ಕರ್ನಾಟಕದ ಜೊತೆಗಿತ್ತು ಬಾಲಿವುಡ್ ನಟ ಇರ್ಫಾನ್ ಖಾನ್ ನಂಟು...!
ಬಾಲಿವುಡ್ ನಟ ಇರ್ಫಾನ್ ಖಾನ್ ಏಪ್ರಿಲ್ 29 ರ ಬುಧವಾರ ಬೆಳಿಗ್ಗೆ ಕೊನೆಯುಸಿರೆಳೆದರು. ಒಂದು ದಿನ ಮೊದಲು ಕರುಳಿನ ಸೋಂಕಿನಿಂದಾಗಿ ಅವರನ್ನು ಮುಮ್ಬೈನಲ್ಲಿನ ಕೋಕಿಲಾಬೆನ್ ಆಸ್ಪತ್ರೆಗೆ ಸಾಗಿಸಲಾಯಿತು.
ನವದೆಹಲಿ: ಬಾಲಿವುಡ್ ನಟ ಇರ್ಫಾನ್ ಖಾನ್ ಏಪ್ರಿಲ್ 29 ರ ಬುಧವಾರ ಬೆಳಿಗ್ಗೆ ಕೊನೆಯುಸಿರೆಳೆದರು. ಒಂದು ದಿನ ಮೊದಲು ಕರುಳಿನ ಸೋಂಕಿನಿಂದಾಗಿ ಅವರನ್ನು ಮುಮ್ಬೈನಲ್ಲಿನ ಕೋಕಿಲಾಬೆನ್ ಆಸ್ಪತ್ರೆಗೆ ಸಾಗಿಸಲಾಯಿತು.
ಎರಡು ವರ್ಷಗಳ ಕಾಲ ಅಪರೂಪದ ಕ್ಯಾನ್ಸರ್ ಆಗಿದ್ದ ನ್ಯೂರೋಎಂಡೋಕ್ರೈನ್ ಟ್ಯೂಮರ್ ವಿರುದ್ಧ ಇರ್ಫಾನ್ ಖಾನ್ ಹೋರಾಡಿದರು ಮತ್ತು ಅವರ ಅನಾರೋಗ್ಯದ ಸುದ್ದಿಯನ್ನು ಈ ಮೊದಲು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಅವರ ನಿಧನವಾಗುತ್ತಿದ್ದಂತೆ ಆನ್‌ಲೈನ್‌ನಲ್ಲಿ ಖ್ಯಾತನಾಮರು, ಅಭಿಮಾನಿಗಳು ಮತ್ತು ಹಿತೈಷಿಗಳು ಸೋಷಿಯಲ್ ಮೀಡಿಯಾದಲ್ಲಿ ಅವರಿಗೆ ಸಂತಾಪ ಸೂಚಿಸಿ ಕಂಬನಿ ಮೀಡಿದಿದ್ದಾರೆ.
ಅಚ್ಚರಿ ಎಂದರೆ ಇರ್ಫಾನ್ ಖಾನ್ ಕರ್ನಾಟಕದ ಜೊತೆಗೂ ಕೂಡ ಸಂಬಂಧವನ್ನು ಹೊಂದಿದ್ದರು, ಬದನವಾಳು ಸತ್ಯಾಗ್ರಹದ ನೇತೃತ್ವವಹಿಸಿದ್ದ ಹಿರಿಯ ರಂಗ ಕರ್ಮಿ ಹಾಗೂ ಎನ್ಎಸ್ಡಿಯಲ್ಲಿ ಇರ್ಫಾನ್ ಖಾನ್ ಗುರುಗಳು ಆಗಿದ್ದ ಪ್ರಸನ್ನ ಹೆಗ್ಗೋಡು ಟ್ವಿಟ್ಟರ್ ನಲ್ಲಿ ಇರ್ಫಾನ್ ಖಾನ್ ಸಾವಿನ ಬಗ್ಗೆ ಪ್ರತಿಕ್ರಿಯಿಸಿ ಅವರ ಕೆಲವು ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇರ್ಫಾನ್ ಮತ್ತು ಪತ್ನಿ ಸುತಪಾ ಅವರು ಬದನವಾಳು ಗಾಂಧಿ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿಯೇ ಒಂದು ದಿನ ತಂಗಿದ್ದರು.ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ಚಿತ್ರಗಳು ಇರ್ಫಾನ್ ಖಾನ್ ಅವರ ಸಹ ಅವರ ವ್ಯಕ್ತಿತ್ವಗಳ 'ನೈಜತೆ' ಮತ್ತು ವಿನಮ್ರತೆಗೆ ಹಿಡಿದ ಕನ್ನಡಿಯಾಗಿದೆ.
ಇರ್ಫಾನ್ ಖಾನ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮತ್ತು ನಟರು ಹಾಗೂ ಇತರ ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.ಮುಂಬೈನ ಅಂಧೇರಿಯಲ್ಲಿರುವ ವರ್ಸೋವಾ ಕಬ್ರಾಸ್ತಾನ್‌ನಲ್ಲಿ ಇರ್ಫಾನ್ ಅವರ ಅಂತಿಮ ವಿಧಿಗಳನ್ನು ಇಂದು ನಡೆಸಲಾಯಿತು. ಅವರ ಸಂಬಂಧಿಕರು ಮತ್ತು ಆಪ್ತರು ಅಂತಿಮ ನಮನ ಸಲ್ಲಿಸಿದರು.