ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜೀ ನೇತೃತ್ವದ ಮಹಾಘಟಬಂಧನ್ ರ್ಯಾಲಿ ನಂತರ ಮತ್ತೊಮ್ಮೆ ಪ್ರತಿಪಕ್ಷಗಳು ದೆಹಲಿ ಜಂತರ ಮಂತರ್ ನಲ್ಲಿ ಒಗ್ಗಟ್ಟಿನ ಪ್ರದರ್ಶನ ತೋರಿದರು.ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಯೋಜಿಸಿದ್ದ ಈ ರ್ಯಾಲಿಯಲ್ಲಿ ಸುಮಾರು 20 ಪಕ್ಷಗಳ ನಾಯಕರು ಭಾಗವಹಿಸಿದ್ದರು.



COMMERCIAL BREAK
SCROLL TO CONTINUE READING

ಈ ರ್ಯಾಲಿಯಲ್ಲಿ  ಭಾಗವಹಿಸಿ ಮಾತನಾಡಿದ ಸಿಪಿಎಂ ನಾಯಕ ಸೀತಾರಾಮ್ ಯೆಚೂರಿ ಬಿಜೆಪಿಯು ಸಹೋದರರ ನಡುವೆಯೇ ಜಗಳ ಹಚ್ಚುವುದರ ಮೂಲಕ  ದುಶ್ಯಾಸನನ ರಾಜಕಾರಣವನ್ನು ಪ್ರದರ್ಶಿಸುತ್ತಿದೆ ಎಂದು ಕಿಡಿಕಾರಿದರು.ಇನ್ನು ಮುಂದುವರೆದು ಮೋದಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಅವರು"ಉತ್ತಮ ಭಾರತಕ್ಕಾಗಿ ಈ ಸರ್ಕಾರವನ್ನು ಕಿತ್ತೊಗೆಯಬೇಕಾಗಿದೆ.ಈ ಚೌಕಿದಾರ್ ನ್ನು ದೇಶದ ರಕ್ಷಣೆಗಾಗಿ ತೆಗೆದು ಹಾಕಬೇಕಾಗಿದೆ. ಬಿಜೆಪಿ ಒಂದು ರೀತಿ ಕೌರವ ಸೇನೆ ಇದ್ದ ಹಾಗೆ ಆದರೆ ಪಾಂಡವರು (ಪ್ರತಿಪಕ್ಷಗಳು) ಅವರನ್ನು ಈ ದೇಶದ ರಕ್ಷಣೆಗಾಗಿ ಸೋಲಿಸಲಿದ್ದಾರೆ" ಎಂದು ತಿಳಿಸಿದರು. 



ಇನ್ನೊಂದೆಡೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಮಾತನಾಡುತ್ತಾ ಮೋದಿ ಸರ್ಕಾರಕ್ಕೆ ಇಂದು ಕೊನೆಯ ದಿನ ಎಂದು ವ್ಯಂಗ್ಯವಾಡಿದರು.ಮುಂಬರುವ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಎಲ್ಲ ಏಳು ಸ್ಥಾನಗಳನ್ನು ಗೆಲ್ಲುತ್ತದೆ ಸದ್ಯದಲ್ಲಿ ಸಂಯುಕ್ತ ಭಾರತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.