ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸುಮಾರು 90,000 ಕೋಟಿ ರೂಪಾಯಿಗಳಷ್ಟು ಖರ್ಚು ಮಾಡಬಹುದೆಂದು ಸುಪ್ರೀಂಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಅಭಿಪ್ರಾಯಪಟ್ಟಿದ್ದಾರೆ. 


COMMERCIAL BREAK
SCROLL TO CONTINUE READING

ಸ್ವರಾಜ್ ಅಭಿಯಾನದ ಭಾಗವಾಗಿ `ರಿಕ್ಲೈಮಿಂಗ್ ರಿಪಬ್ಲಿಕ್` ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಪ್ರಶಾಂತ್ ಭೂಷಣ್ "  2019 ಲೋಕಸಭೆ ಚುನಾವಣೆಯಲ್ಲಿ 1 ಲಕ್ಷ ಕೋಟಿ ರೂ. ಖರ್ಚು ಮಾಡಲಾಗುವುದು ಅದರಲ್ಲಿ ಶೇ. 90ರಷ್ಟು ಹಣ ಬಿಜೆಪಿ ವ್ಯಯ ಮಾಡಲಿದೆ.ಈಗ ಪ್ರಜಾಪ್ರಭುತ್ವ ಮತ್ತು ಚುನಾವಣೆಗಳು ಹಣಕ್ಕೆ ಒತ್ತೆಯಾಳು ಆಗುತ್ತಿದೆ.ಈ ದಿನಗಳಲ್ಲಿ ಚುನಾವಣೆಯಲ್ಲಿ ಹಣವೊಂದೇ ಏಕೈಕ ಸಂಗತಿಯಾಗಿದೆ ಎಂದು ಭೂಷಣ್ ವಿಷಾದ ವ್ಯಕ್ತಪಡಿಸಿದರು.


"ಚುನಾವಣಾ ನಿಧಿಯಲ್ಲಿ ಪಾರದರ್ಶಕತೆಯನ್ನು ತರಲು ಚುನಾವಣಾ ಸುಧಾರಣೆಗಳು ತುರ್ತು ಅವಶ್ಯಕತೆಯಿದೆ. ಜನರು ಯಾವಾಗಲೂ ಗೆಲ್ಲುವ ಅಭ್ಯರ್ಥಿಗೆ ಮತದಾನ ಮಾಡಬಾರದು ಏಕೆಂದರೆ ಅದು ಪ್ರಜಾಪ್ರಭುತ್ವದ ಪ್ರಕ್ರಿಯೆಯನ್ನು ಅಡ್ಡಿಯಾಗುತ್ತದೆ.ನಮ್ಮನ್ನು ಪ್ರತಿನಿಧಿಸಲು ಉತ್ತಮ ಜನಪ್ರತಿನಿಧಿಗಳಿಲ್ಲ. ಏಕೆಂದರೆ ಜನರು ಉತ್ತಮ ಅಭ್ಯರ್ಥಿಗಿಂತ ಹೆಚ್ಚಾಗಿ ಗೆಲ್ಲುವ ಅಭ್ಯರ್ಥಿಗೆ ಮತ ಹಾಕುವುದೇ ಇದಕ್ಕೆ ಕಾರಣ ಎಂದು ಹೇಳಿದರು.


ಪ್ರಜಾಪ್ರಭುತ್ವವನ್ನು ಉಳಿಸುವ ಸಲುವಾಗಿ ಜನರು ಮತದಾನದ ಹಕ್ಕುಗಳನ್ನು ಬಳಸಬೇಕು. ಈಗ ದೇಶವು ಫ್ಯಾಸಿಸ್ಟ್ ರಾಜ್ಯವಾಗಿ ಬದಲಾಗುವ ಅಪಾಯದಲ್ಲಿದೆ.ಅದನ್ನು ಮತದಾನದಿಂದ ಮಾತ್ರ ತಪ್ಪಿಸಬಹುದು ಎಂದು ಭೂಷಣ್ ತಿಳಿಸಿದರು.