ನವದೆಹಲಿ: ಕೇಂದ್ರದಲ್ಲಿ ಮತ್ತೆ ಸರ್ಕಾರ ರಚಿಸಲು ಎನ್ ಡಿಎ ಮೈತ್ರಿಕೂಟದ ಸಂಖ್ಯೆ ಅವಶ್ಯವೆಂದು ಬಿಜೆಪಿ ನಾಯಕ ರಾಮ್ ಮಾಧವ್ ಅಭಿಪ್ರಾಯಪಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಬ್ಲೂಮ್ ಬರ್ಗ್ ಗೆ ನೀಡಿರುವ ಸಂದರ್ಶನದಲ್ಲಿ ರಾಮ್ ಮಾಧವ್ " ಒಂದು ವೇಳೆ ನಾವು 271 ಸ್ಥಾನಗಳನ್ನು ಗೆದ್ದರೆ ನಿಜಕ್ಕೂ ಸಂತಸವಾಗುತ್ತದೆ,ಆದರೆ ಎನ್ ಡಿ ಎ ಮೈತ್ರಿಕೂಟದಿಂದ ಪೂರ್ಣ ಬಹುಮತವನ್ನು ಪಡೆಯುತ್ತೇವೆ.  ಪೂರ್ವ ಭಾಗದಲ್ಲಿ ಅದೇ ರೀತಿ ದಕ್ಷಿಣ ಭಾರತದಲ್ಲಿ ಹೆಚ್ಚಿನ ಪ್ರಯತ್ನವನ್ನು ಹಾಕಿದಲ್ಲಿ ನಮಗೆ ಹೆಚ್ಚು ಅನುಕೂಲವಾಗಲಿದೆ. ರಾಜಕಾರಣಿಗಳಾದ ನಾವು ನೆನಪಿಟ್ಟುಕೊಳ್ಳುವ ಪ್ರಮುಖ ಸಂಗತಿ ಏನೆಂದರೆ ಕಳೆದ ಸಾರಿ ನಾವೇನು ಸಾಧಿಸಿದ್ದೆವೋ ಅದು ಈ ಬಾರಿ ಆಡಳಿತ ವಿರೋಧಿ ಅಲೆಯಿಂದಾಗಿ ಅಸಾಧ್ಯವಾಗಬಹುದು ಎಂದು ಹೇಳಿದರು.


ಕಳೆದ ಬಾರಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದ ಮೋದಿ ನೇತೃತ್ವದ ಸರ್ಕಾರ ಈ ಬಾರಿ ಬಹುಮತದ ಕೊರತೆಯನ್ನು ಅನುಭವಿಸಲಿದೆ ಎನ್ನಲಾಗಿದೆ.ಪ್ರಮುಖವಾಗಿ ಉತ್ತರ ಭಾರತದ ಹಿಂದಿ ರಾಜ್ಯಗಳಲ್ಲಿ ಬಿಜೆಪಿ ಕಳೆದ ಬಾರಿ ಗಳಿಸಿದ ಸ್ಥಾನಗಳಿಂತಲೂ ಕಡಿಮೆ ಸ್ಥಾನವನ್ನು ಗಳಿಸುವ ಹಿನ್ನಲೆಯಲ್ಲಿ ಪೂರ್ಣ ಬಹುಮತದ ಕೊರತೆಯನ್ನು ಅನುಭವಿಸಲಿದೆ ಎನ್ನಲಾಗಿದೆ.