ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ದೆಹಲಿ ಚುನಾವಣೆಗೆ ಮುನ್ನ ಬಿಜೆಪಿ ಅಭೂತ ಪೂರ್ವ 5,000 ಸಣ್ಣ ರ್ಯಾಲಿಗಳನ್ನು ಯೋಜಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಆ ಮೂಲಕ ದೆಹಲಿಯಲ್ಲಿ ಆಡಳಿತಾರೂಡ ಆಮ್ ಆದ್ಮಿ ಪಕ್ಷವನ್ನು (ಎಎಪಿ) ಸೋಲಿಸಲು ಬಿಜೆಪಿ ರಣತಂತ್ರವನ್ನು ರೂಪಿಸಿಸುತ್ತಿದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ದೆಹಲಿಯ 70 ಕ್ಷೇತ್ರಗಳಲ್ಲಿ ಮುಂದಿನ 20 ದಿನಗಳಲ್ಲಿ ಬಿಜೆಪಿ ಪ್ರತಿ ದಿನ ಮೂರರಿಂದ ನಾಲ್ಕು ರ್ಯಾಲಿಗಳನ್ನು ಆಯೋಜಿಸುತ್ತದೆ. ಪ್ರತಿ 5,000 ಸಾರ್ವಜನಿಕ ಸಭೆಗಳಲ್ಲಿ ಸುಮಾರು 200 ಜನರು ಭಾಗವಹಿಸಬಹುದು ಎಂದು ನಿರೀಕ್ಷಿಸಲಾಗಿದೆ.


ನೇರ ಸಂವಹನಕ್ಕಾಗಿ 200 ಕ್ಕಿಂತ ಹೆಚ್ಚು ಜನರ ಸಣ್ಣ ರ್ಯಾಲಿಗಳು ಮತ್ತು ಕೂಟಗಳನ್ನು ನಡೆಸಲು ಕೇಂದ್ರ ನಾಯಕತ್ವ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆಎಂದು ಮೂಲವೊಂದು ತಿಳಿಸಿದೆ. ಅನೇಕ ಹಿರಿಯ ಕ್ಯಾಬಿನೆಟ್ ಮಂತ್ರಿಗಳು ಸೇರಿದಂತೆ ಬಿಜೆಪಿಯ ಅಗ್ರ 100 ನಾಯಕರು ಚುನಾವಣಾ ಪ್ರಚಾರದ ಭಾಗವಾಗಲಿದ್ದಾರೆ.ರೋಸ್ಟರ್ ಇನ್ನೂ ಕಾರ್ಯರೂಪಕ್ಕೆ ಬರುತ್ತಿದೆ ಎಂದು ಮೂಲಗಳು ತಿಳಿಸಿವೆ.100 ನಾಯಕರ ಪಟ್ಟಿ ಇರುತ್ತದೆ, ಅವರು ಮೂರರಿಂದ ನಾಲ್ಕು ಸಣ್ಣ ರ್ಯಾಲಿಗಳು ಅಥವಾ ಸಾರ್ವಜನಿಕ ಸಭೆಗಳನ್ನು ನಡೆಸುವ ನಿರೀಕ್ಷೆಯಿದೆ ಎನ್ನಲಾಗಿದೆ.    


ಬಿಜೆಪಿಯ ದೆಹಲಿ ಘಟಕವು10 ಕ್ಕೂ ಹೆಚ್ಚು ರ್ಯಾಲಿಗಳನ್ನು ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಕೋರಿದೆ .ಫೆಬ್ರವರಿ 8 ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ 57 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಶುಕ್ರವಾರ ಪ್ರಕಟಿಸಿತ್ತು.ಆದರೆ, ನವದೆಹಲಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ತನ್ನ ಅಭ್ಯರ್ಥಿಯನ್ನು ಇನ್ನೂ ಹೆಸರಿಸಿಲ್ಲ, ಅವರ ಪಕ್ಷದ ಎಎಪಿ ಎಲ್ಲಾ 70 ಸ್ಥಾನಗಳಿಗೆ ಸ್ಪರ್ಧಿಗಳನ್ನು ಹೆಸರಿಸಿದೆ.ಎಎಪಿ ಹಿಂದಿನ ಚುನಾವಣೆಗಳಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದು, 67 ಸ್ಥಾನಗಳನ್ನು ಗಳಿಸಿದ್ದರೆ ಬಿಜೆಪಿ ಕೇವಲ ಮೂರು ಸ್ಥಾನಗಳನ್ನು ಪಡೆದಿದೆ.