ಪ್ರತಿಷ್ಟಿತ ಕೈರಾನಾ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆ
ನವದೆಹಲಿ: ಲೋಕಸಭೆಗಾಗಿ ನಡೆದ ನಾಲ್ಕು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಆದರೆ ಈ ಪ್ರತಿಷ್ಟಿತ ಕೈರಾನಾ ಕ್ಷೇತ್ರದಲ್ಲಿ ಅದು ಹಿನ್ನಡೆಯನ್ನು ಸಾಧಿಸಿದೆ.
ಸಧ್ಯದ ಟ್ರೆಂಡ್ ನ ಪ್ರಕಾರ ಮಹಾರಾಷ್ಟ್ರದ ಪಾಲ್ಗರ್ ಮತ್ತು ಭಂಡಾರಾ-ಗೋಂಡಿಯಾಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.ಆದರೆ ಉತ್ತರ ಪ್ರದೇಶದ ಕೈರಾನಾದಲ್ಲಿ ಹಿನ್ನಡೆ ಕಂಡಿದೆ. ಇಂದು ಕೈರಾನಾ,ಭಂಡಾರಾ-ಗೊಂಡಿಯಾ ಮತ್ತು ಪಾಲ್ಘರ್ ಮತ್ತು ನಾಗಾಲ್ಯಾಂಡ್ ಕ್ಷೇತ್ರಗಳ ಮತ ಎಣಿಕೆಯು ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಯಿತು. ಈ ಲೋಕಸಭಾ ಕ್ಷೇತ್ರದ ಫಲಿತಾಂಶಗಳು 2019 ರ ಲೋಕಸಭಾ ಚುನಾವಣೆಗೆ ಮುಂಚೂಣಿಯಲ್ಲಿವೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಮೇಲುಗೈ ಸಾಧಿಸಲು ಪ್ರಯತ್ನಿಸುತ್ತಿವೆ.
ಮೇ 30 ರಂದು ನಡೆದ ಮರು ಮತದಾನದ ಕೈರಾನಾ 61% ,ಭಂಡಾರಾ-ಗೊಂಡಿಯಾ 45% ಮತ್ತು ನಾಗಾಲ್ಯಾಂಡ್ 44.68% ರಷ್ಟು ಮತದಾನವಾಗಿತ್ತು.ಈ ಲೋಕಸಭಾ ಉಪಚುನಾವಣೆಯು ಮುಂಬರುವ 2019 ರ ಸಾರ್ವತ್ರಿಕ ಚುನಾವಣೆಯ ಮೇಲೆಯೂ ಪರಿಣಾಮ ಬೀರಲಿರುವುದರಿಂದ ಎಲ್ಲ ಪಕ್ಷಗಳು ಈ ಚುನಾವಣಾ ಫಲಿತಾಂಶವನ್ನು ಗಂಭೀರವಾಗಿ ಪರಿಣಮಿಸಿವೆ.