ಬಿಜೆಪಿ ನಾಯಕರಿಗೆ ಮನೋವೈದ್ಯರ ಸಹಾಯ ಅಗತ್ಯ- ಆನಂದ್ ಶರ್ಮಾ
ಜೋಧಪುರ್: ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಬಿಜೆಪಿ ವಿರುದ್ದ ಕಿಡಿಕಾರುತ್ತಾ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮಾತ್ರ ಭಾರತವು ಅಭಿವೃದ್ಧಿ ಹೊಂದಿದೆಯೆಂದು ಅವರು ಭಾವಿಸಿದರೆ ಬಿಜೆಪಿ ನಾಯಕರಿಗೆ ಮನೋವೈದ್ಯಕೀಯ ನೆರವು ಅಗತ್ಯವೆಂದು ವ್ಯಂಗವಾಡಿದ್ದಾರೆ.
ಎಎನ್ಐಗೆ ಮಾತನಾಡಿದ ಶರ್ಮಾ, ಕಳೆದ ನಾಲ್ಕು ವರ್ಷಗಳಲ್ಲಿ ಭಾರತವು 'ಶಕ್ತಿಶಾಲಿ ರಾಷ್ಟ್ರ'ವಾಗಿಲ್ಲ ಆದರೆ ಬಿಜೆಪಿ ಸರ್ಕಾರದ ಆಳ್ವಿಕೆಗೆ ಮುಂಚೆಯೇ ಭಾರತ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿತ್ತು.
" ಭಾರತ ಕೇವಲ ಕಳೆದ ನಾಲ್ಕು ವರ್ಷಗಳಲ್ಲಿ ದೊಡ್ಡ ರಾಷ್ಟ್ರವಾಗಿಲ್ಲ, ಭಾರತವು ಬಿಜೆಪಿ ಸರ್ಕಾರಕ್ಕೆ ಮುಂಚೆಯೇ ಆರ್ಥಿಕ ಶಕ್ತಿಯಾಗಿ ಮಾರ್ಪಟ್ಟಿದೆ..ಮೋದಿ ಜಿ ಪ್ರಧಾನ ಮಂತ್ರಿಯಾಗುವ ಮೊದಲು ಭಾರತ ಐಐಟಿಗಳು ಮತ್ತು ಐಐಎಂಗಳಂತಹ ಸಂಸ್ಥೆಗಳನ್ನು ಹೊಂದಿದ್ದವು. ಆದ್ದರಿಂದ ಬಿಜೆಪಿ ನಾಯಕರಿಗೆ ಮಾನಸಿಕ ಸಹಾಯ ಅಗತ್ಯವಿದೆ ಎಂದು "ಶರ್ಮಾ ಹೇಳಿದರು.
ಶರ್ಮಾ ಅವರ ಹೇಳಿಕೆಯು ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ನಾಲ್ಕು ವರ್ಷಗಳ ಅವಧಿ ಕೇಂದ್ರದಲ್ಲಿ ಪೂರ್ಣಗೊಂಡ ಬಳಿಕ ಬಂದಿದೆ.