ನವದೆಹಲಿ: ಈ ಬಾರಿ ರಾಜಸ್ತಾನದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಈಗ ಹಿರಿಯ ಬಿಜೆಪಿ ನಾಯಕ  ಜಸ್ವಂತ್ ಸಿಂಗ್ ಅವರ ಪುತ್ರ ಮತ್ತು ಮಾಜಿ ಶಾಸಕ ಮನ್ವೇಂದ್ರ ಸಿಂಗ್ ಬುಧುವಾರದಂದು ಕಾಂಗ್ರೆಸ್ ಪಕ್ಷ ಸೇರಿದ್ದಾರೆ.


COMMERCIAL BREAK
SCROLL TO CONTINUE READING

2013 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಬಾರ್ಮರ್ ನ ಶಿಯೋ ಕ್ಷೇತ್ರವನ್ನು ಗೆದ್ದಿದ್ದ ಸಿಂಗ್, ಕಳೆದ ತಿಂಗಳು ಅವರು ಬಿಜೆಪಿ ಪಕ್ಷವನ್ನು ತೊರೆಯುವದಾಗಿ ಘೋಷಿಸಿದ್ದರು.ಇದೇ ಬರುವ ಡಿಸೆಂಬರ್ ನಲ್ಲಿ ರಾಜಸ್ತಾನದಲ್ಲಿ ವಿಧಾನಸಭೆ ಚುನಾವಣೆ ಇದೆ ಈ ಹಿನ್ನಲೆಯಲ್ಲಿ ಈಗ ಕಾಂಗ್ರೆಸ್ ಮನ್ವೆಂದ್ರ ಸಿಂಗ್ ಅವರ ಸೇರುವಿಕೆಯಿಂದಾಗಿ ಪಕ್ಷಕ್ಕೆ ಬಲ ಬಂದಂತಾಗಿದೆ ಎಂದು ತಿಳಿದುಬಂದಿದೆ.ಈಗ ಇವರ ಸೇರ್ಪಡೆಯಿಂದಾಗಿ ರಜಪೂತ್ ಸಮುದಾಯದ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬರಲಿವೆ ಎನ್ನಲಾಗಿದೆ.


ಇನ್ನೊಂದೆಡೆಗೆ ಇವರ ನಿರ್ಗಮನದಿಂದ  ಬಾರ್ಮರ್-ಜೈಸಲ್ಮೇರ್ ನಲ್ಲಿ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.ಪ್ರಸಕ್ತ  ವಸುಂಧರಾ ರಾಜೆ ನೇತೃತ್ವದ ಬಿಜೆಪಿ ಸರ್ಕಾರವು ತೀವ್ರ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದ್ದು ಬಿಜೆಪಿ ಈ ಬಾರಿ ಸೋಲುವ ಭೀತಿಯನ್ನು ಎದುರಿಸುತ್ತಿದೆ ಎನ್ನಲಾಗಿದೆ.