ನವದೆಹಲಿ: ಬಿಜೆಪಿ ತಮ್ಮನ್ನು ಕೇಸರೀಕರಣಗೊಳಿಸಲು ಯತ್ನಿಸುತ್ತಿದೆ, ಆದ್ರೆ ಅದಕ್ಕೆ ನಾನು ಎಂದು ಸಿಕ್ಕಿ ಹಾಕಿಕೊಳ್ಳುವುದಿಲ್ಲ ಎಂದು ರಜನಿಕಾಂತ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಪುರಾತನ ತಮಿಳು ಕವಿ ತಿರುವಳ್ಳುವರ್ ಅವರು ಕೇಸರಿ ಧರಿಸಿದ ಫೋಟೋಗಳನ್ನು ಬಿಡುಗಡೆ ಮಾಡಿದ ತಮಿಳುನಾಡಿನ ಬಿಜೆಪಿ ಘಟಕದ ಬಗ್ಗೆ ಉಲ್ಲೇಖಿಸಿ ಮಾತನಾಡಿದ ರಜನಿಕಾಂತ್ ' ಅವರೊಂದಿಗೆ ಸೇರಲು ಬಿಜೆಪಿ ನನಗೆ ಯಾವುದೇ ಪ್ರಸ್ತಾಪ ನೀಡಿಲ್ಲ. ಆದರೆ ಅವರು ತಿರುವಳ್ಳುವರ್ ಅನ್ನು ಕೇಸರಿ ಮಾಡುವಂತೆಯೇ ಬಿಜೆಪಿ ನನ್ನನ್ನು ಕೇಸರಿ ಮಾಡಲು ಪ್ರಯತ್ನಿಸುತ್ತಿದೆ. ನಾನು ಸಿಕ್ಕಿಹಾಕಿಕೊಳ್ಳುವುದಿಲ್ಲ, ತಿರುವಳ್ಳುವರ್ ಕೂಡ ಆಗುವುದಿಲ್ಲ" ಎಂದು ಅವರು ಹೇಳಿದರು.


ತಿರುವಳ್ಳುವರ್ ಕೇಸರಿ ಕದ್ದಿರುವಂತೆ ಮಾಡುವುದು ಬಿಜೆಪಿಯ ಕಾರ್ಯಸೂಚಿಯಾಗಿದೆ. ಹೆಚ್ಚಿನ ಪ್ರಾಮುಖ್ಯತೆ ಇರುವ ವಿಷಯಗಳಿವೆ, ಇದನ್ನು ಚರ್ಚಿಸಬೇಕಾಗಿದೆ. ಇದು ಸಿಲ್ಲಿ ವಿಷಯ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಈ ತಿಂಗಳ ಕೊನೆಯಲ್ಲಿ ಗೋವಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 50 ನೇ ಆವೃತ್ತಿಯಲ್ಲಿ ಐಕಾನ್ ಆಫ್ ಗೋಲ್ಡನ್ ಜುಬಿಲಿ ಪ್ರಶಸ್ತಿಯನ್ನು ನೀಡುವುದಾಗಿ ಕೇಂದ್ರ ಘೋಷಿಸಿದ ಕೆಲವೇ ದಿನಗಳಲ್ಲಿ ರಜನಿಕಾಂತ್ ಅವರ ಅಭಿಪ್ರಾಯ ಹೊರಬಿದ್ದಿದೆ.


ರಜನಿಕಾಂತ್ ಅವರು ಸಕ್ರೀಯ ರಾಜಕೀಯಕ್ಕೆ ಪ್ರವೇಶಿಸುವ ಕುರಿತಾಗಿ ಹಿನ್ನಲೆಯಲ್ಲಿ ಊಹಾಪೋಹಗಳು ಅಧಿಕಗೊಂಡಿದ್ದು, ಇನ್ನೊಂದೆಡೆ ತಮಿಳುನಾಡಿನ ಬಿಜೆಪಿ ರಾಜಕಾರಣಿಗಳು ಕೂಡ ಅವರನ್ನು ತಮ್ಮ ಪಕ್ಷಕ್ಕೆ ಸೇರಲು ಒತ್ತಾಯಿಸುತ್ತಿದ್ದಾರೆ.