ಬಿಜೆಪಿ ರಾಜ್ ಠಾಕ್ರೆ ಅವರನ್ನು ಬಳಸಿಕೊಳ್ಳುತ್ತಿದೆ-ಸಂಜಯ್ ರಾವತ್
ಜೂನ್ 5 ರಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರ ಅಯೋಧ್ಯೆ ಭೇಟಿಯನ್ನು ಮುಂದೂಡುವ ಸಾಧ್ಯತೆಯಿದೆ.ಇತ್ತೀಚೆಗೆ ಪುಣೆಗೆ ಭೇಟಿ ನೀಡಿದ್ದ ರಾಜ್ ಠಾಕ್ರೆ ಅವರು ಅನಾರೋಗ್ಯದ ಕಾರಣದಿಂದ ತಮ್ಮ ಭೇಟಿಯನ್ನು ರದ್ದುಪಡಿಸಿ ಮುಂಬೈಗೆ ಮರಳಿದ್ದರು.
ನವದೆಹಲಿ: ಜೂನ್ 5 ರಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರ ಅಯೋಧ್ಯೆ ಭೇಟಿಯನ್ನು ಮುಂದೂಡುವ ಸಾಧ್ಯತೆಯಿದೆ.ಇತ್ತೀಚೆಗೆ ಪುಣೆಗೆ ಭೇಟಿ ನೀಡಿದ್ದ ರಾಜ್ ಠಾಕ್ರೆ ಅವರು ಅನಾರೋಗ್ಯದ ಕಾರಣದಿಂದ ತಮ್ಮ ಭೇಟಿಯನ್ನು ರದ್ದುಪಡಿಸಿ ಮುಂಬೈಗೆ ಮರಳಿದ್ದರು.
ಈಗ ಸಿಕ್ಕಿರುವ ಮಾಹಿತಿ ಪ್ರಕಾರ ರಾಜ್ ಠಾಕ್ರೆ ಅವರ ಕಾಲಿಗೆ ಗಾಯವಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆ ಇದೆ.ಮಾಹಿತಿ ಪ್ರಕಾರ, ವೈದ್ಯರ ಸಲಹೆಯ ನಂತರವೇ ರಾಜ್ ಠಾಕ್ರೆ ಭೇಟಿಯ ಬಗ್ಗೆ ಅಧಿಕೃತ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ.
ಈಗ ಅವರ ಭೇಟಿ ಮುಂದೂಡಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಶಿವಸೇನಾ ಸಂಸದ ಸಂಜಯ್ ರಾವತ್ 'ಬಿಜೆಪಿಯು 'ಎಂಎನ್‌ಎಸ್ ಮುಖ್ಯಸ್ಥರನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ' ಎಂದು ಹೇಳಿದರು. "ಅಯೋಧ್ಯೆಯಲ್ಲಿ ಎಂಎನ್‌ಎಸ್ ಕೆಲವು ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ ಎಂದು ನನಗೆ ಮಾಧ್ಯಮಗಳಿಂದ ತಿಳಿದುಬಂದಿದೆ.ನಾವು ಅವರನ್ನು ಬೆಂಬಲಿಸುತ್ತಿದ್ದೆವು.ಅಯೋಧ್ಯೆಯಲ್ಲಿ ಶಿವಸೇನೆ ಬೆಂಬಲಿಗರ ದೊಡ್ಡ ವರ್ಗವಿದೆ. ಆದರೆ ಈಗ ರಾಜ್ ಠಾಕ್ರೆ ಅವರನ್ನು ಬಿಜೆಪಿಯವರು ಬಳಸುತ್ತಿದ್ದಾರೆ,ಆದರೆ ಕೆಲವರು ತಡವಾಗಿ ಅರ್ಥಮಾಡಿಕೊಳ್ಳುತ್ತಾರೆ' ಎಂದು ಹೇಳಿದರು.IPL 2022: ಅಮೋಘ ಪ್ರದರ್ಶನ ನೀಡುತ್ತಿರುವ ಫಾಸ್ಟ್ ಬೌಲರ್ .! ಜಹೀರ್ ಖಾನ್ ಗೆ ಹೋಲಿಸುತ್ತಿರುವ ಫ್ಯಾನ್ಸ್
ಎಂಎನ್‌ಎಸ್ ಅಧ್ಯಕ್ಷ ರಾಜ್ ಠಾಕ್ರೆ ಅವರು ಜೂನ್ 5 ರಂದು ಅಯೋಧ್ಯೆಗೆ ಭೇಟಿ ನೀಡಬೇಕಿತ್ತು.ಎಂಎನ್‌ಎಸ್ ಕೂಡ ಅಯೋಧ್ಯೆ ಭೇಟಿಗೆ ಸಿದ್ಧತೆ ಆರಂಭಿಸಿತ್ತು. ಅದೇ ಸಮಯದಲ್ಲಿ, ರಾಜ್ ಅವರ ಅಯೋಧ್ಯೆ ಭೇಟಿಯನ್ನು ಉತ್ತರ ಪ್ರದೇಶದ ನಾಯಕರಿಂದ ತೀವ್ರವಾಗಿ ವಿರೋಧಿಸಲಾಯಿತು. ಆದರೂ ರಾಜ್ ಅಯೋಧ್ಯೆಗೆ ಭೇಟಿ ನೀಡುವುದರಲ್ಲಿ ಅಚಲವಾಗಿದ್ದರು.ಶ್ರೀರಾಮನ ಆಶೀರ್ವಾದ ಪಡೆಯಲು ಜೂನ್ 5 ರಂದು ಅಯೋಧ್ಯೆಗೆ ಭೇಟಿ ನೀಡುವುದಾಗಿ ಏಪ್ರಿಲ್ 17 ರಂದು ಠಾಕ್ರೆ ಪುಣೆಯಲ್ಲಿ ಘೋಷಿಸಿದ್ದರು.
Pension Scheme : ಸರ್ಕಾರದ ಈ ಯೋಜನೆಯಲ್ಲಿ ಪಡೆಯಿರಿ ₹60,000 ಪಿಂಚಣಿ!
ಅಯೋಧ್ಯೆ ಪ್ರವಾಸವನ್ನು ಮುಂದೂಡಿರುವ ಬಗ್ಗೆ ರಾಜ್ ಠಾಕ್ರೆ ಟ್ವೀಟ್ ಮಾಡಿ 'ಅಯೋಧ್ಯೆ ಭೇಟಿಯನ್ನು ಮುಂದೂಡಲಾಗಿದೆ, ಮೇ 22 ರಂದು ಪುಣೆಯಲ್ಲಿ ನಡೆಯಲಿರುವ ರ್ಯಾಲಿಯ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು' ಎಂದು ಅವರು ಬರೆದಿದ್ದಾರೆ.
ರಾಜ್ ಠಾಕ್ರೆ ಅವರ ಅಯೋಧ್ಯೆ ಭೇಟಿಯನ್ನು ಘೋಷಿಸಿದಾಗಿನಿಂದ, ಅಯೋಧ್ಯೆಯ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರ ಭೇಟಿಯನ್ನು ವಿರೋಧಿಸಿದರು. ಮೊದಲು ರಾಜ್ ಠಾಕ್ರೆ ಉತ್ತರ ಭಾರತೀಯರ ಕ್ಷಮೆ ಯಾಚಿಸಬೇಕು ನಂತರ ಅಯೋಧ್ಯೆಗೆ ಬರಬೇಕು ಎಂದು ಹೇಳಿದರು. ಬಾಬರಿ ಮಸೀದಿ ಪ್ರಕರಣದಲ್ಲಿ ದಾವೆ ಹೂಡಿದ್ದ ಇಕ್ಬಾಲ್ ಅನ್ಸಾರಿ ಕೂಡ ಎಂಎನ್‌ಎಸ್ ಅಧ್ಯಕ್ಷ ರಾಜ್ ಠಾಕ್ರೆ ಅಯೋಧ್ಯೆಗೆ ಭೇಟಿ ನೀಡುವುದನ್ನು ವಿರೋಧಿಸಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.