ಮತದಾರರ ಮನ ಗೆಲ್ಲಲು ಒಡಿಸ್ಸಾದಲ್ಲಿ ತೆಲುಗು ಸಾಂಗ್ ಹಾಡಿದ ಸಂಬಿತ್ ಪಾತ್ರಾ...! ವೀಡಿಯೊ ವೈರಲ್
ಮತದಾರರ ಮನ ಒಲಿಸಲು ಚುನಾವಣಾ ಸಂದರ್ಭದಲ್ಲಿ ರಾಜಕಾರಣಿಗಳು ಬಗೆ ಬಗೆಯ ಅವತಾರವನ್ನು ತಾಳುತ್ತಾರೆ. ಅದು ಭಾಷಣದ ಮೂಲಕವಾಗಲಿ,ಅಥವಾ ಜನರಿಗೆ ಆಶ್ವಾಸನೆ ನೀಡುವುದರ ಮೂಲಕ ಗಮನ ಸೆಳೆಯಲು ಯತ್ನಿಸುತ್ತಾರೆ.
ನವದೆಹಲಿ: ಮತದಾರರ ಮನ ಒಲಿಸಲು ಚುನಾವಣಾ ಸಂದರ್ಭದಲ್ಲಿ ರಾಜಕಾರಣಿಗಳು ಬಗೆ ಬಗೆಯ ಅವತಾರವನ್ನು ತಾಳುತ್ತಾರೆ. ಅದು ಭಾಷಣದ ಮೂಲಕವಾಗಲಿ ಅಥವಾ ಜನರಿಗೆ ಆಶ್ವಾಸನೆ ನೀಡುವುದರ ಮೂಲಕ ಗಮನ ಸೆಳೆಯಲು ಯತ್ನಿಸುತ್ತಾರೆ.
ಈಗ ಬಿಜೆಪಿ ರಾಷ್ಟ್ರೀಯ ವಕ್ತಾರರಾಗಿದ್ದ ಸಂಬಿತ್ ಪಾತ್ರಾ ಒಡಿಸ್ಸಾದ ಪುರಿಯಲ್ಲಿ ತೆಲುಗು ಮತದಾರರ ಮನ ಗೆಲ್ಲಲು ತೆಲುಗು ಸಿನಿಮಾ ಸಾಂಗ್ ಗಳನ್ನು ಹಾಡಿದ್ದಾರೆ.ಅದರಲ್ಲಿ ಬಂಗಾರು ಕೊಡಿಪೆಟ್ಟಾ ಮತ್ತು ತೆಲುಸಾ ಮನಸಾ ಎನ್ನುವ ಹಾಡುಗಳನ್ನು ಅವರು ಪೆಂಥಾಕಾಟಾ ಎನ್ನುವ ಪ್ರದೇಶದ ಪ್ರಚಾರ ಕಾರ್ಯಕ್ರಮದಲ್ಲಿ ಹಾಡಿದ್ದಾರೆ.
ಈಗ ಈ ವೀಡಿಯೋವನ್ನು ಪಾತ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಈಗ ಈ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸಂಬಿತ್ ಪಾತ್ರಾ ತೆಲುಗು ಹಾಡುಗಳನ್ನು ಹಾಡುತ್ತಿದ್ದರೆ ಅಲ್ಲಿ ನೆರೆದಿದ್ದ ಜನ ಸಮೂಹ ಕೇಕೆ ಸಿಳ್ಳೆ ಗಳನ್ನು ಹಾಕುತ್ತಿತ್ತು.
"ಪುರಿ ಕೂಡಾ ಗಮನಾರ್ಹವಾದ ತೆಲುಗು ಜನಸಂಖ್ಯೆಯನ್ನು ಹೊಂದಿದೆ.ಪ್ರಚಾರದ ಸಂದರ್ಭದಲ್ಲಿ ಜನರು ಹಾಡಿನ ಬೇಡಿಕೆಯನ್ನು ಇಟ್ಟರು, ಅವರಿಗಾಗಿ ಫೇಮಸ್ ತೆಲುಗು ಹಾಡುಗಳನ್ನು ಹಾಡಲಾಯಿತು. ಈ ನೀವು ನಂಬುತ್ತಿಲ್ಲವೇ? ಹಾಗಾದರೆ ಇಲ್ಲಿ ನೋಡಿ ಎಂದು "ಸಂಬಿತ್ ಪಾತ್ರಾ ಟ್ವಿಟ್ ಮಾಡಿದ್ದಾರೆ.