ಕೈ ತಪ್ಪಿದ ಟಿಕೆಟ್: ರಾಜಕೀಯಕ್ಕೆ ಗುಡ್ ಬೈ ಹೇಳಿದ ಬಿಜೆಪಿ ಸಂಸದ ಹರ್ಷವರ್ಧನ್!
BJP MP Harsh Vardhan quits politics: ಲೋಕಸಭಾ ಚುನಾವಣೆಗೆ ಆಡಳಿತಾರೂಢ ಬಿಜೆಪಿ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಆದರೆ ಹಾಲಿ ಸಂಸದರಾದ ಪರ್ವೇಶ್ ವರ್ಮಾ, ರಮೇಶ್ ಬಿಧುರಿ, ಮೀನಾಕ್ಷಿ ಲೇಖಿ ಮತ್ತು ಹರ್ಷವರ್ಧನ್‌ರನ್ನು ಕೈಬಿಡಲಾಗಿದೆ.
ನವದೆಹಲಿ: ಮುಂಬರುವು ಲೋಕಸಭಾ ಚುನಾವಣೆಗೆ ಬಿಜೆಪಿ ಶನಿವಾರ(ಮಾರ್ಚ್ 2) ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಕೇಂದ್ರದ ಮಾಜಿ ಸಚಿವ ಮತ್ತು ಬಿಜೆಪಿ ಸಂಸದ ಹರ್ಷವರ್ಧನ್ ಅವರು ಭಾನುವಾರ(ಮಾ.3) ರಾಜಕೀಯಕ್ಕೆ ವಿದಾಯ ಘೋಷಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಭಾನುವಾರ ಮಾಡಿರುವ ಅವರು, ʼ30 ವರ್ಷಗಳ ಚುನಾವಣಾ ವೃತ್ತಿಜೀವನದ ನಂತರ ನಾನು ಎಲ್ಲಾ 5 ವಿಧಾನಸಭಾ ಮತ್ತು 2 ಸಂಸತ್ತಿನ ಚುನಾವಣೆಗಳನ್ನು ಉತ್ತಮ ಅಂತರದಿಂದ ಗೆದ್ದು, ಪಕ್ಷ ಸಂಘಟನೆ, ರಾಜ್ಯ ಮತ್ತು ಕೇಂದ್ರದ ಸರ್ಕಾರಗಳಲ್ಲಿ ಪ್ರತಿಷ್ಠಿತ ಸ್ಥಾನಗಳನ್ನು ಹೊಂದಿದ್ದೇನೆ. ಇದೀಗ ನಾನು ನನ್ನ ಮೂಲಕ್ಕೆ ಮರಳಲು ಅಂತಿಮವಾಗಿ ತಲೆಬಾಗುತ್ತೇನೆ. ನಾನು ಮುಂದುವರಿಯುತ್ತೇನೆ, ನನಗೆ ಇನ್ನು ಕಾಯಲು ಸಾಧ್ಯವಿಲ್ಲ. ನನ್ನ ಕ್ಷೇತ್ರದ ಜನರ ಆಸೆಗಳನ್ನು ಪೂರ್ತಿ ಮಾಡುವ ಭರವಸೆ ಹೊಂದಿದ್ದೇನೆ. ನಾನು ಇನ್ನೂ ಹಲವಾರು ಮೈಲುಗಳನ್ನು ಕ್ರಮಿಸಿಬೇಕಿದೆ. ಕೃಷ್ಣಾದಲ್ಲಿರುವ ನನ್ನ ENT ಕ್ಲಿನಿಕ್ ನಗರವೂ ನನ್ನ ವಾಪಸಾತಿಗೆ ಕಾಯುತ್ತಿದೆʼ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
BJP Candidate List: ಬಿಜೆಪಿ ಮೊದಲ ಪಟ್ಟಿಯಲ್ಲಿ 195ರಲ್ಲಿ ಇರುವ ಕೇವಲ ಓರ್ವ ಮುಸ್ಲಿಂ ಅಭ್ಯರ್ಥಿ ಡಾ.ಅಬ್ದುಲ್ ಸಲಾಂ ಯಾರು ಗೊತ್ತಾ?
ಸಂಸದ ಹರ್ಷವರ್ಧನ್ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದು, ರಾಜಕೀಯ ನಿವೃತ್ತಿ ಘೋಷಣೆ ಬಳಿಕ ಅವರು ಮತ್ತೆ ವೈದ್ಯ ವೃತ್ತಿಗೆ ಮರಳುವುದಾಗಿ ಹೇಳಿದ್ದಾರೆ. ಕೇಂದ್ರದಲ್ಲಿ ಅವರು ಆರೋಗ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಲೋಕಸಭಾ ಚುನಾವಣೆಗೆ ಆಡಳಿತಾರೂಢ ಬಿಜೆಪಿ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಆದರೆ ಹಾಲಿ ಸಂಸದರಾದ ಪರ್ವೇಶ್ ವರ್ಮಾ, ರಮೇಶ್ ಬಿಧುರಿ, ಮೀನಾಕ್ಷಿ ಲೇಖಿ ಮತ್ತು ಹರ್ಷವರ್ಧನ್‌ರನ್ನು ಕೈಬಿಡಲಾಗಿದೆ. ಇವರ ಬದಲಿಗೆ ಹೊಸ ಮುಖಗಳನ್ನು ಕಣಕ್ಕಿಳಿಸಿದೆ.
ಇದೇ ಕಾರಣಕ್ಕೆ ಅವರು ರಾಜಕೀಯಕ್ಕೆ ಗುಡ್ ಬೈ ಹೇಳುವ ನಿರ್ಧಾರ ತೆಗೆದುಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ. ಅಂದಹಾಗೆ ಹರ್ಷವರ್ಧನ್ ಅವರು ದೆಹಲಿಯ ಚಾಂದಿನಿ ಚೌಕ್ ಕ್ಷೇತ್ರದಿಂದ 2 ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಆದರೆ ಈ ಬಾರಿ ಹರ್ಷವರ್ಧನ್ ಅವರ ಬದಲು ಪ್ರವೀಣ್ ಖಂಡೇಲವಾಲ್‌ಗೆ ಬಿಜೆಪಿ ಟಿಕೆಟ್ ನೀಡಿದೆ. ಇದೇ ವೇಳೆ ತಮ್ಮ ಎಲ್ಲಾ ಕಾರ್ಯಕರ್ತರಿಗೆ ಧನ್ಯವಾದಗಳನ್ನು ತಿಳಿಸಿರುವ ಹರ್ಷವರ್ಧನ್ ಅವರು ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಮತ್ತೆ ಗೆದ್ದು ಬರಲಿ ಎಂದು ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: ಬಿಜೆಪಿಯ ದೇಣಿಗೆ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ!; ಪಕ್ಷಕ್ಕೆ ಮೋದಿ ಮಾಡಿದ ದಾನ ಎಷ್ಟು..?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.