ನವದೆಹಲಿ: ಮಧ್ಯಪ್ರದೇಶದ ಮುಂಗಾವಲಿ ಮತ್ತು ಕೊಲಾರಸ್ ನ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿಯು ಹೀನಾಯವಾಗಿ ಸೋಲನ್ನನುಭವಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಚಹರೆಯನ್ನು ಬದಲಿಸಬೇಕಾಗಿದೆ ಎಂದು ಆರ್,ಎಸ್,ಎಸ್ ಮತ್ತು ಭಾರತ ರಕ್ಷಾ ಮಂಚ್ ನ ರಾಷ್ಟ್ರೀಯ ಸಂಚಾಲಕರಾದ ಸೂರ್ಯಕಾಂತ್ ಕೇಲ್ಕರ್ ಅಭಿಪ್ರಾಯಪಟ್ಟಿದ್ದಾರೆ.


COMMERCIAL BREAK
SCROLL TO CONTINUE READING

 ಸೂರ್ಯಕಾಂತ್ ಕೇಳ್ಕರ್ ಪ್ರಸ್ತುತ ಮಧ್ಯಪ್ರದೇಶದ ಮುಖ್ಯಮಂತ್ರಿಗಳಾಗಿರುವ ಶಿವರಾಜ್ ಸಿಂಗ್ ಚೌಹಾಣ್ ರನ್ನು ರಾಜಕೀಯಕ್ಕೆ ಪರಿಚಯಿಸಿದವರು, ತುರ್ತುಪರಿಸ್ಥಿತಿಯ ವೇಳೆಯಲ್ಲಿ ಎಬಿವಿಪಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೇಳ್ಕರ್, ಆ ಸಂದರ್ಭದಲ್ಲಿ ತಮ್ಮ ಡೈರಿಯಲ್ಲಿ ಚೌಹಾಣ್ ಹೆಸರಿದ್ದ ಕಾರಣದಿಂದಾಗಿ ಅವರನ್ನು ಪೊಲೀಸರು ಬಂಧಿಸಲ್ಪಟ್ಟಿದ್ದರು. ಈ ವೇಳೆಯಲ್ಲಿ ಕೇಳ್ಕರ್ ಚೌಹಾಣ್ ರವರಿಗೆ ರಾಜಕೀಯ ಸೇರಲು ಸಲಹೆ ನೀಡಿದ್ದರು. 


ಇತ್ತೀಚೆಗೆ ಮುಂಗಾವಳಿ ಮತ್ತು ಕೊಲಾರಸ್ ನ ಉಪಚುನಾವಣೆಯ ಫಲಿತಾಂಶವು ಆಡಳಿತ ವಿರೋಧಿಯ ಅಲೆಯ ಕಾರಣದಿಂದಾಗಿ ಸೋಲನ್ನು ಅನುಭವಿಸಿವೆ. ಆದ್ದರಿಂದ ಬಿಜೆಪಿಯು ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿಯನ್ನು ಬದಲಾಯಿಸಬೇಕು ಮತ್ತು ಹೊಸ ಮುಖಗಳನ್ನು ಸಂಪುಟದಲ್ಲಿ ಸೇರಿಸಬೇಕು ಎಂದು  ಕೇಳ್ಕರ್ ಸಲಹೆ ನೀಡಿದ್ದಾರೆ.