ನವದೆಹಲಿ: 2019-20ರ ವಾರ್ಷಿಕ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) 7 ವರ್ಷದಲ್ಲೇ ಕನಿಷ್ಠ ಶೇಕಡಾ 5 ಕ್ಕೆ ಕುಸಿದಿದ್ದರಿಂದಾಗಿ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕಿಡಿ ಕಾರಿದ್ದಾರೆ.


COMMERCIAL BREAK
SCROLL TO CONTINUE READING

ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್ ನಲ್ಲಿ ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿ ಕೇಂದ್ರ ಸರ್ಕಾರವನ್ನು ತರಾಟೆಗೆ ತಗೆದುಕೊಂಡಿದ್ದಾರೆ. 'ಅಚ್ಚೆ ದಿನ್' ಭರವಸೆ ನೀಡಿದ ಬಿಜೆಪಿ ನೇತೃತ್ವದ ಸರ್ಕಾರವು ಆರ್ಥಿಕತೆಯನ್ನು ಪಂಕ್ಚರ್ ಮಾಡಿದೆ ಎಂದಿದ್ದಾರೆ. ಇನ್ನು ಮುಂದುವರೆದು ಇತ್ತ ಕಡೆ ಜಿಡಿಪಿನೂ ಬೆಳವಣಿಗೆ ಹೊಂದಿಲ್ಲ ಅಥವಾ ಯುಎಸ್ ಡಾಲರ್ ವಿರುದ್ಧ ರೂಪಾಯಿ ಬಲವಾಗಿಲ್ಲ, ಮತ್ತು ಉದ್ಯೋಗಗಳು ಕಾಣೆಯಾಗಿವೆ ಎಂದು ಟೀಕಿಸಿದ್ದಾರೆ.



ದೇಶದ ಕಳಪೆ ಆರ್ಥಿಕ ಪರಿಸ್ಥಿತಿಯ ಹಿಂದೆ ಯಾರು ಇದ್ದಾರೆ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಪ್ರಿಯಾಂಕಾ ಗಾಂಧಿ ಮೋದಿ ಸರ್ಕಾರವನ್ನು ಆಗ್ರಹಿಸಿದರು. 2019-20ರ ಅವಧಿಯಲ್ಲಿ  ಜಿಡಿಪಿ ಏಳು ವರ್ಷಗಳಲ್ಲೇ ಕನಿಷ್ಠ ಶೇ 5 ಕ್ಕೆ ಇಳಿದಿದೆ ಎಂದು ಸರ್ಕಾರದ ಅಂಕಿ ಅಂಶಗಳು ತೋರಿಸಿದ ನಂತರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.


'2019-20ರ ತ್ರೈಮಾಸಿಕ 1 ರಲ್ಲಿ ಸ್ಥಿರವಾದ (2011-12) ಬೆಲೆಗಳು 35.85 ಲಕ್ಷ ಕೋಟಿ ರೂ ಎಂದು ಅಂದಾಜಿಸಲಾಗಿದೆ, 2018-19ರ ತ್ರೈಮಾಸಿಕ 1 ರಲ್ಲಿ 34.14 ಲಕ್ಷ ಕೋಟಿ ರೂ.ಗಳಂತೆ, ಇದು ಬೆಳವಣಿಗೆಯ ದರವನ್ನು 5.0 ರಷ್ಟು ತೋರಿಸುತ್ತದೆ ಎಂದು ಸರ್ಕಾರ ಹೇಳಿಕೆ ನೀಡಿತ್ತು.