ಭವಾನಿಪಟ್ನ (ಒಡಿಶಾ): ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಮೀಸಲಾತಿ ನೀತಿಯನ್ನು ಕೇಂದ್ರ ಸರ್ಕಾರ ಎಂದಿಗೂ ರದ್ದುಪಡಿಸುವುದಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಇಂದಿಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಸಂವಿಧಾನದಲ್ಲಿ ಬಿ.ಆರ್.ಅಂಬೇಡ್ಕರ್ ಅವರು ನಿರ್ಧರಿಸಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ನೀತಿಯನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ" ಎಂಡು ಅಮಿತ್ ಷಾ ಹೇಳಿದರು.


ವಿರೋಧ ಪಕ್ಷಗಳನ್ನು ಗುರಿಯಾಗಿಸಿದ ಷಾ
ಎಸ್ಸಿ-ಎಸ್ಟಿ (ದೌರ್ಜನ್ಯ ತಡೆಗಟ್ಟುವಿಕೆ) ಕಾಯಿದೆಗೆ ಸಂಬಂಧಿಸಿದಂತೆ ದೇಶವ್ಯಾಪಿ ನಡೆದ ಪ್ರತಿಭಟನೆಗೆವಿರೋಧ ಪಕ್ಷ ಕಾಂಗ್ರೆಸ್ ಮತ್ತು ವಿಪಕ್ಷ ದಳಗಳನ್ನು ಗುರಿಯಾಗಿಸಿದ ಅಮಿತ್ ಷಾ, 


"ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಸರ್ಕಾರ ಮರುಪರಿಶೀಲನೆ ಅರ್ಜಿಯನ್ನು ಸಲ್ಲಿಸಲಿದೆ ಎಂದು ಎಂದು ಪ್ರಧಾನಿ ಜನರಿಗೆ ಭರವಸೆ ನೀಡಿದರೂ ಬಂದ್'ಗೆ ಕರೆ ನೀಡಿದ್ದು ಯಾಕೆ? ಈ ಗಲಭೆಯಲ್ಲಿ 10ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡರು. ಇವರ ಸಾವಿಗೆ ಕಾಂಗ್ರೆಸ್ ಮತ್ತು ಇತರ ಪಕ್ಷಗಳೇ ಕಾರಣ ಎಂದು ಆರೋಪಿಸಿದರು. 


ಬಿಜೆಪಿ ಮೀಸಲಾತಿ ನೀತಿಯನ್ನು ಹಿಂಪಡೆಯುವುದಿಲ್ಲ
ಸುದ್ದಿ ವಾಹಿನಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಬಿಜೆಪಿ ಮೀಸಲಾತಿಯನ್ನು ಹಿಂಪಡೆಯಲು ಮುಂದಾಗಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. "ಈ ಸಾರ್ವಜನಿಕ ಸಭೆಯಲ್ಲಿ ಬಿಜೆಪಿಯು ಮೀಸಲಾತಿಯನ್ನು ಹಿಂಪಡೆಯುವುದಿಲ್ಲ. ಹಾಗೆಯೇ ಇತರರಿಗೂ ಅದನ್ನು ಮಾಡಲು ಬಿಡುವುದಿಲ್ಲ" ಎಂದು ಷಾ ಹೇಳಿದರು.


ಮುಂದುವರೆದು, "ನಾವು ಭಾರತದ ಸಂವಿಧಾನದಲ್ಲಿ ಸಂಪೂರ್ಣ ನಂಬಿಕೆಯನ್ನು ಹೊಂದಿದ್ದೇವೆ. ಸಂವಿಧಾನದಲ್ಲಿ ಬಿ.ಆರ್.ಅಂಬೇಡ್ಕರ್ ಅವರು ನಿಗದಿಪಡಿಸಿದ ಮೀಸಲಾತಿ ನೀತಿಯಲ್ಲಿ ಅಲ್ಪವೂ ಬದಲಾವಣೆಯಾಗುವುದಿಲ್ಲ. ಅದನ್ನು ಬದಲಾಯಿಸಲು ಯಾರೂ ಧೈರ್ಯ ಮಾಡಬಾರದು. ಅಷ್ಟೇ ಅಲ್ಲ, ಇತರರಿಗೂ ಬಿಜೆಪಿ ಬದಲಾಯಿಸಲು ಬಿಡುವುದಿಲ್ಲ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ ಮಾತನ್ನು ಪುನರುಚ್ಚರಿಸಿದರು.