ಜಮ್ಮು ಬಸ್ ನಿಲ್ದಾಣದಲ್ಲಿ ಗ್ರೆನೇಡ್ ದಾಳಿ: ಹಲವರಿಗೆ ಗಾಯ
ಗುರುವಾರ ಬೆಳಿಗ್ಗೆ ಜಮ್ಮುವಿನ ಜನರಲ್ ಬಸ್ ಸ್ಟ್ಯಾಂಡ್ನಲ್ಲಿ ಬಸ್ನ ಒಳಗೆ ಬೃಹತ್ ಸ್ಫೋಟ ಸಂಭವಿಸಿದೆ.
ಜಮ್ಮು: ಗುರುವಾರ ಬೆಳಿಗ್ಗೆ ಜಮ್ಮುವಿನ ಜನರಲ್ ಬಸ್ ಸ್ಟ್ಯಾಂಡ್ನಲ್ಲಿ ಬಸ್ನ ಒಳಗೆ ಬೃಹತ್ ಸ್ಫೋಟ ಸಂಭವಿಸಿದೆ. ಇದೊಂದು ಗ್ರೆನೇಡ್ ದಾಳಿ ಎಂದು ಹೇಳಲಾಗುತ್ತಿದ್ದು, ಪೊಲೀಸ್ ಮತ್ತು ಸಿಆರ್ಪಿಎಫ್ ಇಡೀ ಪ್ರದೇಶವನ್ನು ತನಿಖೆ ನಡೆಸುತ್ತಿದ್ದಾರೆ. ಈ ಸ್ಫೋಟದಲ್ಲಿ ಹಲವರು ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಂತರ-ರಾಜ್ಯ ಬಸ್ ನಿಲ್ದಾಣದಲ್ಲಿ ಹಲವಾರು ಮಂದಿ ಇದ್ದರು ಎನ್ನಲಾಗಿದೆ. "ದೊಡ್ಡ ಶಬ್ದ ಉಂಟಾದಾಗ ಮೊದಲಿಗೆ ಟೈರ್ ಸಿಡಿಯಿತು ಎಂದುಕೊಂಡಿದ್ದೆವು, ನಂತರ ಅದೊಂದು ಗ್ರೆನೇಡ್ ಸ್ಫೋಟ ಸಂಭವಿಸಿದೆ ಎಂದು ತಿಳಿಯಿತು" ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಈ ಗ್ರೆನೇಡ್ ದಾಳಿಯಲ್ಲಿ 18 ಮಂದಿ ಗಾಯಗೊಂಡಿದ್ದಾರೆ ಎಂದು ಜಮ್ಮು ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಎಂ.ಕೆ. ಸಿನ್ಹಾ ದೃಢಪಡಿಸಿದ್ದಾರೆ.
ಇದೊಂದು ಗ್ರೆನೇಡ್ ಸ್ಫೋಟವಾಗಿದೆ. ಬಸ್ ಕೆಳಗೆ ಗ್ರೆನೇಡ್ ಇಡಲಾಗಿತ್ತು. ನಾವು ತನಿಖೆ ನಡೆಸುತ್ತಿದ್ದೇವೆ. ಗಾಯಗೊಂಡವರನ್ನು ಆಸ್ಪತ್ರೆಗೆ ಕಳಿಸಲಾಗಿದೆ ಎಂದು ಎಂ.ಕೆ. ಸಿನ್ಹಾ ತಿಳಿಸಿದ್ದಾರೆ.