`Nethaji Bose ಸಾವಿಗೆ ಕಾರಣ ಕಾಂಗ್ರೆಸ್`, ಮತ್ತೊಂದು ವಿವಾದಕ್ಕೆ ಕಾರಣವಾದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್
ಪರಾಕ್ರಮ ದಿವಸ್ ಸಮಾರಂಭದಲ್ಲಿ ಮಾತನಾಡಿದ ಸಾಕ್ಷಿ ಮಹಾರಾಜ್, ಸುಭಾಷ್ ಚಂದ್ರ ಬೋಸ್ ಅವರ ಜನಪ್ರಿಯತೆಯನ್ನು ಸಹಿಸದ ಕಾಂಗ್ರೆಸ್ ಅವರನ್ನು ಕೊಲ್ಲಿಸುವ ಷಡ್ಯಂತ್ರ ಹೂಡಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಉತ್ತರಪ್ರದೇಶ, ಉನ್ನಾವೋ: ಉನ್ನಾವೋ ಕ್ಷೇತ್ರದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ (Saksji Maharaj) ಮತ್ತೊಂದು ವಿವಾದವನ್ನು ಎಳೆದುಕೊಂಡಿದ್ದಾರೆ. ಉನ್ನಾವೋದಲ್ಲಿ ನಡೆದ ಪರಾಕ್ರಮ ದಿವಸ್ (Parakram Diwas) ಸಮಾರಂಭದಲ್ಲಿ ಮಾತನಾಡಿದ ಸಾಕ್ಷಿ ಮಹಾರಾಜ್, ಸುಭಾಷ್ ಚಂದ್ರ ಬೋಸ್ (Subhas Chandra Bose)ಅವರ ಜನಪ್ರಿಯತೆಯನ್ನು ಸಹಿಸದ ಕಾಂಗ್ರೆಸ್ ಅವರನ್ನು ಕೊಲ್ಲಿಸುವ ಷಡ್ಯಂತ್ರ ಹೂಡಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ.
‘’ಆ ದಿನಗಳಲ್ಲಿ ನೇತಾಜಿ ಜನಪ್ರಿಯತೆ ಉನ್ನತ ಮಟ್ಟಕ್ಕೆ ತಲುಪಿತ್ತು. ಇಡೀ ದೇಶ ನೇತಾಜಿ (Netaji) ಅವರ ಬೆಂಬಲಕ್ಕೆ ನಿಂತು ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಸಜ್ಜಾಗಿತ್ತು. ಆದರೆ ಕಾಂಗ್ರೆಸ್ ನಾಯಕರಾದ ಮಹಾತ್ಮ ಗಾಂಧಿ (Mahathma Gandhi) ಮತ್ತು ಜವಾಹರ್ ಲಾಲ್ ನೆಹರು ಕೂಡಾ ಅವರ ಜನಪ್ರಿಯತೆಗೆ ಸಮ ಆಗಿರಲಿಲ್ಲ. ಇದು ಕಾಂಗ್ರೆಸ್ ಗೆ (Congress) ಅಪಥ್ಯವಾಗಿತ್ತು. ನೇತಾಜಿ ಅವರನ್ನು ಹೇಗಾದರೂ ಮಾಡಿ ಜನಮಾನಸದಿಂದ ದೂರಮಾಡಬೇಕು ಎಂದು ಕಾಂಗ್ರೆಸ್ ಷಡ್ಯಂತ್ರ ರೂಪಿಸಿತ್ತು’’ ಎಂದು ಸಾಕ್ಷಿ ಮಹಾರಾಜ್ (Sakshi Maharaj) ನೇರ ಆರೋಪ ಮಾಡಿದ್ದಾರೆ.
ನೇತಾಜಿ ವಿಮಾನ ಅಪಘಾತದಲ್ಲಿ ಮೃತಪಟ್ಟರೇ? ಸುಭಾಷ್ ಚಂದ್ರ ಬೋಸ್ ಪುತ್ರಿ ಹೇಳಿದ್ದೇನು?
ಸುಭಾಷ್ ಚಂದ್ರ ಬೋಸ್ (Subhas Chandra Bose) ವಿಮಾನ ದುರಂತದಲ್ಲಿ ಪ್ರಾಣಕಳೆದುಕೊಂಡರು. ಈ ದುರಂತದಲ್ಲಿ ಕಾಂಗ್ರೆಸ್ ಕೈವಾಡವಿದೆ ಇದು ನನ್ನ ವೈಯುಕ್ತಿಕ ಅಭಿಪ್ರಾಯ ಎಂದು ಸಾಕ್ಷಿ ಮಹಾರಾಜ್ ಹೇಳಿದ್ದಾರೆ.
ಉನ್ನಾವೋ ಬಿಜೆಪಿ (BJP) ಸಂಸದರಾಗಿರುವ ಸಾಕ್ಷಿ ಮಹಾರಾಜ್ ಸದಾಯಾವುದಾದರೂ ಒಂದು ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಇರುತ್ತಾರೆ. ಸುಭಾಶ್ ಚಂದ್ರ ಬೋಸ್ ಕುರಿತ ಅವರ ಈ ಹೇಳಿಕೆ ಅವರ ವಿವಾದಗಳ ಪಟ್ಟಿಗೆ ಹೊಸ ಸೇರ್ಪಡೆ.
ಇದನ್ನೂ ಓದಿ :"ನನ್ನನ್ನು ಇಲ್ಲಿಗೆ ಕರೆದ ನಂತರ ಅವಮಾನಿಸಬೇಡಿ, ಇದು ರಾಜಕೀಯ ಕಾರ್ಯಕ್ರಮವಲ್ಲ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.