ಮೋರಿಗಾಂವ್‌: ಅಸ್ಸಾಂ ಮುಖ್ಯಮಂತ್ರಿ ಶರಬಾನಂದ ಸೋನೋವಾಲ್‌ ವಿರುದ್ಧ ಫೇಸ್ಬುಕ್ ನಲ್ಲಿ ಆಕ್ಷೇಪಾರ್ಹ ಹೇಳಿಕೆಯನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ಬಿಜೆಪಿಯ ಮೋರಿಂಗಾವ್ ಜಿಲ್ಲಾ ಘಟಕದ ಐಟಿ ಮತ್ತು ಸಾಮಾಜಿಕ ಮಾಧ್ಯಮ ವಿಭಾಗದ ಸಂಚಾಲಕ ನಿತು ಕುಮಾರ್‌ ಬೋರಾ ಅವರನ್ನು ಬಂಧಿಸಲಾಗಿದೆ.


COMMERCIAL BREAK
SCROLL TO CONTINUE READING

"ಮುಖ್ಯಮಂತ್ರಿ ಶರಬಾನಂದ ಸೋನೋವಾಲ್‌ ಮತ್ತು ಅವರ ಹ್ರುಹ ಸಚಿವಾಲಯದವರು ಹಿಂದು ಮಹಿಳೆಯ ವಿರುದ್ಧ ನಿರ್ದಿಷ್ಟ ಸಮುದಾಯವೊಂದು ಕಾನೂನು ಬಾಹಿರವಾಗಿ ನಡೆದುಕೊಳ್ಳುತ್ತಿದ್ದಾಗ ಮೂಕ ಪ್ರೇಕ್ಷಕರಾಗಿದ್ದರು" ಎಂದು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಅಲ್ಲದೆ, ಗೃಹ ಖಾತೆಯನ್ನು ಹಣಕಾಸು ಸಚಿವರಾಗಿರುವ ಹಿಮಾಂತ ಬಿಸ್ವ ಶರ್ಮಾ ಅವರ ಕೈಗೆ ಒಪ್ಪಿಸುವುದೇ ಒಳ್ಳೆಯದು ಎಂದು ಕೂಡ ಬೋರಾ ಬರೆದಿದ್ದಾರೆ" ಎಂದು ಮೋರಿಗಾಂವ್‌ ಪೊಲೀಸ್ ಅಧೀಕ್ಷಕ ಸ್ವಪ್ನಾನಿಲ್ ದೇಕಾ ಹೇಳಿದ್ದಾರೆ.


"ಸಾಮಾಜಿಕ ಮಾಧ್ಯಮದಲ್ಲಿ ಸಿಎಂ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಮಾಡಿದ ಕಾರಣ ಬಾರಾ ಅವರನ್ನು ಬಂಧಿಸಲಾಗಿತ್ತು. ಆದರೆ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ" ಎಂದು ದೇಕಾ ತಿಳಿಸಿದ್ದಾರೆ.