ಬಿಹಾರ ಲೋಕಸಭಾ ಚುನಾವಣಾ ಫಲಿತಾಂಶ: 40 ಕ್ಷೇತ್ರಗಳ ಪೈಕಿ 38ರಲ್ಲಿ ಎನ್ಡಿಎ ಮುನ್ನಡೆ
ಬಿಹಾರದಲ್ಲಿ 40 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಪ್ರಗತಿಯಲ್ಲಿದೆ.
ಪಾಟ್ನಾ: ಬಿಹಾರದಲ್ಲಿ 40 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಪ್ರಗತಿಯಲ್ಲಿದೆ. ಈ ಬಾರಿ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ 5 VVPAT ಯಂತ್ರಗಳನ್ನು ಅಳವಡಿಸಲಾಗಿದ್ದು ಚುನಾವಣಾ ಫಲಿತಾಂಶ ತಡವಾಗಿ ಪ್ರಕಟಗೊಳ್ಳಲಿದೆ ಎನ್ನಲಾಗಿದೆ. ಆರಂಭಿಕ ಟ್ರೆಂಡ್ ಪ್ರಕಾರ ಬಿಹಾರದ 40 ಲೋಕಸಭಾ ಕ್ಷೇತ್ರಗಳ ಪೈಕಿ 38 ರಲ್ಲಿ ಎನ್ಡಿಎ ಮುನ್ನಡೆಮುನ್ನಡೆ ಕಾಯ್ದುಕೊಂಡಿದೆ.
ಬಿಹಾರದಲ್ಲಿ ಏಳು ಹಂತಗಳಲ್ಲಿ ಮತದಾನ ನಡೆಯಿತು. ಬಿಜೆಪಿ ನೇತೃತ್ವದ ಎನ್ಡಿಎ ಮತ್ತು ಆರ್ಜೆಡಿ ನೇತೃತ್ವದ ಮಹಾಗಟಬಂಧನ್ ನಡುವೆ ಪ್ರಮುಖ ಜಿದ್ದಾಜಿದ್ದಿ ಏರ್ಪಟ್ಟಿದೆ. ಹಿರಿಯ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ವಿರುದ್ಧ ಎರಡು ಬಾರಿ ಎಂಪಿ (ಬಿಜೆಪಿ ಟಿಕೆಟ್) ಶತ್ರುಘ್ನ ಸಿನ್ಹಾ ಅವರನ್ನು ಪಟ್ನಾ ಸಾಹಿಬ್ನಲ್ಲಿ ಕಾಂಗ್ರೆಸ್ ಕಣಕ್ಕಿಳಿಸಿದೆ.
ಬಿಜೆಪಿಯ ರಾಮ್ ಕೃಪಾಲ್ ಯಾದವ್ ಮತ್ತು ಆರ್ಜೆಡಿ ಅವರ ಮಿಸಾ ಭಾರ್ತಿ(ಲಾಲು ಅವರ ಮಗಳು) ನಡುವೆ ಮತ್ತೊಂದು ಪ್ರಮುಖ ಸ್ಪರ್ಧೆ ಇದೆ. 2014 ರಲ್ಲಿ, ರಾಮ್ ಕೃಪಾಲ್ ಯಾದವ್ ಅವರು 40,000 ಮತಗಳಿಂದ ಲಾಲು ಪ್ರಸಾದ್ ಯಾದವ್ ಮಗಳಾದ ಮಿಸಾ ಅವರನ್ನು ಸೋಲಿಸಿದ್ದರು. ಇದಲ್ಲದೆ ಬೆಗುಸಾರೈನಲ್ಲಿ ಕೇಂದ್ರ ಸಚಿವ ಗಿರಿರಾಜ್ ಸಿಂಗ್ (ಬಿಜೆಪಿ) ಸಿಪಿಐನ ಕನ್ಹೈಯ ಕುಮಾರ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.