ಕೊಲ್ಕತ್ತಾ: ದಕ್ಷಿಣ ಕೋಲ್ಕತ್ತಾದಲ್ಲಿ ಶುಕ್ರವಾರ ಶುಚಿಗೊಳಿಸುವ ಸಂದರ್ಭದಲ್ಲಿ 14 ನವಜಾತ ಶಿಶುಗಳು ಪ್ಲ್ಯಾಸ್ಟಿಕ್ ಚೀಲಗಳಲ್ಲಿ  ದೊರೆತಿವೆ ಎಂದು ಪೊಲೀಸರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಕಾರ್ಮಿಕರನ್ನು ಶುಚಿಗೊಳಿಸುವಾಗ ಪ್ಲಾಸ್ಟಿಕ್ ಚೀಲಗಳಲ್ಲಿ ಕಟ್ಟಿದ ನವಜಾತ ಶಿಶುಗಳ ದೇಹ ರಾಜಾ ರಾಮಮೋಹನ್ ರಾಯ್ ಸರಾನಿಯಲ್ಲಿ ಪತ್ತೆಯಾಗಿವೆ ಎಂದು ಕೊಲ್ಕತ್ತಾದ  ಹಿರಿಯ ಪೋಲಿಸ್ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.



ಈ ಕೃತ್ಯದ ಹಿಂದೆ ಗರ್ಭಪಾತ ರಾಕೆಟ್ ನ  ಕೈವಾಡವಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಶಿಶುಗಳಲ್ಲಿ ಕೆಲವು ದೇಹಗಳು ಅರ್ಧ ಕೊಳೆತ ಸ್ಥಿತಿಯಲ್ಲಿ ಇದ್ದರೆ, ಇನ್ನು ಕೆಲವು ಸಂಪೂರ್ಣವಾಗಿ ಚಿದ್ರವಾಗಿವೆ. ಆದರೆ ಈ ಮೃತ ದೇಹಗಳು ಎಲ್ಲಿಂದ ಬಂದಿವೆ ಎನ್ನುವುದರ ಬಗ್ಗೆ ನಮಗೆ ಯಾವುದೇ ಸುಳಿವು ಇಲ್ಲ ಎಂದು ಪೋಲಿಸ್ ಅಧಿಕಾರಿಗಳು ಹೇಳಿದ್ದಾರೆ. ಈ ನವಜಾತ ಶಿಶುಗಳು ದೊರೆತ ನಂತರ ನಗರದ ಮೇಯರ್ ಸೋವನ್ ಚಟರ್ಜಿ ಮತ್ತು ಕಮೀಷನರ್ ಆಫ್ ಪೊಲೀಸ್ ರಾಜೀವ್ ಕುಮಾರ್ ಸ್ಥಳಕ್ಕೆ ಧಾವಿಸಿ ತನಿಖೆಗೆ ಆದೇಶಿಸಿದ್ದಾರೆ ಎಂದು  ತಿಳಿದು ಬಂದಿದೆ.