Muslim Reservation: ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂಬರುವ ಲೋಕಸಭೆ ಚುನಾವಣೆಗೆ ಸಕ್ರಿಯರಾಗಿದ್ದಾರೆ. ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಶನಿವಾರ ಮುಸ್ಲಿಂ ಮೀಸಲಾತಿ ಕುರಿತು ಶಾ ದೊಡ್ಡ ಹೇಳಿಕೆಯೊಂದನ್ನು ನೀಡಿದ್ದಾರೆ. ಸಂವಿಧಾನಕ್ಕೆ ವಿರುದ್ಧವಾದ ಮುಸ್ಲಿಂ ಮೀಸಲಾತಿ ಬೇಡ ಎಂದು ಬಿಜೆಪಿ ನಂಬುತ್ತದೆ ಎಂದು ಅವರು ಹೇಳಿದ್ದಾರೆ. ಧರ್ಮಾಧಾರಿತ ಮೀಸಲಾತಿ ಇರಬಾರದು. ಈ ಬಗ್ಗೆ ಉದ್ಧವ್ ಠಾಕ್ರೆ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಶಾ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರನ್ನು ಪ್ರಶ್ನಿಸಿದ ಗೃಹ ಸಚಿವ ಅಮಿತ್ ಶಾ, "ಕರ್ನಾಟಕದಲ್ಲಿ ರಚನೆಯಾದ ಸರ್ಕಾರ ವೀರ್ ಸಾವರ್ಕರ್ ಅವರನ್ನು ಇತಿಹಾಸದ ಪುಸ್ತಕಗಳಿಂದ ಅಳಿಸಲು ಬಯಸಿದೆ. ಇದ್ನನ್ನು ನೀವು ಒಪ್ಪುತ್ತೀರಾ? ಎಂದು ಕೇಳಿದ್ದಾರೆ.  ಬಳಿಕ ಮಹಾನ್ ದೇಶಪ್ರೇಮಿ, ತ್ಯಾಗದ ವ್ಯಕ್ತಿ ವೀರ್ ಸಾವರ್ಕರ್ ಅವರನ್ನು  ಗೌರವಿಸಬೇಕೇ ಅಥವಾ ಬೇಡವೇ? ಎಂಬುದನ್ನು ನಾನು ನಾಂದೇಡ್ ಜನತೆಗೆ ಕೇಳುತ್ತೇನೆ. ಉದ್ಧವ್ ಜೀ, ನೀವು ನಿಮ್ಮ ಪಾದಗಳನ್ನು ಎರಡು ದೋಣಿಗಳಲ್ಲಿ ಇಡಲು ಸಾಧ್ಯವಿಲ್ಲ... ಉದ್ಧವ್ ಜೀ ಅವರ ಸರ್ಕಾರವನ್ನು ನಾವು ಒಡೆದಿದ್ದೇವೆ ಎಂದು ಉದ್ಧವ್ ಜೀ ಹೇಳುತ್ತಾರೆ. ನಾವು ಅವರ ಸರ್ಕಾರವನ್ನು ಒಡೆಯಲಿಲ್ಲ ಶಿವಸೈನಿಕರು ನಿಮ್ಮ ಪಕ್ಷವನ್ನು ತೊರೆದರು ನಿಮ್ಮ ನೀತಿ-ವಿರೋಧಿ ಮಾತುಕತೆಗಳಿಂದ ಬೇಸರಗೊಂಡ ನಂತರ ಅದು ಸಂಭವಿಸಿದೆ" ಎಂದು ಶಾ ಹೇಳಿದ್ದಾರೆ. 


ಇದನ್ನೂ ಓದಿ-General Elections 2024: ಒಂದರ ಮೇಲೊಂದರಂತೆ ರಾಹುಲ್ ಗಾಂಧಿ ಮೇಲೆ ಆರೋಪಗಳ ಸುರಿಮಳೆಗೈದ ಅಮಿತ್ ಶಾ


ರಾಹುಲ್ ವಿದೇಶಕ್ಕೆ ಹೋಗಿ ದೇಶಕ್ಕೆ ಅವಮಾನ ಮಾಡಿದ್ದಾರೆ
ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡ ಅಮಿತ್ ಶಾ, ''ಪ್ರಧಾನಿ ನರೇಂದ್ರ ಮೋದಿ ಹೋದಲ್ಲೆಲ್ಲಾ ಮೋದಿ...ಮೋದಿ...ಮೋದಿ ಎಂಬ ಘೋಷಣೆಗಳು ಮೊಳಗುತ್ತವೆ...ಒಂದೆಡೆ ಮೋದಿಜಿಗೆ ವಿಶ್ವದಲ್ಲಿ ಗೌರವ ಸಿಗುತ್ತಿದೆ. ಮತ್ತೊಂದೆಡೆ, ಕಾಂಗ್ರೆಸ್ ಯುವರಾಜ ರಾಹುಲ್ ಬಾಬಾ ವಿದೇಶಕ್ಕೆ ಹೋಗಿ ದೇಶಕ್ಕೆ ಅವಮಾನ ಮಾಡುತ್ತಿದ್ದಾರೆ' ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-NCP ಯಲ್ಲಿ ಸುಪ್ರಿಯಾ ಸುಳೆಗೆ ಮಹತ್ವದ ಜವಾಬ್ದಾರಿ, ಪವರ್ ಗೇಮ್ ನಿಂದ ಅಜಿತ್ ಪವಾರ್ ಔಟ್

ದೇಶದಲ್ಲಿ ರಾಹುಲ್ ಗಾಂಧಿ ಮಾತು ಕೇಳುವವರು ತುಂಬಾ ವಿರಳ
ನಾಂದೇಡ್‌ನಲ್ಲಿ ಮಾತನಾಡಿದ ಶಾ, ರಾಹುಲ್ ಬಾಬಾ ವಿದೇಶದಲ್ಲಿ ದೇಶದ ರಾಜಕೀಯದ ಬಗ್ಗೆ ಮಾತನಾಡುವುದಿಲ್ಲವೇ?  ಗೊತ್ತಿಲ್ಲದಿದ್ದರೆ ಹಿರಿಯ ಕಾಂಗ್ರೆಸ್ ನಾಯಕರನ್ನು ಕೇಳಿ. ರಾಹುಲ್ ಬಾಬಾ ಇಲ್ಲಿ ಮಾತನಾಡುವುದಿಲ್ಲ, ವಿದೇಶದಲ್ಲಿ ಮಾತನಾಡುತ್ತಾರೆ ಏಕೆಂದರೆ ಅವರ ಮಾತು ಕೇಳುವವರ ಸಂಖ್ಯೆ ಇಲ್ಲಿ ಕಡಿಮೆಯಾಗಿದೆ ಎಂದು ಶಾ ವಾಗ್ದಾಳಿ ನಡೆಸಿದ್ದಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l