VIDEO: ಮೊರಾದಾಬಾದ್ನಲ್ಲಿ ಚುನಾವಣಾಧಿಕಾರಿ ಮೇಲೆ ಕೈ ಮಾಡಿದ ಬಿಜೆಪಿ ಕಾರ್ಯಕರ್ತರು!
ಮೊರಾದಾಬಾದ್ನ ಮತಗಟ್ಟೆ ಸಂಖ್ಯೆ 231 ರಲ್ಲಿ ಮತದಾನಕ್ಕೆಂದು ತೆರಳಿದ್ದ ವೇಳೆ ಓರ್ವ ಮಹಿಳೆ ಮತ ಹಾಕಲು ತೆರಳಿದ್ದ ವೇಳೆ, ಚುನಾವಣಾ ಅಧಿಕಾರಿ ಸ್ವತಃ ಸೈಕಲ್ ಬಟನ್ ಒತ್ತಿ ಮತ ಚಲಾಯಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.
ಸಂಭಾಲ್: 3ನೇ ಹಂತದಲ್ಲಿ ಉತ್ತರ ಪ್ರದೇಶದ 10 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಬೆಳಿಗ್ಗೆಯಿಂದಲೂ ಮತ ಚಲಾಯಿಸಲು ಜನಸಮೂಹ ಹರಿದು ಬರುತ್ತಲೇ ಇದೆ. ಕೆಲವು ಸ್ಥಳಗಳಲ್ಲಿ ಹಿಂಸಾಚಾರದ ಬಗ್ಗೆ ವರದಿಗಳಾಗಿವೆ. ಸಂಭಾಲ್ ಲೋಕಸಭಾ ಕ್ಷೇತ್ರದ ಮೊರಾದಾಬಾದಿನ ಬಿರ್ಲಿ ವಿಧಾನಸಭಾ ವ್ಯಾಪ್ತಿಗೆ ಒಳಪಡುವ ಮತಗಟ್ಟೆ ಸಂಖ್ಯೆ 231 ರಲ್ಲಿ ಬಿಜೆಪಿ ಕಾರ್ಯಕರ್ತರು ಚುನಾವಣಾಧಿಕಾರಿ ಮೇಲೆ ಕೈ ಮಾಡಿದ್ದಾರೆ.
ಚುನಾವಣಾಧಿಕಾರಿ ಮೇಲೆ ಬಿಜೆಪಿ ಕಾರ್ಯಕರ್ತರ ಗಂಭೀರ ಆರೋಪ:
ಮೊರಾದಾಬಾದ್ನ ಮತಗಟ್ಟೆ ಸಂಖ್ಯೆ 231 ರಲ್ಲಿ ಮತದಾನಕ್ಕೆಂದು ತೆರಳಿದ್ದ ವೇಳೆ ಓರ್ವ ಮಹಿಳೆ ಮತ ಹಾಕಲು ತೆರಳಿದ್ದ ವೇಳೆ, ಚುನಾವಣಾ ಅಧಿಕಾರಿ ಸ್ವತಃ ಸೈಕಲ್ ಬಟನ್ ಒತ್ತಿ ಮತ ಚಲಾಯಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಬಳಿಕ ಆ ಅಧಿಕಾರಿಯನ್ನು ಮತಗಟ್ಟೆಯಿಂದ ಹೊರ ಎಳೆದು ತಂದು ಆತನಿಗೆ ಹೊಡೆದಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಆತನನ್ನು ಕಾರ್ಯಕರ್ತರಿಂದ ದೂರ ಕರೆದುಕೊಂಡು ಹೋಗಿದ್ದಾರೆ.
ಆ ವಿಡಿಯೋವನ್ನು ನೀವೂ ನೋಡಿ...