`ಮಹಾ` ಹಿನ್ನಡೆ ನಂತರ, ಜಾರ್ಖಂಡ್ ನಲ್ಲೂ ಬಿಜೆಪಿಗೆ ಕಂಟಕ..!
ಮಹಾರಾಷ್ಟ್ರದಲ್ಲಿ ಶಿವಸೇನಾ ಜೊತೆಗಿನ ಮೈತ್ರಿ ಮುರಿದ ಬೆನ್ನಲ್ಲೇ ಈಗ ಜಾರ್ಖಂಡ್ ನಲ್ಲಿಯೂ ಬಿಜೆಪಿ ಸಂಕಷ್ಟ ಎದುರಾಗಿದೆ.
ನವದೆಹಲಿ: ಮಹಾರಾಷ್ಟ್ರದಲ್ಲಿ ಶಿವಸೇನಾ ಜೊತೆಗಿನ ಮೈತ್ರಿ ಮುರಿದ ಬೆನ್ನಲ್ಲೇ ಈಗ ಜಾರ್ಖಂಡ್ ನಲ್ಲಿಯೂ ಬಿಜೆಪಿಗೆ ಸಂಕಷ್ಟ ಎದುರಾಗಿದೆ.
ಜಾರ್ಖಂಡ್‌ನಲ್ಲಿ ಬಿಜೆಪಿ ಮಿತ್ರ ಪಕ್ಷಗಳಾದ ಎಜೆಎಸ್‌ಯು ಮತ್ತು ಎಲ್‌ಜೆಪಿಯಿಂದಲೂ ವಿಧಾನಸಭಾ ಚುನಾವಣೆಗೆ ಸೀಟು ಹಂಚಿಕೆ ಸೂತ್ರಕ್ಕೆ ಒಪ್ಪಿಗೆ ನೀಡುವಂತೆ ಒತ್ತಡವನ್ನು ಹಾಕುತ್ತಿವೆ.ಇದೆ ನವೆಂಬರ್ 30 ರಿಂದ ಜಾರ್ಖಂಡ್ ನಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಈಗ ಮಿತ್ರ ಪಕ್ಷಗಳು ತೀವ್ರ ಒತ್ತಡ ಹಾಕುತ್ತಿವೆ ಎನ್ನಲಾಗಿದೆ.
2014 ರಲ್ಲಿ ಕೇವಲ ಒಂದು ಸ್ಥಾನಕ್ಕೆ ಸ್ಪರ್ಧಿಸಿ ಸೋತಿದ್ದ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ), ಈ ಬಾರಿ ಬಿಜೆಪಿ ಆರು ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸಿರುವುದರಿಂದ ಅದು 50 ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ. 'ಲೋಕ ಜನಶಕ್ತಿ ಪಕ್ಷವು ಕೇವಲ 50 ಸ್ಥಾನಗಳಿಗೆ ಸ್ಪರ್ಧಿಸಲು ನಿರ್ಧರಿಸಿದೆ. ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಸಂಜೆ ಪ್ರಕಟಿಸಲಾಗುವುದು' ಎಂದು ಪಾಸ್ವಾನ್ ಟ್ವೀಟ್ ಮಾಡಿದ್ದಾರೆ.
ಬಿಜೆಪಿಯ ಇತರ ಮಿತ್ರ ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ (ಎಜೆಎಸ್‌ಯು), 2014 ರಲ್ಲಿ ನಡೆದ ಚುನಾವಣೆಯಲ್ಲಿ ಎಂಟು ಸ್ಥಾನಗಳಲ್ಲಿ ಸ್ಪರ್ಧಿಸಿ ಐದರಲ್ಲಿ ಗೆಲುವು ಸಾಧಿಸಿತ್ತು, ಇದು ಲೋಕಜನ ಪಕ್ಷ ಮತ್ತು ಸಂಯುಕ್ತ ಜನತಾದಳಕ್ಕಿಂತಲೂ ಅಧಿಕ ಎನ್ನಲಾಗಿದೆ. ಇದು ಈಗ ನಿರ್ಧಿಷ್ಟ ಸೂತ್ರದ ಅನುಸಾರವಾಗಿ ಸೀಟು ಹಂಚಿಕೆಗೆ ಒತ್ತಾಯಿಸುತ್ತಿದೆ ಎನ್ನಲಾಗಿದೆ.