ನವದೆಹಲಿ:ನೈಸರ್ಗಿಕ ವಿಕೋಪಗಳನ್ನು ನಿಭಾಯಿಸಲು ಹನುಮಾನ್ ಚಾಲಿಸಾ ಮಂತ್ರ ಪಠಣೆ ಮಾಡಿ ಎಂದು ರೈತರಿಗೆ ಮಧ್ಯಪ್ರದೇಶದ ಬಿಜೆಪಿ ನಾಯಕ ರಮೇಶ್ ಸಕ್ಸೇನಾ ಸಲಹೆ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಕಳೆದ ಕೆಲವು ದಿನಗಳಿಂದ ಮಧ್ಯಪ್ರದೇಶದ ಸೆಹೋರ್ನಲ್ಲಿ ಅಕಾಲಿಕ ಮಳೆ ಬಿಳುತ್ತಿದ್ದು ಇದರಿಂದ ಭಾರಿ ಪ್ರಮಾಣದ ಬೆಳೆಹಾನಿ ಸಂಭವಿಸಿದೆ. ಈ ನೈಸರ್ಗಿಕ ಅನಾಹುತಗಳಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ರೈತರು ಪ್ರತಿದಿನ  ಒಂದು ಗಂಟೆಯವರೆಗೆ ಹನುಮಾನ್ ಚಾಲೀಸಾ ಮಂತ್ರವನ್ನು ಪಠಿಸಲು ರಮೇಶ್ ಸಕ್ಸೇನಾ ಮನವಿ ಮಾಡಿದ್ದಾರೆ. 


ಮುಂದಿನ 4-5 ದಿನಗಳಲ್ಲಿ ಈ ನೈಸರ್ಗಿಕ ವಿಕೋಪ ಮುಂದುವರಿಯಲಿದೆ ಎಂದು ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ. ಆದ್ದರಿಂದ ಇದನ್ನು ನಿಭಾಯಿಸಲು ಇರುವ ಒಂದು ಮಾರ್ಗವೆಂದರೆ ಹನುಮಾನ್ ಚಾಲಿಸಾ! ಎಂದು ಬಿಜೆಪಿ ನಾಯಕ ಸಕ್ಸೇನಾ ತಿಳಿಸಿದ್ದಾರೆ.


ಹನುಮಾನ್ ಚಾಲೀಸಾವನ್ನು ಪ್ರತಿ ಹಳ್ಳಿಯಲ್ಲಿ ಒಂದು ಗಂಟೆಯವರೆಗೆ ಪಠಣೆ ಮಾಡಿದರೆ ಈ ನೈಸರ್ಗಿಕ ವಿಕೋಪವನ್ನು ತಡೆಗಟ್ಟಬಹುದೆಂದು ಎಂದು ತಿಳಿಸಿದ್ದಾರೆ. 


"ಹನುಮಾನ್ ಚಾಲಿಸಾವನ್ನು ಜನರನ್ನು ಪ್ರತಿ ಹಳ್ಳಿಯಲ್ಲಿ ಒಂದು ಗಂಟೆಯ ಕಾಲ ಓದಿದರೆ ಈ ನೈಸರ್ಗಿಕ ವಿಕೋಪವನ್ನು ನಿಭಾಯಿಸಬಹುದೆಂಬುದು ನಾನು ಹೇಳಬಲ್ಲೆ ,ಆದ್ದರಿಂದ ಮುಂದಿನ ಐದು ದಿನಗಳಲ್ಲಿ ಪ್ರತಿದಿನ ಒಂದು ಗಂಟೆ ಹನುಮಾನ್ ಚಾಲೀಸಾವನ್ನು ಪಠಣೆ ಮಾಡಬೇಕೆಂದು ನಾನು ಯುವಕರಲ್ಲಿ ಮನವಿ ಮಾಡುತ್ತೇನೆ" ಎಂದು ಮಾಜಿ ಬಿಜೆಪಿ ಶಾಸಕ ಸಕ್ಸೇನಾ ವಿನಂತಿಸಿಕೊಂಡಿದ್ದಾರೆ.