮಜುಂದರ್ ಕರಿಂಪುರದಿಂದ ಸ್ಪರ್ಧಿಸಲಿದ್ದು, ಪ್ರೇಮ್‌ಚಂದ್ ಜಾ ಪಶ್ಚಿಮ ಬಂಗಾಳದ ಖರಗ್‌ಪುರ್ ಸದರ್ ವಿಧಾನಸಭಾ ಸ್ಥಾನಗಳಿಂದ ಸ್ಪರ್ಧಿಸಲಿದ್ದಾರೆ.


ಪಶ್ಚಿಮ ಬಂಗಾಳದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 25 ರಂದು ಉಪಚುನಾವಣೆ ನಡೆಯಲಿದೆ.