ನವದೆಹಲಿ: ಬಾಲಕೋಟ ಉಗ್ರರ ನೆಲೆ ಮೇಲೆ ಭಾರತೀಯ ವಾಯುಸೇನೆ ದಾಳಿ ಮಾಡಿರುವುದನ್ನು ಈಗ ಲೋಕಸಭಾ ಚುನಾವಣೆಗೆ ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಬಿಜೆಪಿ ಯೋಜನೆ ರೂಪಿಸಿದೆ.


COMMERCIAL BREAK
SCROLL TO CONTINUE READING

ಭಾರತೀಯ ವಾಯುಸೇನೆ ದಾಳಿಯ ನಂತರ ಈಗ ಚುನಾವಣಾ ಅಸ್ತ್ರವಾಗಿ ರಾಷ್ಟ್ರೀಯತೆಯನ್ನು ಪ್ರಚಾರಕ್ಕೆ ಬಳಸಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಪ್ರಸೂನ್ ಜೋಷಿ ರಚಿಸಿರುವ 'ಮೋದಿ ಹೈ ತೋ ಮಂಪಕಿನ್ ಹೈ'( ಮೋದಿ ಇದ್ದರೆ ಎಲ್ಲವು ಸಾಧ್ಯ ) ಎನ್ನುವ ಹಾಡನ್ನು ಚುನಾವಣಾ ಪ್ರಚಾರದ ಗೀತೆಯನ್ನಾಗಿ ಬಳಸಿಕೊಳ್ಳಲಿದೆ. 


2014 ರಲ್ಲಿ ಸಾಧಿಸಿದ ಭರ್ಜರಿ ಗೆಲುವನ್ನು ಮತ್ತೆ ಸಾಧಿಸುವ ನಿಟ್ಟಿನಲ್ಲಿ ಬಿಜೆಪಿ ಈಗ ಪಾಕಿಸ್ತಾನದ ಉಗ್ರರ ನೆಲೆ ಮೇಲೆ ವಾಯುಸೇನೆ ದಾಳಿ ನಡೆಸಿರುವ ವಿಚಾರವನ್ನು ಚುನಾವಣಾ ವಸ್ತುವನ್ನಾಗಿ ಬಿಂಬಿಸಲು ಯತ್ನಿಸುತ್ತಿದೆ,ಇದರ ಜೊತೆಗೆ ವಿಕಾಸ್ ಕೂಡ ಪಕ್ಷದ ತಂತ್ರವಾಗಿದೆ ಎಂದು ತಿಳಿದುಬಂದಿದೆ.