ನವದೆಹಲಿ: ಬಿಜೆಪಿ ಪಕ್ಷದ ಸಂಸದರು ಮತ್ತು ಶಾಸಕರು ಪ್ರಚೋದನಾಕಾರಿ ಹೇಳಿಕೆ ನೀಡುವಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.


COMMERCIAL BREAK
SCROLL TO CONTINUE READING

ಈ ಪ್ರಚೋದನಾಕಾರಿ ಭಾಷಣ ಕೇಸ್ ಎದುರಿಸುತ್ತಿರುವವವರ ಕುರಿತಾಗಿ ಎಡಿಆರ್( ಅಸ್ಸೋಸಿಯಶನ್ ಫಾರ್ ಡೆಮೋಕ್ರಾಟಿಕ್ ರೀಫಾರ್ಮ್ಸ್) ನ್ಯಾಷನಲ್ ಎಲೆಕ್ಷನ್ ವಾಚ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಈ ಅಂಶವು ಬೆಳಕಿಗೆ ಬಂದಿದೆ.


ಈ ವರದಿಯ ಪ್ರಕಾರ ಒಟ್ಟು 58 ಸಂಸದರು ಮತ್ತು ಶಾಸಕರು ಪ್ರಚೋದನಾಕಾರಿ ಹೇಳಿಕೆಗೆ ದಾಖಲಾಗಿರುವ ಕೇಸ್ ಗಳನ್ನು ಘೋಷಣೆ ಮಾಡಿಕೊಂಡಿದ್ದು,ಅದರಲ್ಲಿ 15 ಸಂಸದರಲ್ಲಿ 10 ಸಂಸದರು ಬಿಜೆಪಿಯವರಾಗಿದ್ದಾರೆ.ಉಳಿದ ಪ್ರಕರಣಗಳು ಕ್ರಮವಾಗಿ ಎಐಯುಡಿಎಫ್.ಟಿಆರ್ಎಸ್, ಪಿಎಂಕೆ, ಎಐಎಂಐಎಂ,ಎಸ್ಎಚ್ಎಸ್, ಕ್ರಮವಾಗಿ ಒಂದೊಂದು ಕೇಸ್ ದಾಖಲಾಗಿದೆ.


ಇನ್ನು ಶಾಸಕರ ವಿಚಾರಕ್ಕೆ ಬರುವುದಾದರೆ,ಅದರಲ್ಲಿ 17 ಶಾಸಕರು ಬಿಜೆಪಿಯವರಾದರೆ, ಟಿಆರ್ಎಸ್(5) ಎಐಎಂಐಎಂ(5) ಟಿಡಿಪಿ(3) ಕಾಂಗ್ರೆಸ್ (2) ತೃಣಮೂಲ(2) ಎಸ್ಎಚ್ಎಸ್(2)ಡಿಎಂಕೆ,ಬಿಎಸ್ಪಿ ಹಾಗೂ ಇತರ ಶಾಸಕರು ಮೇಲೆ ಒಂದೊಂದು ಪ್ರಕರಣ ದಾಖಲಾಗಿದೆ.ಕಳೆದ ಐದು ವರ್ಷಗಳಲ್ಲಿ ಒಟ್ಟು 198 ಲೋಕಸಭಾ,ರಾಜ್ಯಸಭಾ,ಮತ್ತು ವಿಧಾನಸಭಾ ಅಭ್ಯರ್ಥಿಗಳು ತಮ್ಮ ಮೇಲಿನ ಪ್ರಚೋದನಕಾರಿ ಹೇಳಿಕೆ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.