ನವದೆಹಲಿ: ಬಾಲಿವುಡ್‌ನ‌ ಖ್ಯಾತ ನಟ ಸನ್ನಿ ಡಿಯೋಲ್‌ ರಾಜಕೀಯ ಪ್ರವೇಶಿಸಿದ್ದು, ಮಂಗಳವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. 


COMMERCIAL BREAK
SCROLL TO CONTINUE READING

ಪಕ್ಷದ ಹಿರಿಯ ನಾಯಕಿ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, ಪಿಯೂಷ್‌ ಗೋಯಲ್‌ ಮತ್ತು ಕ್ಯಾಪ್ಟನ್ ಅಭಿಮನ್ಯು ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದ ಸನ್ನಿ ಡಿಯೋಲ್ ಪಂಜಾಬ್ ರಾಜ್ಯದ ಗುರುದಾಸಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಯಿದೆ. 



ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಯೋಲ್, ನಾನು ಮೋದಿ ಜಿ ಅವರನ್ನು ಬೆಂಬಲಿಸಿ ಅವರೊಂದಿಗೆ ಕೆಲಸ ಮಾಡಲು ಬಿಜೆಪಿ ಸೇರಿದ್ದೇನೆ. ನಾನು ಮಾತನಾಡುವುದಿಲ್ಲ, ನನ್ನ ಕೆಲಸ ಮಾತನಾಡುತ್ತದೆ ಎಂದರು. 



ದಿಗ್ಗಜ ಬಾಲಿವುಡ್‌ ನಟ ಧರ್ಮೇಂದ್ರ ಅವರ ಪುತ್ರರಾಗಿರುವ 62 ರ ಹರೆಯದ ಸನ್ನಿ ಡಿಯೋಲ್‌ ಹಲವು ಬಾಲಿವುಡ್‌ ಚಿತ್ರಗಳಲ್ಲಿ ನಟಿಸಿ ಖ್ಯಾತರಾಗಿದ್ದಾರೆ.