ಸೈಕಲ್ ಬಟನ್ ಒತ್ತಿ ಎಂದ ಮತಗಟ್ಟೆ ಅಧಿಕಾರಿಗೆ ಬಿಜೆಪಿ ಕಾರ್ಯಕರ್ತರಿಂದ ತರಾಟೆ
ಮತಗಟ್ಟೆ ಅಧಿಕಾರಿ ಮೊಹಮದ್ ಜುಬೈರ್ ಅವರು ಮತದಾರರಿಗೆ ಸಮಾಜವಾದಿ ಪಕ್ಷದ ಸೈಕಲ್ ಚಿಹ್ನೆಗೆ ಮತ ಹಾಕುವಂತೆ ಹೇಳುತ್ತಿದ್ದರು ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.
ಮೊರಾದಾಬಾದ್: ಉತ್ತರಪ್ರದೇಶದ ಮೊರಾದಾ ಬಾದ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 231ರಲ್ಲಿ ಮತದಾರರಿಗೆ ಸೈಕಲ್ ಬಟನ್ ಒತ್ತುವಂತೆ ಹೇಳಿದ ಮತಗಟ್ಟೆ ಅಧಿಕಾರಿಯನ್ನು ಬಿಜೆಪಿ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಮತಗಟ್ಟೆ ಅಧಿಕಾರಿ ಮೊಹಮದ್ ಜುಬೈರ್ ಅವರು ಮತದಾರರಿಗೆ ಸಮಾಜವಾದಿ ಪಕ್ಷದ ಸೈಕಲ್ ಚಿಹ್ನೆಗೆ ಮತ ಹಾಕುವಂತೆ ಹೇಳುತ್ತಿದ್ದರು ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.
ಈ ಘಟನೆಯ ವೀಡಿಯೋವನ್ನು ಎಎನ್ಐ ಬಿಡುಗಡೆ ಮಾಡಿದ್ದು, ಇದರಲ್ಲಿ ಬಿಜೆಪಿ ಕಾರ್ಯಕರ್ತರು ಅಧಿಕಾರಿಗೆ ಥಳಿಸುತ್ತಿದ್ದು, ಬಳಿಕ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ತಹಬದಿಗೆ ತರಲು ಯತ್ನಿಸುತ್ತಿರುವುದು ಕಂಡುಬಂದಿದೆ.