ನವದೆಹಲಿ: ಬಿಜೆಪಿಯ ಮಹಿಳಾ ಕಾರ್ಯಕರ್ತರ ಗಂಡಂದಿರು ನರೇಂದ್ರ ಮೋದಿಯವರನ್ನು ಭೇಟಿಯಾಗಿದರೆ ಅವರಿಗೆ ಭಯವಾಗುತ್ತದೆ ಏಕೆಂದರೆ ಮೋದಿಯಂತೆ ತಮ್ಮ ಹೆಂಡತಿಯನ್ನು ಅವರು ತೊರೆದು ಹೋಗಬಹುದೆಂದು ಅವರು ಭಯಪಡುತ್ತಾರೆ ಎಂದು ಬಿಎಸ್ಪಿ ನಾಯಕಿ ಮಾಯಾವತಿ ಸೋಮವಾರದಂದು ವ್ಯಂಗ್ಯವಾಡಿದ್ದಾರೆ.


COMMERCIAL BREAK
SCROLL TO CONTINUE READING

"ಬಿಜೆಪಿಯಲ್ಲಿ ವಿವಾಹಿತ ಮಹಿಳಾ ನಾಯಕಿಯರು ತಮ್ಮ ಗಂಡಂದಿರು ಪ್ರಧಾನಿ ಬಳಿ ಹೋಗುತ್ತಿದ್ದರೆ ಅವರಿಗೆ ಭಯವಾಗುವ ಬಗ್ಗೆ ನಾನು ತಿಳಿದುಕೊಂಡಿದ್ದೇನೆ. ಏಕೆಂದರೆ ಮೋದಿಯಂತೆ ತಮ್ಮ ಹೆಂಡತಿಯನ್ನು ಅವರು ತೊರೆದು ಹೋಗಬಹುದೆಂದು ಭಯಪಡುತ್ತಾರೆ 'ಎಂದು ಮಾಯಾವತಿ ಹೇಳಿದರು. 


ಇದೇ ವೇಳೆ ಮಾಯಾವತಿ ಅವರು ಮೋದಿ ಅವರ ಹೆಂಡತಿಯ ಗೌರವಾರ್ಥವಾಗಿ ಪ್ರಧಾನಿ ಮೋದಿ  ಪರವಾಗಿ ತಮ್ಮ ಮತ ಚಲಾಯಿಸುವಂತಿಲ್ಲ ಎಂದು ಮಹಿಳಾ ಮತದಾರರಲ್ಲಿ ಮನವಿ ಮಾಡಿಕೊಂಡರು. ಮಾಯಾವತಿ  ಅಲ್ವಾರ್ ಸಾಮೂಹಿಕ ಅತ್ಯಾಚಾರದ ಘಟನೆ ವಿಚಾರವಾಗಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎನ್ನುವ ಪ್ರಧಾನಿ ಮೋದಿ ಆರೋಪಕ್ಕೆ ತಿರುಗೇಟು ನೀಡಿದ ಮಾಯಾವತಿ "ಮೋದಿ ಈ ಘಟನೆ ಮೇಲೆ ಕೊಳಕು ರಾಜಕೀಯ ಮಾಡುತ್ತಿದ್ದಾರೆ. ಆ ಮೂಲಕ ಚುನಾವಣೆಯಲ್ಲಿ ತಮ್ಮ ಪಕ್ಷ ರಾಜಕೀಯ ಲಾಭವನ್ನು ಪಡೆಯುವುದು ಅವರ ಉದ್ದೇಶವಾಗಿದೆ ಎಂದರು. 


ಇನ್ನು ಮುಂದುವರೆದು ಮೋದಿ ವಿರುದ್ದ ಹರಿಹಾಯ್ದ ಮಾಯಾವತಿ" ರಾಜಕೀಯ ಲಾಭಕ್ಕಾಗಿ ಹೆಂಡತಿಯನ್ನೇ ತೊರೆದ ವ್ಯಕ್ತಿ ಅದೇಗೆ ಇತರ ಸಹೋದರಿಯರನ್ನು ಹಾಗೂ ಇತರರ ಪತ್ನಿಯನ್ನು ಹೇಗೆ ಗೌರವಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.