ನವದೆಹಲಿ : ರಾಜಕೀಯ ಪ್ರೇರಿತವಾದ 64 ಕೋಟಿ ರೂ. ಮೌಲ್ಯದ ಬೋಫೋರ್ಸ್ ಹಗರಣದ ಆರೋಪಿಗಳ ವಿರುದ್ಧ ಇದ್ದ ಎಲ್ಲಾ ಆರೋಪಗಳನ್ನು 2005ರಲ್ಲಿ ವಜಾಗೊಳಿಸಿದ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿಬಿಐ ಶುಕ್ರವಾರ ಸುಪ್ರೀಂ ಕೋರ್ಟ್ ನಲ್ಲಿ ಮನವಿ ಸಲ್ಲಿಸಿದೆ. 


COMMERCIAL BREAK
SCROLL TO CONTINUE READING

ವರದಿಗಳ ಪ್ರಕಾರ, ಬೋಫೋರ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಯೂರೋಪ್ ಮೂಲದ ಕೈಗಾರಿಕೊದ್ಯಮಿಗಳಾದ ಹಿಂದುಜಾ ಸಹೋದರರನ್ನೂ ಒಳಗೊಂಡಂತೆ ಇತರ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದ ಮೇ 31, 2005 ರ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಇಂದು ಕೇಂದ್ರೀಯ ತನಿಖಾ ಸಂಸ್ಥೆ  ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದೆ. 


12 ವರ್ಷಗಳ ವಿಳಂಬದ ನಂತರ ಅರ್ಜಿ ಸಲ್ಲಿಸಲು ಅಟಾರ್ನಿ ಜನರಲ್ ಕೆ. ವೇಣುಗೋಪಾಲ್ ಇತ್ತೀಚೆಗೆ ವಿರೋಧ ವ್ಯಕ್ತಪಡಿಸಿದ್ದರು. 


ಆದಾಗ್ಯೂ, ಸಮಾಲೋಚನೆಯ ನಂತರ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಲು ಸಿಬಿಐ ಕೆಲವು ಪ್ರಮುಖ ದಾಖಲೆಗಳನ್ನು ಮತ್ತು ಪುರಾವೆಗಳನ್ನು ನೀಡಿದೆ ಎಂದು  ಕಾನೂನು ಅಧಿಕಾರಿಗಳು ತಿಳಿಸಿರುವುದಾಗಿ ಪಿಟಿಐ ಮೂಲಗಳು ಹೇಳಿವೆ.