ನವದೆಹಲಿ: ಪಶ್ಚಿಮ ಬಂಗಾಳದಲ್ಲಿ 40 ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಭಾಷಣವೊಂದರಲ್ಲಿ ಪ್ರಧಾನಿ ಮೋದಿ ಹೇಳಿದ ಬೆನ್ನಲ್ಲೇ ಈಗ ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಏಳು ಎಎಪಿ ಶಾಸಕರನ್ನು10 ಕೋಟಿ ರೂ ದಲ್ಲಿ ಖರೀದಿಸಲು ಬಿಜೆಪಿ ಮುಂದಾಗಿದೆ ಎಂದು ಆರೋಪಿಸಿದ್ದಾರೆ.


COMMERCIAL BREAK
SCROLL TO CONTINUE READING

ಬಿಜೆಪಿಗೆ ಯಾವುದೇ ಅಭಿವೃದ್ಧಿ ವಿಷಯಗಳು ಇಲ್ಲದೆ ಇರುವುದರಿಂದ ಈಗ ಕುದುರೆ ವ್ಯಾಪಾರದ ಮೂಲಕ ಏಳು ಮಂದಿ ಶಾಸಕರನ್ನು10 ಕೋಟಿ ರೂ.ದರದಲ್ಲಿ ಖರೀದಿಸಲು ಪ್ರಯತ್ನಿಸುತ್ತಿದೆ ಎಂದು ಸಿಸೋಡಿಯಾ ತಿಳಿಸಿದರು. ಪಶ್ಚಿಮ ಬಂಗಾಳದ ಸೆರಾಂಪುರಿನ ರಾಲಿಯಲ್ಲಿ ಮೋದಿ ಅವರ ಹೇಳಿಕೆಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು ಇಂತಹ ಹೇಳಿಕೆಗಳು ಪ್ರಧಾನಿ ಗಣತೆಗೆ ಸರಿ ಹೊಂದುವುದಿಲ್ಲ. ಭಾರತವು ಪ್ರಜಾಪ್ರಬಹುತ್ವ ದೇಶವಾಗಿದೆ. ಅವರು ಈ ಸ್ಥಾನದಲ್ಲಿರುವುದು ಕೂಡ ಪ್ರಜಾಪ್ರಭುತ್ವದಿಂದ ಎಂದು ಹೇಳಿದರು. 


ಪ್ರಧಾನಿ ಬಂಗಾಳದಲ್ಲಿ ಸಾರ್ವಜನಿಕ ರ್ಯಾಲಿಯೊಂದರಲ್ಲಿ ಮೋದಿ ಭಾಷಣ ಮಾಡುತ್ತಾ ಟಿಎಂಸಿ 40 ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದರು.ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ತೃಣಮೂಲ ಕಾಂಗ್ರೆಸ್, ಮೋದಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿತ್ತು.


ಈಗ ಆಮ್ ಆದ್ಮಿ ಪಕ್ಷ ಮಾಡಿರುವ ಕುದುರೆ ವ್ಯಾಪಾರದ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. "ಅರವಿಂದ್ ಕೇಜ್ರಿವಾಲ್ ಅವರು ಎಎಪಿ ಶಾಸಕರ ದಂಗೆಯನ್ನು ತಡೆಯಲು ಸಾಧ್ಯವಿಲ್ಲ ಮತ್ತು ಅವರ ಆಂತರಿಕ ಸಮಸ್ಯೆಗಳಲ್ಲಿ ಬಿಜೆಪಿ ಹೆಸರನ್ನು ಎಳೆಯುತ್ತಿದ್ದಾರೆ" ಎಂದು ಅಶೋಕ್ ಗೋಯಲ್ ಹೇಳಿದ್ದಾರೆ.